ಮೈಸೂರು: ಗೊಬ್ಬರ ಸಾಗಿಸುತ್ತಿದ್ದ ಲಾರಿ ಹರಿದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ನಂಜನಗೂಡು ತಾಲೂಕಿನ ಹನುಮನಪುರ ಗೇಟ್ ಬಳಿ ಅಪಘಾತ ಸಂಭವಿಸಿದೆ. ಮೈಸೂರಿನ ಜೆಪಿ ನಗರ ನಿವಾಸಿ ಚಂದ್ರು(38) ಮತ್ತು ನಡುಕಲು ಮೊಳೆ ಗ್ರಾಮದ ಶೀಲಾ(35) ಮೃತಪಟ್ಟವರು ಎಂದು ಹೇಳಲಾಗಿದೆ. ಚುಂಚನಹಳ್ಳಿಯ ಕಡೆಗೆ ಹೋಗುತ್ತಿದ್ದ ಗೊಬ್ಬರ ತುಂಬಿದ್ದ ಲಾರಿ, ಹನುಮನಪುರ ಗೇಟ್ ಬಳಿ ತಿರುವು ಪಡೆದುಕೊಳ್ಳುತ್ತಿದ್ದ ಸವಾರರಿಗೆ ಡಿಕ್ಕಿ ಹೊಡೆದಿದೆ. ಸವಾರ ಚಂದ್ರು, ಹಿಂಬದಿಯಲ್ಲಿ ಕುಳಿತಿದ್ದ ಶೀಲಾ ಕೆಳಗೆ ಬಿದ್ದಿದ್ದಾರೆ. …
Read More »ಸಾಲ ಬಾಧೆ: ಯುವಕ ನೇಣಿಗೆ ಶರಣು
ಗುಂಡ್ಲುಪೇಟೆ(ಚಾಮರಾಜನಗರ): ಸಾಲದ ಸುಳಿಗೆ ಸಿಲುಕಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಫೆ.6ರ ಶುಕ್ರವಾರ ನಡೆದಿದೆ. ತಾಲೂಕಿನ ಬೇಗೂರು ಗ್ರಾಮದ ಸುರೇಶ್(28) ಮೃತ ಯುವಕ. ಈತ ಆಟೋ ಚಾಲಕನಾಗಿದ್ದು, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದ್ದು, ಮಾನಸಿಕ ಹಿಂಸೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೇಗೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರ …
Read More »ಕೊಪ್ಪಳ | ವಿದೇಶಿ ಮಹಿಳೆಯ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಆರೋಪಿಗಳು ದೋಷಿಗಳು ಎಂದು ಘೋಷಿಸಿದ ನ್ಯಾಯಾಲಯ
ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ದೋಷಿಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣ ದಾಖಲಾದ 9 ತಿಂಗಳ ಒಳಗೆ ತೀರ್ಪು ನೀಡಿರುವ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಫೆ.16ರಂದು ಪ್ರಕಟಿಸುವುದಾಗಿ ತಿಳಿಸಿದೆ. ಈ ಪ್ರಕರಣದಲ್ಲಿ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯ ಸಾಯಿ) …
Read More »ಹೆಜಮಾಡಿಯಲ್ಲಿ ತರಲೆಗೈದ ವಿದ್ಯಾರ್ಥಿಗಳಿದ್ದ ವಾಹನ ಮತ್ತೆ ಪಲ್ಟಿ
