Breaking News

ಮಹಿಳೆಯ ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕುಂಬಳೆ: ನಾಲ್ಕು ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದ ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ (32) ಅವರನ್ನು ಚಿನ್ನಕ್ಕಾಗಿ ಕುತ್ತಿಗೆ ಬಿಗಿದು ಕೊಲೆಗೈದು ತಲೆಮರೆಸಿಕೊಂಡಿದ್ದ ವಯನಾಡು ವೈತಿರಿ ನಿವಾಸಿ ಎಂ. ಆಂಟೋ ಸೆಬಾಸ್ಟಿಯನ್‌ (44) ಎಂಬಾತನನ್ನು ಬದಿಯಡ್ಕ ಪೊಲೀಸರು ವಯನಾಡಿನಿಂದ ಬಂಧಿಸಿದ್ದಾರೆ.ಈ ಇಬ್ಬರು ಜತೆಯಾಗಿ ಶೇಣಿಯಲ್ಲಿ ವಾಸಿಸುತ್ತಿದ್ದರು. 2023 ಜನವರಿ 27ರಂದು ಬೆಳಗ್ಗೆ ನೀತುಕೃಷ್ಣ ಅವರ ಕೊಲೆ ನಡೆದಿತ್ತು. ಆಕೆಯ ಒಂದು ಪವನಿನ ಬ್ರೇಸ್‌ಲೆಟ್‌ಗಾಗಿ ಉಂಟಾದ ವಿವಾದ ಕೊಲೆಯಲ್ಲಿ ಕೊನೆಗೊಂಡಿತ್ತು. ಆರೋಪಿಯನ್ನು ತಿರುವನಂತಪುರದಿಂದ ಬಂಧಿಸ ಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಾತ ತಲೆಮರೆಸಿ ಕೊಂಡಿದ್ದ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *