ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಿತ್ತೂರರಾಣಿ ಚನ್ನಮ್ಮ ವೃತ್ತದ ಸಮೀಪದಲ್ಲಿರುವ ರಾಘವೇಂದ್ರ ಸ್ವೀಟ್ಸ್ ಅಂಗಡಿಯಲ್ಲಿ ₹10 ಸಾವಿರ ನಗದು ಹಾಗೂ ಗುಟಕಾ ಚೀಟ್ಗಳನ್ನು ಕಳವು ಮಾಡಲಾಗಿದೆ. ಇದೇ ಸಾಲಿನಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಮೆಡಿಕಲ್ ಸ್ಟೋರ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು ₹30 ಸಾವಿರ ನಗದು ಹಾಗೂ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನೂ ಕಳವು ಮಾಡಿದ್ದಾರೆ. ಕಳ್ಳತನದ ದೃಶ್ಯಗಳು ಅಂಗಡಿಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ …
Read More »ಪರಪ್ಪನ ಅಗ್ರಹಾರ ಜೈಲಲ್ಲಿ ದಿಢೀರ್ ದಾಳಿ ವೇಳೆ ನಿಷೇಧಿತ ವಸ್ತುಗಳು ಪತ್ತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರಿಶೀಲನೆ ಮುಂದುವರೆದಿದೆ. ಕೈದಿಗಳ ಬ್ಯಾರಕ್ ಮೇಲೆ ದಾಳಿ ಮಾಡಿ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೈಲಿನ ಟವರ್ 1ರ 6ನೇ ಬ್ಯಾರಕ್ 4ನೇ ಕೊಠಡಿಯ ಮೇಲೆ ದಾಳಿ ಮಾಡಲಾಗಿದೆ. 8 ಮೊಬೈಲ್, 1 ಸಿಮ್, 2 ಚಾರ್ಜರ್, 3 ಈಯರ್ ಫೋನ್ ಪತ್ತೆಯಾಗಿವೆ. ಕಳೆದ ಎರಡು ತಿಂಗಳಿನಿಂದ 200 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಸೀಜ್ ಮಾಡಲಾಗಿದೆ. ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕ …
Read More »400 ಕೋಟಿ ರಾಬರಿ ಕೇಸ್ ನಲ್ಲಿ ಫಾರ್ಚುನರ್ ಕಾರು ಚಾಲಕ ಅರೆಸ್ಟ್ : ಬಂಧಿತರ ಸಂಖ್ಯೆ 7ಕ್ಕೆ ಏರಿಕೆ!
ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಹಾರಾಷ್ಟ್ರ ಪೊಲೀಸರು ಫಾರ್ಚುನರ್ ಕಾರು ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ಫಾರ್ಚುನರ್ ಕಾರು ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. 400 ಕೋಟಿ ಹಣ ರಾಬರಿ ಪ್ರಕರಣದಲ್ಲಿ ಬಂದಿತ ಆರೋಪಿಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಪಾರು ಚಾಲಕನನ್ನು ಬಂಧಿಸಿ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. …
Read More »ಶಿವಮೊಗ್ಗದ ನಂದಿನಿ ಡೈರಿಯಿಂದ ಹಾಲಿನ ಪ್ಯಾಕೆಟ್ಗಳು ಕಳವು
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ನಂದಿನಿ ಹಾಲಿನ ಡೈರಿಯ ಹೊರಗೆ ಇರಿಸಲಾಗಿದ್ದ ಹಾಲಿನ ಪ್ಯಾಕೆಟ್ಗಳನ್ನು ಅಪರಿಚಿತ ವ್ಯಕ್ತಿಗಳು ಕದ್ದಿರುವ ಅಪರೂಪದ ಪ್ರಕರಣವಿದು. ದೂರಿನ ಪ್ರಕಾರ, ಹಾಲಿನ ಕ್ರೇಟ್ಗಳನ್ನು ಸಾಮಾನ್ಯವಾಗಿ ಮುಂಜಾನೆ ಡೈರಿಯ ಮುಂದೆ ಇಡಲಾಗುತ್ತದೆ.ಈ ಸಮಯದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಬೈಕ್ನಲ್ಲಿ ಬಂದು, ಯಾರೂ ಇಲ್ಲದ ಸ್ಥಳವನ್ನು ಬಳಸಿಕೊಂಡು ಹಾಲಿನ ಪ್ಯಾಕೆಟ್ಗಳೊಂದಿಗೆ ಪರಾರಿಯಾಗಿದ್ದಾನೆ. ಡೈರಿಯ ಮುಂಭಾಗದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಕೃತ್ಯ ಸೆರೆಯಾಗಿದೆ. ಪೊಲೀಸರು ಶಂಕಿತನ ಹುಡುಕಾಟ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳ …
Read More »ಗೌರಿಬಿದನೂರು | ರಸ್ತೆ ಅಪಘಾತ, ಇಬ್ಬರ ಸಾವು
ನಗರದ ಇಡಗೂರು ರಸ್ತೆಯಲ್ಲಿ ಮಂಗಳ ಬೆಳ್ಳಂಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಡಗೂರು ಗ್ರಾಮದ ನಾಗರಾಜು (37) ಮತ್ತು ಮಿಥುನ್ (22) ಮೃತರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಮುಂಜಾನೆ ಸುಮಾರು 5 ಗಂಟೆಗೆ ಗ್ರಾಮದ ನಾಗರಾಜು ಮತ್ತು ಮಿಥುನ್ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ನಲ್ಲಿದ್ದ ಇಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. …
Read More »ದೊಡ್ಡಬಳ್ಳಾಪುರ | ಡಿವೈಡರ್ಗೆ ಬೈಕ್ ಡಿಕ್ಕಿ: ಸವಾರ ಸಾವು
