Breaking News

ರೈಲಿಂದ ಕೆಳಗಿಳಿಯುವ ವಿಚಾರಕ್ಕೆ ಸಲಹೆ ನೀಡಿದ ಪ್ರಾಧ್ಯಾಪಕ; ಕೊಂದೇ ಬಿಟ್ಟ ಸಹ ಪ್ರಯಾಣಿಕ!

ಮಹಾರಾಷ್ಟ್ರ : ಭಾರತದ ಆರ್ಥಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮುಂಬೈನಲ್ಲಿ ಸಾಮೂಹಿಕ ಸಾರಿಗೆ ಲೋಕಲ್ ಟ್ರೈನ್ ನಲ್ಲಿ ಮತ್ತೊಂದು ಆಘಾತಕಾರಿ ಘಟನೆಯೊಂದು ನಡೆದಿದೆ. ಮಲಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ ರೈಲು ಇಳಿಯುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದಿದ್ದು, ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮುಂಬೈನ ಪ್ರತಿಷ್ಠಿತ ಕಾಲೇಜಿನ ಗಣಿತ ಪ್ರಾಧ್ಯಾಪಕ ಕೊಲೆಯಾದ ದುರ್ದೈವಿ. ಯುವಕನೋರ್ವ ಅಲೋಕ್ ಸಿಂಗ್ ಎಂಬ ಪ್ರಾಧ್ಯಾಪಕರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ರೈಲಿನಲ್ಲಿ ಅಪಾರ ಜನದಟ್ಟಣೆ ಇದ್ದ ಕಾರಣ, ಕೆಳಗಿಳಿಯುವ ವಿಚಾರವಾಗಿ ಯುವಕ ಓಂಕಾ‌ರ್ ಶಿಂಧೆಯನ್ನು ಇತರರಿಗೆ ಜಾಗ ಮಾಡಿಕೊಡುವಂತೆ ಪ್ರಾಧ್ಯಾಪಕ ಅಲೋಕ್ ಗದರಿದ್ದಾರೆ. ಇದ್ರಿಂದ ಈ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಓಂಕಾರ್ ಶಿಂಧೆ ತನ್ನ ಬ್ಯಾಗ್‌ ನಲ್ಲಿದ್ದ ಚಾಕುವಿನಿಂದ ಪ್ರಾಧ್ಯಾಪಕನಿಗೆ ಮೂರ್ನಾಲ್ಕು ಬಾರಿ ಇರಿದಿದ್ದಾನೆ. ಆ ಬಳಿಕ ಮಲಾಡ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ಕೆಳಗಿಳಿದು ಓಡಿ ಹೋಗಿದ್ದಾನೆ. ಅಲೋಕ್ ಸಿಂಗ್ ರನ್ನ ಆಸ್ಪತ್ರೆಗೆ ಸಾಗಿಸುವ ಮೊದಲೇ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *