Breaking News

BigTv News

ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್‌ ರೈಸ್‌ ಮಾರಿ ಬದುಕೋದೇ ಬೆಟರ್‌ ಎಂದ ಕೊಪ್ಪಳ PC!

ವರ್ಷಪೂರ್ತಿ ಡ್ಯೂಟಿ ಮಾಡಬೇಕು, ಒಂದು ದಿನವೂ ರಜೆಯಿಲ್ಲ. ಈ ಕೆಲಸಕ್ಕಿಂತ ಎಗ್‌ ರೈಸ್‌ ಮಾಡಿ ಬದುಕೋದೆ ಬೆಟರ್‌’ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ (PC) ವ್ಯಾಟ್ಸ್‌ ಆಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿರುವುವುದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆಪೊಲೀಸ್‌ ಸಿಬ್ಬಂದಿ ಬ್ರಹ್ಮಾನಂದ ಈ ಸಂದೇಶ ಬರೆದುಕೊಂಡಿದ್ದು ‘ವರ್ಷದ 365 ದಿನಗಳೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ರಜೆ ಹಾಗೂ ಹಬ್ಬ-ಹರಿದಿನಗಳಲ್ಲಿ ರಜೆಯ ಅವಕಾಶ ಕಡಿಮೆಯಾಗಿದೆ’ ಎಂದಿದ್ದಾರೆ. ‘ಈ ವರ್ಷದಲ್ಲಿ …

Read More »

ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿಯ ತವರು ಮನೆಯವರು ಬುದ್ಧಿ ಹೇಳಿದ್ದರು. ಆ ನಂತರವೂ ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ. ಜ.31ರಂದು ರಾತ್ರಿ ತಲೆ ಬೋಳಿಸಿ, ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಆರೋಪಿ ಉಮೇಶ್ ಅವರನ್ನು ಬಂಧಿಸಲಾಗಿದೆ. …

Read More »

₹7 ಲಕ್ಷದ ಕಾರಿಗೆ ಬರೋಬ್ಬರಿ 2ಕೋಟಿಯ ನಂಬರ್ ಪ್ಲೇಟ್ ಖರೀದಿಸಿದ ವ್ಯಕ್ತಿ

ಆಂಧ್ರದ ವ್ಯಕ್ತಿಯೊಬ್ಬರು ಬರೋಬ್ಬರಿ ₹2.08 ಕೋಟಿ ರೂಪಾಯಿಗೆ ನಂಬರ್‌ ಪ್ಲೇಟ್‌ ಅನ್ನು ಖರೀದಿಸಿರುವ ಘಟನೆ ವರದಿಯಾಗಿದೆ. ಈ ಕಾರಿನ ನಂಬರ್‌ “DDC 001″ ಅನ್ನು 2.08 ಕೋಟಿಗೆ ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಮುಟ್ಟಿದೆ, ಇದು ದೇಶದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಆಗಿದೆ.”DDC 001” ಪ್ಲೇಟ್ ಈ ಹಿಂದೆ ಬಿಗ್ ಬಾಯ್ ಟಾಯ್ಜ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜತಿನ್ ಅಹುಜಾ ಅವರ ಒಡೆತನದಲ್ಲಿದೆ. …

Read More »

ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ. ಉಡಾನ್‌ ಕ್ಯಾಶ್‌ ಕಲೆಕ್ಟಿಂಗ್‌ ಖಾಸಗಿ ಕಂಪನಿಯ ಹಣ ಸಂಗ್ರಹ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಕೈಲಾಶ್‌ ಭಾನುವಾರ ವಿವಿಧ ಶಾಖೆಗಳಿಗೆ ತೆರಳಿ ₹31,38,625 ಸಂಗ್ರಹಿಸಿ ಸ್ಕೂಟರ್‌ ಡಿಕ್ಕಿಯಲ್ಲಿ ಇಟ್ಟುಕೊಂಡು ಹೊರಟಿದ್ದರು. ಎರಡು ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು …

Read More »

ಅಜ್ಜಿ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಸಾವು

ಧಾರವಾಡ: ಅಜ್ಜಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಸಮೀಪ ನಡೆದಿದೆ.ಧಾರವಾಡ ನಿವಾಸಿ ವಿನಾಯಕ(23) ಮೃತಪಟ್ಟವರು ಎಂದು ಹೇಳಲಾಗಿದೆ. ವಿನಾಯಕನ ಅಜ್ಜಿಯ ಸಂಸ್ಕಾರ ಸುಳ್ಳ ಗ್ರಾಮದಲ್ಲಿ ನಡೆಸಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೈಕ್ ನಲ್ಲಿ ಸುಳ್ಳ ಗ್ರಾಮಕ್ಕೆ ಹೋಗಿದ್ದ ವಿನಾಯಕ ಅಂತಿಮ ವಿಧಿವಿಧಾನ ಮುಗಿದ ನಂತರ ಧಾರವಾಡಕ್ಕೆ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ. …

Read More »

ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ

ಮುಂಬೈ: ಅಧಿಕಾರದ ಆಸೆ ಮುಂದೆ ರಕ್ತಸಂಬಂಧವೂ ನಗಣ್ಯ ಎನ್ನುವುದನ್ನು ಇಂತಹ ಪಾಪಿ ತಂದೆ ನೋಡಿ ಹೇಳುವುದು ಎನಿಸುತ್ತದೆ. ಮಹಾರಾಷ್ಟ್ರದಲ್ಲಿ 3 ಮಕ್ಕಳ ತಂದೆಯೊಬ್ಬ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು ತನ್ನದೇ ಮಗುವನ್ನು ಕೊಂದ ಆಘಾತಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರದ ನಾಂದೇಡ್‌ನ ಕೆರೂರು ಗ್ರಾಮದಲ್ಲಿ ವಿರಾಟ್‌ ಸಲೂನ್ ನಡೆಸುತ್ತಿದ್ದ ಪಾಂಡುರಂಗ ಕೊಂಡಮಂಗಲೆ ( 28) ಎಂಬಾತನಿಗೆ 1 ಗಂಡು, 2 ಹೆಣ್ಣುಮಕ್ಕಳು. ಈ ವರ್ಷದ …

Read More »

ಕಾಸರಗೋಡು| ತಂದೆಯಿಂದ ಮಗಳ ಕೊಲೆ: ಆರೋಪಿ ಸೆರೆ

18 ವರ್ಷದ ಮಗಳನ್ನು ತಂದೆಯೇ ಕಡಿದು ಕೊಲೆಗೈದಿದ್ದಾನೆ ಎನ್ನಲಾದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ.ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ …

Read More »

ದೊಡ್ಡಬಳ್ಳಾಪುರ: ಶನಿಮಹಾತ್ಮ ದೇವಸ್ಥಾನದಲ್ಲಿ ಸುಪ್ರಭಾತ ಹಾಡು ಹಾಕಿದ್ದಕ್ಕೆ ಮುಸ್ಲಿಂ ಯುವಕನಿಂದ ಗಲಾಟೆ

ದೇವಸ್ಥಾನದಲ್ಲಿ ಸುಪ್ರಭಾತ ಹಾಡು ಹಾಕಿದ್ದಕ್ಕೆ ಯುವಕನೋರ್ವ ಹಿಂದೂಗಳ ಮೇಲೆ ಗಲಾಟೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಶಾಂತಿ ನಗರದಲ್ಲಿರುವ ಶನಿಮಹಾತ್ಮ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತ ಹಾಡು ಹಾಕಲಾಗಿತ್ತು. ಇದಕ್ಕೆ ಮುಸ್ಲಿಂ ಯುವಕನೋರ್ವ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮನೆಯಲ್ಲಿ ತಾಯಿ ಮಲಗಿದ್ದಾಳೆ ಸೌಂಡ್ ಕಡಿಮೆ ಮಾಡಿ, ಇಲ್ಲವೆ ಆಫ್ ಮಾಡಿ ಎಂದು ಧಮ್ಕಿ ಹಾಕಿದ್ದಾನೆ. ಇದಕ್ಕೆ ಆಕ್ರೋಶಗೊಂಡು ಹಿಂದೂಗಳು …

Read More »

ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಕೇಸ್: ಕಾಂಗ್ರೆಸ್ ಮುಖಂಡನ ಮತ್ತಿಬ್ಬರು ಪುತ್ರರು ಅರೆಸ್ಟ್

ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನ ಇನ್ನಿಬ್ಬರು ಪುತ್ರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಅಯೂಬ್ ಪುತ್ರರಾದ ಹುಸೇನ್(26), ಹಮ್ಜಾ(24) ಅವರನ್ನು ವಶಕ್ಕೆ ಪಡೆಯಲಾಗಿದೆ. ಜನವರಿ 31 ರಂದು ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು.ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಾಯತ್ರಿ ಕಾನ್ಸ್ಟೇಬಲ್ ಗಳಾದ ಹರೀಶ್ ಮತ್ತು ಕೆಂಚಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಪ್ರಕರಣ …

Read More »

ಕುಳಗೇರಿ ಕ್ರಾಸ್: ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ,…ಪೊಲೀಸರಿಂದ ಶೋಧ

ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮದ ಹೊರವಲಯದ ನಿರಾಣ ಸಕ್ಕರೆ ಕಾರ್ಖಾನೆ ಬಳಿ ಗೌರಿಶಂಕರ್ ಅವರ ತೋಟದಲ್ಲಿ ನಡೆದಿದೆ. ಕಾಕನೂರ ಗ್ರಾಮದ ಸೋಮಶೇಖರ ಹನಮಂತ ಕಿಳ್ಳಿಕ್ಯಾತರ ವಯಾ (45) ಎಂದು ಗುರಿತಿಸಲಾಗಿದ್ದು ರವಿವಾರ ರಾತ್ರಿ ಈ ಘಟನೆ ನಡೆದಿರಬಹುದು ಎಂದು ಹೇಳಿಲಾಗುತ್ತಿದೆ.ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆ ಮಾಡಿದ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಸಂಬಂದ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ …

Read More »