ರಾಜ್ಯ ಹೆದ್ದಾರಿಯ ಡಿ.ಕ್ರಾಸ್ ಸಮೀಪದ ಕೃಷಿ ಇಲಾಖೆ ಕಚೇರಿ ಮುಂದೆ ಮಂಗಳವಾರದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿನ ಡಿವೈಡರ್ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರ ಮೂಲದ ಸನೋಜ್ ಪಂಡಿತ್ (30) ಎಂದು ಗುರುತಿಸಲಾಗಿದೆ. ಮೃತನು ರಾಜಾನುಕುಂಟೆ ನಿವಾಸಿ ಪ್ರಸನ್ನ ಅವರೊಂದಿಗೆ ಗೌರಿಬಿದನೂರಿನಲ್ಲಿರುವ ಜಮೀನಿನಲ್ಲಿ ಕೆಲಸ ಮುಗಿಸಿ ಮತ್ತೆ ರಾಜಾನುಕುಂಟೆಗೆ ತೆರಳುವ ವೇಳೆ ಈ ಅಪಘಾತ ನಡೆದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ನಾಗಮಂಗಲ | ಭೂಕಬಳಿಕೆ ಪ್ರಕರಣ: 6 ಆರೋಪಿಗಳು ಪೊಲೀಸ್ ವಶಕ್ಕೆ
ನಾಗಮಂಗಲ: ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿದ್ದ 6 ಮಂದಿ ಆರೋಪಿಗಳನ್ನು ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಚಲುವರಾಜು ನೇತೃತ್ವದ ತಂಡ ನಾಲ್ಕು ದಿನಗಳ ಪೊಲೀಸ್ ವಶಕ್ಕೆ ಪಡೆದಿದೆ.ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಪ್ರಕರಣವನ್ನು ತನಿಖೆ ನಡೆಸಲು ಜಿಲ್ಲಾಡಳಿತ ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಚಲುವರಾಜು ನೇತೃತ್ವದಲ್ಲಿ ತಂಡ ರಚಿಸಿತ್ತು. ತನಿಖಾಧಿಕಾರಿ …
Read More »ಉದ್ಯಮಿ ಮನೆಯಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ಕಳವು: 20 ದಿನದ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ ದಂಪತಿಯಿಂದ ಕೃತ್ಯ
ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಉದ್ಯಮಿ ಮನೆಯಲ್ಲಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ದೋಚಿ ಕೆಲಸಗಾರರು ಪರಾರಿಯಾಗಿದ್ದಾರೆ. ಬಿಲ್ಡರ್ ಶಿವಕುಮಾರ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಕಮಲಾ ದಂಪತಿ ಕಳ್ಳತನ ಮಾಡಿದ್ದಾರೆ/ 11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಕಳವು ಮಾಡಲಾಗಿದೆ. 20 ದಿನದ ಹಿಂದೆಯಷ್ಟೇ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದರು. ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ …
Read More »ರಾಜ್ಯದಲ್ಲಿ ಮತ್ತೊಂದು ದರೋಡೆ: ಬೆಂಗಳೂರಿನಲ್ಲಿ ಗನ್ ತೋರಿಸಿ ಚಿನ್ನಾಭರಣ ಲೂಟಿ
ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಬೆಂಗಳೂರಿನ ದಾಸನಪುರದಲ್ಲಿ ಚಿನ್ನದಂಗಡಿಗೆ ನುಗ್ಗಿದ ಖದೀಮರು ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ದಾಸನಪುರದಲ್ಲಿ ರಾಮದೇವ್ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆ. ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಅಂಗಡಿ ಕ್ಲೋಸ್ ಮಾಡಲು ಮುಂದಾದ ವೇಳೆ ಗನ್ ಹಿಡಿದು ಅಂಗಡಿಗೆ ನುಗ್ಗಿದ್ದರು. ಗನ್ ಹಿಡಿದು ಹೆದರಿಸಿ ಟೇಬಲ್ …
Read More »ರೆಸಾರ್ಟ್ ನ ಗೂಗಲ್ ಬಿಸಿನೆಸ್ ಖಾತೆ ಹ್ಯಾಕ್ ಮಾಡಿ ವಂಚನೆ
ಮಂಗಳೂರು: ನಗರದ ರೆಸಾರ್ಟ್ ಒಂದರ ಗೂಗಲ್ ಬಿಸಿನೆಸ್ ಖಾತೆಯನ್ನು ಹ್ಯಾಕ್ ಮಾಡಿ ಪ್ರವಾಸಿಗರಿಗೆ ವಂಚನೆ ಮಾಡುತ್ತಿರುವ ಬಗ್ಗೆ ರೆಸಾರ್ಟ್ ಪ್ರಮುಖರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆಉಳ್ಳಾಲದಲ್ಲಿರುವ ಬೀಚ್ ರೆಸಾರ್ಟನ್ನು ಪ್ರವಾಸಿಗರು ಇಮೇಲ್, ಮೊಬೈಲ್ ನಂಬರ್ಗಳ ಮೂಲಕ ಸಂಪರ್ಕಿಸಿ ಮುಂಗಡವಾಗಿ ಕಾದಿರಿಸುತ್ತಿದ್ದರು. 2025ರ ನ. 10ರಂದು ರೆಸಾರ್ಟ್ನ ಅಧಿಕೃತ ಗೂಗಲ್ ಬಿಸಿನೆಸ್ನ ಎಕ್ಸೆಸ್ನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡುವ ಮೂಲಕ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಸಂಸ್ಥೆಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