ಪಡುಬಿದ್ರಿ: ಹೆಜಮಾಡಿಯಲ್ಲಿ ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ನಿಲ್ಲಿಸಿ ಅಸಭ್ಯವಾಗಿ ಸಾರ್ವಜನಿಕರಿಗೆ ಹಾಗೂ ಇತರರ ವಾಹನಗಳಿಗೆ ಅಡ್ಡಿಪಡಿಸಿ ಪ್ರಕರಣವೂ ದಾಖಲಿಸಲ್ಪಟ್ಟಿದ್ದ ಕಾರ್ಕಳ ಮೂಲದ್ದೆನ್ನಲಾದ ಟೆಂಪೋ ಹಂಪಿಗೆ ಹೋಗುವ ದಾರಿ ಮಧ್ಯೆ ಕೂಡ್ಲಿಗೆ ಠಾಣಾ ವ್ಯಾಪ್ತಿಯಲ್ಲಿ ಮಗುಚಿ ಬಿದ್ದು ಅಪಘಾತಕ್ಕೊಳಗಾಗಿದೆ. ವಾಹನದಲ್ಲಿ ಗುರುವಾಯೂರು ಸಮೀಪದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು ಇವರ ಶಿಕ್ಷಕರೋರ್ವರ ಕಾಲಿನ ಮೂಳೆಯ ಮುರಿತವುಂಟಾಗಿರುವುದಾಗಿ ತಿಳಿದು ಬಂದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೈಲಿನಲ್ಲಿ ಮಂಗಳೂರಿಗೆ ಬಂದಿದ್ದು ಕಾರ್ಕಳದ ಈ ಟೆಂಪೋ …
Read More »ರೈತರ ಪಾಲಿನ ಗೊಬ್ಬರ ಕಾಳಸಂತೆಕೋರರ ಪಾಲು: ಅಧಿಕಾರಿಗಳ ಮಿಂಚಿನ ದಾಳಿಗೆ ಗೋಡೌನ್ ಸೀಜ್!
ಬಳ್ಳಾರಿ: ಮುಂದಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬರಲಿರುವ ಭಾರಿ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಳ್ಳಲು ಸಂಚು ರೂಪಿಸಿದ್ದ ಕಾಳಸಂತೆಕೋರರ ಜಾಲವನ್ನು ಕೃಷಿ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಭೇದಿಸಿದ್ದಾರೆ. ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎಡ್ವಿನ್ ಎಂಬುವವರಿಗೆ ಸೇರಿದ ಗೋಡೌನ್ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರೈತರಿಗೆ ವಿತರಿಸಬೇಕಿದ್ದ ಸುಮಾರು 4,000ಕ್ಕೂ ಹೆಚ್ಚು ಚೀಲ ಯೂರಿಯಾ ಗೊಬ್ಬರವನ್ನು ಇಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಸದ್ಯ ಟಿಬಿ ಡ್ಯಾಂ ಗೇಟ್ ದುರಸ್ತಿ ಕಾರ್ಯ …
Read More »ಖಾಸಗಿ ಬಸ್-ಬೈಕ್ ನಡುವೆ ಢಿಕ್ಕಿ; ಇಬ್ಬರು ಮೃತ್ಯು
ಮಡಿಕೇರಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಗೋಣಿಕೊಪ್ಪಲಿನ ಮುಖ್ಯ ರಸ್ತೆಯ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿ ನಡೆದಿದೆ. ಗೋಣಿಕೊಪ್ಪಲಿನ ನಿವಾಸಿ ಸುಲೈಮಾನ್ (32) ಹಾಗೂ ಚೆನ್ನಂಗೊಲ್ಲಿ ನಿವಾಸಿ ಪೌಲೋಸ್ (28) ಮೃತರು. ಸುಲೈಮಾನ್ ಸ್ಥಳದಲ್ಲೇ ಮೃತಪಟ್ಟರೆ, ಪೌಲೋಸ್ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ಕರೆದೊಯ್ಯುವ ಸಂದರ್ಭ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ರಾತ್ರಿ ಖಾಸಗಿ ಬಸ್ ಬೆಂಗಳೂರಿಗೆ …
Read More »ಹುಬ್ಬಳ್ಳಿ: ಹಿಂದೂ ಧರ್ಮಕ್ಕೆ ಅವಮಾನ; ಸ್ಟೇಟಸ್ ಹಾಕಿದ್ದ ಮುಸ್ಲಿಂ ಯುವಕನ ಬಂಧನ!
ಯೂಟ್ಯೂಬರ್ ಒಬ್ಬ ಹಿಂದೂ ದೇವರ ಬಳಿ ಕಲ್ಮಾ ಹೇಳಿದ್ದ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಆರೋಪ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕ ದಾದಾಪೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನೂರಾನಿ ಫ್ಲ್ಯಾಟ್ ನಿವಾಸಿ 27 ವರ್ಷದ ದಾದಾಪೀರ್ ಎಂಬಾತನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾದಾಪೀರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಳೆ ಹುಬ್ಬಳ್ಳಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಳೆದ …
Read More »ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ: ವರ, ಪೋಷಕರು ಸೇರಿ 6 ಜನರ ವಿರುದ್ಧ ಎಫ್ ಐಆರ್ ದಾಖಲು
ಬೀದರ್: ಅಪ್ರಾಪ್ತ ಬಾಲಕಿಯೊಂದಿಗೆ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ ಹಾಗೂ ಆತನ ಪೋಷಕರು ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ಬೀದರ್ ನ ಜನವಾಡದಲ್ಲಿ ನಡೆದಿದೆ. ಜನವಾಡದ ತಾಲೂಕಿನ ಗ್ರಾಮವೊಂದರ ಚರ್ಚ್ ನಲ್ಲಿ 17 ವರ್ಷದ 8 ತಿಂಗಳ ಬಾಲಕಿಯೊಂದಿಗೆ 24 ವರ್ಷದ ಯುವಕ ಮದುವೆಯಾಗಿದ್ದ.ಖಚಿತ ಮಾಹಿತಿ ಮೇರೆಗೆ ಗ್ರಾಮ ಪಂಚಾಯತ್ ಪಿಡಿ, ಬಾಲಕಿ ಶಾಲಾ ದಾಖಲೆ, ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅಪ್ರಾಪ್ತೆ ಎಂಬುದು …
Read More »ಮಂಡ್ಯದಲ್ಲಿ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಲೇ ಬಸ್ ಓಡಿಸಿದ ‘KSRTC’ ಚಾಲಕ!
ಮಂಡ್ಯದಲ್ಲಿ ಕೆಎಸ್ಆರ್ಟಿಸಿ ಚಾಲಕನೊಬ್ಬ ಮೊಬೈಲ್ ನಲ್ಲಿ ರಿಲ್ಸ್ ನೋಡಿಕೊಂಡು ಬಸ್ ಓಡಿಸುವ ವಿಡಿಯೋ ವೈರಲಾಗಿದೆ. ಮಳವಳ್ಳಿಯಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಮಹೇಶ್ ಮೊಬೈಲ್ ನಲ್ಲಿ ರೀಲ್ ವೀಕ್ಷಣೆ ಮಾಡಿದ್ದಾರೆ. ಚಾಲಕನ ನಿರ್ಲಕ್ಷ್ಯ ಚಾಲನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ ಈ ರೀತಿ ಬೇಜವಾಬ್ದಾರಿ ತೋರಿದ್ದಾರೆ. ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಾಲಕನ ವಿರುದ್ಧ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಸಹ ಆಗ್ರಹಿಸಿದ್ದಾರೆ.
Read More »ದಾವಣಗೆರೆಯಲ್ಲಿ ಭೀಕರ ಅಪಘಾತ : 2 ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವು!
ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದ ಸಮೀಪ ನಡೆದಿದೆ. ನಯಾಜ್ ಖಾನ್ ಕಾರು ಅಪಘಾತದಲ್ಲಿ ಮೃತ ಚಾಲಕ ಎಂದು ತಿಳಿದುಬಂದಿದೆ. ಚನ್ನಗಿರಿ ತಾಲೂಕಿನ ನಲ್ಲೂರಿನಿಂದ ಅಡಿಕೆ ವ್ಯಾಪರಕ್ಕೆಂದು ತೆರಳುತ್ತಿದ್ದ ಒಂದು ಕಾರಿಗೆ ಪಾಂಡೋಮಟ್ಟಿ ಕಡೆಯಿಂದ ಚನ್ನಗಿರಿಗೆ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





