Breaking News

BigTv News

ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ; ಎರಡು ಮಕ್ಕಳ ತಾಯಿ ಸಲ್ಮಾಳನ್ನು ಕೊಂದು ಪ್ರಿಯತಮ ಆತ್ಮಹತ್ಯೆ!

ಅಕ್ರಮ ಸಂಬಂಧ ವಿಚಾರ ಬಹಿರಂಗವಾಗಿ ಗಲಾಟೆಯಾಗಿದ್ದರಿಂದ ವಿವಾಹಿತನೊಬ್ಬ ತಾನೂ ಸಂಬಂಧ ಹೊಂದಿದ್ದ ಪ್ರೇಯಸಿಯನ್ನು ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆಂಧ್ರ ಮೂಲದ ಬಾಬಾಜಾನ್ ಮದುವೆಯಾಗಿ ಇಬ್ಬರು ಮಕ್ಕಳಿದ್ದು ಚಿಂತಾಮಣಿಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದನು. ಬಾಬಾಜಾನ್ ಗೆ ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ ನಿವಾಸಿ, ಇಬ್ಬರು ಮಕ್ಕಳ ತಾಯಿ ಸಲ್ಮಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದು ಎರಡು ಕುಟುಂಬಗಳ ಮಧ್ಯೆ ಈ ಹಿಂದೆ …

Read More »

ಬೆಂಗಳೂರು : ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸಾವು

ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ನಶೆಯಲ್ಲಿ ಅಪಘಾತ ಮಾಡಿ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದೆ.ಪ್ರಶಾಂತ್ (28) ಸಾವನ್ನಪ್ಪಿದ್ದು, ರೋಷನ್ ಹೆಗ್ಗಡಗೆ ಗಂಭೀರವಾದ ಗಾಯಗಳಾಗಿವೆ. ಕೊಲೆ ಮಾಡುತ್ತಿರುವ ದೃಶ್ಯ ಕಾರಿನ ಮುಂಭಾಗದ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಶಾಂತನ ಕೊಲೆ ಮಾಡಲಾಗಿದೆ ಅಂತ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ. …

Read More »

ಹಳೇ ದ್ವೇಷ: ಪರಿಚಯಸ್ಥರಿಂದಲೇ ರೌಡಿಶೀಟರ್‌ ಹತ್ಯೆ

ಬೆಂಗಳೂರು: ಹಳೇ ದ್ವೇಷ ಹಿನ್ನೆಲೆ ಯಲ್ಲಿ ಪರಿಚಯಸ್ಥರೇ ರೌಡಿ ಶೀಟರ್‌ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮಾದ ನಾಯಕ ನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಂಗೊಂಡನಹಳ್ಳಿ ನಿವಾಸಿ ನಾಗ ಅಲಿಯಾಸ್‌ ಆಟೋ ನಾಗ (32) ಕೊಲೆಯಾದ ರೌಡಿಶೀಟರ್‌. ನೆಲಮಂಗಲದ ಫಾರ್ಮ್ ಹೌಸ್‌ನಲ್ಲಿ ಭಾನುವಾರ ಮಧ್ಯಾಹ್ನ ದುರ್ಘ‌ಟನೆ ನಡೆದಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಕೊಲೆಯಾದ ನಾಗ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈತನ ವಿರುದ್ಧ ನಗರ ವಿವಿಧ ಠಾಣೆಗಳಲ್ಲಿ …

Read More »

ಬೆಂಗಳೂರು | ರೈಲಿಗೆ ತಾಗಿದ ಬಿಎಂಟಿಸಿ ಬಸ್‌: ತಪ್ಪಿದ ದುರಂತ

ಸಾದರಮಂಗಲದಲ್ಲಿ ನಿರ್ಲಕ್ಷ್ಯದಿಂದ ಹಿಂದಕ್ಕೆ ಚಲಾಯಿಸಿದ ಬಿಎಂಟಿಸಿ ಬಸ್‌ಗೆ ರೈಲು ತಾಗಿದ್ದು, ಬಸ್‌ನ ಹಿಂಭಾಗಕ್ಕೆ ಹಾನಿಯಾಗಿದೆ. ಬಸ್‌ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ದುರಂತ ತಪ್ಪಿದೆ. ರೈಲಿನ ಹಳಿ ಇಲ್ಲಿ ರಸ್ತೆ ಅಕ್ಕ‍ಪಕ್ಕದಲ್ಲಿಯೇ ಹಾದು ಹೊರಗುತ್ತದೆ.ಸಾದರಮಂಗಲದ ಬಿಎಂಟಿಸಿ ಘಟಕದಿಂದ (51ನೇ ಘಟಕ) ಕಾಡುಗೋಡಿಗೆ ಬಸ್‌ ಸೋಮವಾರ ಬೆಳಿಗ್ಗೆ 9.15ರ ವೇಳೆಗೆ ಹೊರಟಿತ್ತು. ಅಲ್ಲೇ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಬಸ್‌ ಅನ್ನು ಹಿಂದಕ್ಕೆ ತೆಗೆಯುವ ವೇಳೆ ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ಹಳಿ …

Read More »

“ಹಕ್ಕುಪತ್ರ ಜೊತೆಗೆ ಕ್ವಾಟರ್ ಬಾಟಲಿ ಹಂಚುವ ಸಂದೇಶವೇ?” – ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ

ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಕ್ಕುಪತ್ರ ವಿತರಣೆ ಬಗ್ಗೆ ನಮ್ಮ ಅಭ್ಯಂತರವೇನಿಲ್ಲ, ಆದರೆ ಹಕ್ಕುಪತ್ರದ ಜೊತೆ ಕ್ವಾಟರ್ ಬಾಟಲಿ ಹಂಚುವ ಸಂಸ್ಕೃತಿ ಯಾವ ಸಂದೇಶ ನೀಡುತ್ತದೆ? ಎಂದು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಜನರನ್ನು ಮದ್ಯ ಸೇವನೆಗೆ ಕರೆಸುವ ಉದ್ದೇಶವೇನು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆ ನಿರ್ಮಾಣ ಕಾರ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದು, …

Read More »

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣು : ಪತಿಯೇ ಕೊಲೆ ಮಾಡಿರೋ ಶಂಕೆ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಶವ ಪತ್ತೆಯಾಗಿದೆ. 2023 ನವೆಂಬರ್ ನಲ್ಲಿ ಕೀರ್ತಿ ಗುರುಪ್ರಸಾದ್ ಮದುವೆಯಾಗಿತ್ತು. ಕೀರ್ತಿ ಪೋಷಕರು ಸುಮಾರು 30 ರಿಂದ 35 ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಡಿಸೆಂಬರ್ 2025ರಲ್ಲಿ ಮತ್ತೆ 10 ಲಕ್ಷ ಹಣ ಗುರುಪ್ರಸಾದ್ ಕೇಳಿದ್ದ. ಮನೆ ಕಟ್ಟಿಸುವುದಾಗಿ …

Read More »

ಮಲ್ಪೆ | ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ದುರಂತ: ಇಬ್ಬರು ಮೃತ್ಯು, ಓರ್ವಳ ಸ್ಥಿತಿ ಗಂಭೀರ

ಕೋಡಿಬೆಂಗ್ರೆ ಬೀಚ್ ಸಮೀಪ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಶಂಕರಪ್ಪ(22) ಹಾಗೂ ಸಿಂಧು(23) ಎಂದು ಗುರುತಿಸಲಾಗಿದೆ. ದೀಶಾ(26) ಎಂಬವರು ಸ್ಥಿತಿ ಗಂಭೀರವಾಗಿದ್ದು, ಧರ್ಮರಾಜ(26) ಎಂಬವರ ಸ್ಥಿತಿ ಸ್ಥಿರವಾಗಿದೆ. ಇವರು ಮೈಸೂರು ಜಿಲ್ಲೆಯ ಸರಸ್ವತೀಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರು ಎನ್ನಲಾಗಿದೆ. ಒಟ್ಟು 14 ಮಂದಿಯ ತಂಡ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಇವರು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ …

Read More »

ರೈಲಿಂದ ಕೆಳಗಿಳಿಯುವ ವಿಚಾರಕ್ಕೆ ಸಲಹೆ ನೀಡಿದ ಪ್ರಾಧ್ಯಾಪಕ; ಕೊಂದೇ ಬಿಟ್ಟ ಸಹ ಪ್ರಯಾಣಿಕ!

ಮಹಾರಾಷ್ಟ್ರ : ಭಾರತದ ಆರ್ಥಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮುಂಬೈನಲ್ಲಿ ಸಾಮೂಹಿಕ ಸಾರಿಗೆ ಲೋಕಲ್ ಟ್ರೈನ್ ನಲ್ಲಿ ಮತ್ತೊಂದು ಆಘಾತಕಾರಿ ಘಟನೆಯೊಂದು ನಡೆದಿದೆ. ಮಲಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ ರೈಲು ಇಳಿಯುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದಿದ್ದು, ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮುಂಬೈನ ಪ್ರತಿಷ್ಠಿತ ಕಾಲೇಜಿನ ಗಣಿತ ಪ್ರಾಧ್ಯಾಪಕ ಕೊಲೆಯಾದ ದುರ್ದೈವಿ. ಯುವಕನೋರ್ವ ಅಲೋಕ್ ಸಿಂಗ್ ಎಂಬ ಪ್ರಾಧ್ಯಾಪಕರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ರೈಲಿನಲ್ಲಿ …

Read More »

ಕಾರ್ಕಳ: ಕ್ರೂಸರ್‌-ಬಸ್ ನಡುವೆ ಭೀಕರ ಅಪಘಾತ; ಗಾಣಗಾಪುರದ ನಾಲ್ವರ ಸಾವು

ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್‌(ತೂಫಾನ್) ವಾಹನ ಹಾಗೂ ಸಾರಿಗೆ ಬಸ್‌ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ದೇವಲ ಗಾಣಗಾಪುರದ ಚೇತನ್ ಮಾದರ(18) ಮತ್ತು ರೋಹಿದಾಸ್ ಮಾದರ (19) ಹಾಗೂ ಮಲ್ಲಮ್ಮ (45) ಅದರಂತೆ ಚಾಲಕ ಮಾನಪ್ಪ (30) ಎಂಬವರು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ‌ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ. ತಾಲ್ಲೂಕಿನ ದೇವಲಗಣಗಾಪುರದ ಕುಟುಂಬವೊಂದರ 12 ಮಂದಿ ಕ್ರೂಸರ್ ವಾಹನ ಮೂಲಕ ಉಡುಪಿ …

Read More »

ಅರಬೈಲ್ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ: ವಿದ್ಯಾರ್ಥಿಗಳಿಗೆ ಗಾಯ

ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಾಟ್‌ನ ಅಪಾಯಕಾರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಚೆನ್ನೈನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಗೋಕರ್ಣಕ್ಕೆ ತೆರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಸುಮಾರು ಆರೇಳು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಬಾಲಕೃಷ್ಣ ನಾಯ್ಕ ಅರಬೈಲ್ ಹಾಗೂ ಸತೀಶ ನಾಯ್ಕ ಅವರು ಗಾಯಾಳುಗಳಿಗೆ ನೆರವಾದರು. …

Read More »