ಬಾಲಿವುಡ್‌ನಲ್ಲಿ ನಟ ಅಮಿತಾಭ್ ಬಚ್ಚನ್ ಅವರ ಕಲಾಸೇವೆಯನ್ನ ಗುರುತಿಸಿ ಅವರಿಗೆ `ಭಾರತ ರತ್ನ ಪ್ರಶಸ್ತಿ’ ನೀಡಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.ಹಿಂದಿ ಚಿತ್ರರಂಗಕ್ಕೆ ಅಮಿತಾಭ್ ಅವರ ಕಲಾಸೇವೆಯ ಕೊಡುಗೆ ಅಪಾರ.
ಪಾತ್ರಗಳೇ ಜೀವ ತುಂಬಿ ನಟಿಸುವ ಮಹಾನ್ ನಟನಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂಬುದು ಕೆಲವು ವರ್ಷಗಳಿಂದ ಕೇಳಿ ಬರುತ್ತಿರುವ ಬಹುದೊಡ್ಡ ಬೇಡಿಕೆ. ಇದೀಗ ಮತ್ತೆಬಿಗ್ ಬಿ ಕಲಾಸೇವೆಯನ್ನ ಗುರುತಿಸಿ, ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಕೊಲ್ಕತ್ತಾ ಚಿತ್ರೋತ್ಸವದಲ್ಲಿ ದೀದಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಅಮಿತಾಭ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಬೆಂಬಲವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

