ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಿಂಗೀಪುರದಲ್ಲಿ ಗುರುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಕ್ರಮ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್‌ಗಳ ಬಳಿ ಸಂಗ್ರಹಿಸಿಡಲಾಗಿದ್ದ ಟನ್‌ಗಟ್ಟಲೆ ಸ್ಕ್ರಾಪ್ (ಗುಜರಿ) ಬೆಂಕಿಗಾಹುತಿಯಾಗಿದೆ. ಸುಮಾರು ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿದ್ದ ಸ್ಕ್ರಾಪ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಆಕಾಶದ ಎತ್ತರಕ್ಕೆ ಹೊಗೆ ಆವರಿಸಿ ಆತಂಕ ಸೃಷ್ಟಿಸಿತ್ತು.ಸಂಜೆ ಆರು ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಬೆಂಕಿ, ಸ್ಕ್ರಾಪ್‌ನಲ್ಲಿ ಪ್ಲಾಸ್ಟಿಕ್ ಸೇರಿದಂತೆ ದಹನಕಾರಿ ವಸ್ತುಗಳಿದ್ದ ಕಾರಣ ಕ್ಷಣಾರ್ಧದಲ್ಲಿ ಐದು …
Read More »*ಭೀಕರ ಸರಣಿ ಅಪಘಾತ: ಸ್ಥಳದಲ್ಲೇ ಐವರು ದುರ್ಮರಣ*
ಲಾರಿ ಹಾಗೂ ಎರಡು ಗೂಡ್ಸ್ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಕೇಸ್ ದಾಖಲಿಸಲು ನಿರಾಕರಣೆ: ಜ್ಞಾನಭಾರತಿ ಪಿಐ ಅಮಾನತು
ಬೆಂಗಳೂರು: ಕರ್ತವ್ಯಲೋಪ ಆರೋಪದ ಮೇರೆಗೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ರವಿ ಅವರನ್ನು ಅಮಾನತುಗೊಳಿಸಿ ಕಮಿಷಮನರ್ ಮಂಗಳವಾರ ಆದೇಶಿಸಿದ್ದಾರೆ. 2025ರ ಸೆಪ್ಟಂಬರ್‌ನ ಮೊದಲ ವಾರದಲ್ಲಿ ಅನ್ನಪೂರ್ಣೇಶ್ವರಿನಗರ ನಿವಾಸಿ ದೀಪಕ್ ರಾಜ್(18) ಎಂಬ ಯುವಕನನ್ನು ಮಲ್ಲತ್ತಹಳ್ಳಿಯಲ್ಲಿ ಹತ್ಯೆಯಾಗಿತ್ತು.ಆದರೆ, ಜ್ಞಾನಭಾರತಿ ಠಾಣಾಧಿಕಾರಿ ರವಿ ಅವರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆದರೆ, ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ …
Read More »ಚಿಕ್ಕಮಗಳೂರಲ್ಲಿ ಬಾರ್ ಮಾಲೀಕನನ್ನು ಮತ್ತೊಂದು ಬಾರ್ ಸಿಬ್ಬಂದಿಯಿಂದಲೇ ಭೀಕರವಾಗಿ ಮರ್ಡರ್
ಬಾರ್ ಮಾಲಿಕರೊಬ್ಬರನ್ನು, ಮತ್ತೊಂದು ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಂತ ಸಿಬ್ಬಂದಿಗಳೇ ಭೀಕರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವಂತ ಪೇಜ್-3 ಬಾರ್ ನಲ್ಲಿ ಮಾಲೀಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.43 ವರ್ಷದ ತೇಜು ಹತ್ಯೆಯಾದಂತ ಬಾರ್ ಮಾಲೀಕರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯು ತಿಳಿದು ಬರಬೇಕಿದೆ.
Read More »ಯಾದಗಿರಿಯಲ್ಲಿ ಘೋರ ಘಟನೆ : ಶಾಲೆಯಲ್ಲೇ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ.!
ಯಾದಗಿರಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು,ಶಾಲಾ ಆವರಣದಲ್ಲೇ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ವಡಗೇರ ನಿವಾಸಿ 9 ನೇ ತರಗತಿ ವಿದ್ಯಾರ್ಥಿ ಪವನ್ (15) ಎಂದು ಗುರುತಿಸಲಾಗಿದೆ.ಶಾಲೆಯ ಸಮಯದಲ್ಲೇ ಶಾಲಾ ಹಿಂಭಾಗದಲ್ಲಿ ಪವನ್ ಸೂಸೈಡ್ ಮಾಡಿಕೊಂಡಿದ್ದಾನೆ. ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ …
Read More »ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ… ವಿಡಿಯೋ ವೈರಲ್, ಪೊಲೀಸರಿಂದ ತನಿಖೆ
ವಿಜಯಪುರ: ನಾಲ್ಕೈದು ಯುವಕರು ಸೇರಿಕೊಂಡು ಯುವಕನೋರ್ವನಿಗೆ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸರು ತನಿಖೆ ಕೈಕೊಂಡಿದ್ದಾರೆ. ವಿಜಯಪುರ ನಗರದ ನಿವಾಸಿ ಪೈಗಂಬರ್ ಮುಲ್ಲಾ ಎಂಬಾತನೇ ಹಲ್ಲೆಗೆ ಒಳಗಾದ ಯುವಕ ಎನ್ನಲಾಗಿದೆ. ಥಳಿತದ ವಿಡಿಯೋ ಹೊರಬಿದ್ದ ಬೆನ್ನಲ್ಲೆ ಆತನೂ ಸಹ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. “ಇದು ಇತ್ತೀಚೆಗೆ ನಡೆದ ಜಗಳವಾಗಿದೆ. ಈ ಮೊದಲು ನಾನೇ ಅವರನ್ನು ಬೈದಿದ್ದೆ. …
Read More »ಪ್ರಯಾಗ್‌ರಾಜ್‌ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ
ಭಾರತೀಯ ವಾಯುಪಡೆಯ (ಐಎಎಫ್) ಮೈಕ್ರೋಲೈಟ್ ವಿಮಾನವು ಬುಧವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.ಈ ಘಟನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಪ್ರಯಾಗ್‌ರಾಜ್‌ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೆ.ಪಿ. ಕಾಲೇಜು ಬಳಿ ವಿಮಾನವು ಕೆರೆಗೆ ಅಪ್ಪಳಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.. ವಿಮಾನ ಪತನಗೊಳ್ಳುತ್ತಿದ್ದಂತೆ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಬಂದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಭಯd ವಾತಾವರಣ …
Read More »ಬೆಳಗಾವಿಯಲ್ಲಿ ಘೋರ ದುರಂತ : `ಮೈಕ್ರೋ ಫೈನಾನ್ಸ್ ಕಿರುಕುಳ’ಕ್ಕೆ ಬೇಸತ್ತು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ.!
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಕೆರೆಗೆ ಹಾರಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಗೌರವ್ವ ನೀಲಪ್ಪ ಕೆಂಗಾನೂರು (36) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೌರವ್ವ ಮೈಕ್ರೋ ಫೈನಾನ್ಸ್ ನಲ್ಲಿ 7-10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಜೀವನ ನಿರ್ವಹಣೆಗಾಗಿ ಗೌರವ್ವ ಸಾಲಮಾಡಿಕೊಂಡಿದ್ದರು. …
Read More »ಟಿಬಿ ಡ್ಯಾಂ ಬಳಿ ವಿಷ ಸೇವಿಸಿ ಬೆಂಗಳೂರಿನ ಮಹಿಳೆ ಆತ್ಮಹತ್ಯೆ
ಕೊಪ್ಪಳ: ತಾಲೂಕಿನ ಕಾಸನಕಂಡಿ ಗ್ರಾಮದ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಬೆಂಗಳೂರಿನ ಮಾಚೋಹಳ್ಳಿ ನಿವಾಸಿ ರೂಪಾ. ಎನ್. (37) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ರೂಪಾ ಕಳೆದ 4 ವರ್ಷಗಳಿಂದ ಕುಟುಂಬದಿಂದ ದೂರವಾಗಿ ವಾಸವಿದ್ದು, ಮಕ್ಕಳು ಹಾಗೂ ಪತಿಯನ್ನು ಸರಿಯಾಗಿ ನೋಡಿಕೊಳ್ಳಲಾಗಲಿಲ್ಲ ಎಂಬ ಮಾನಸಿಕ ವೇದನೆಯಿಂದ ಬಳಲುತ್ತಿದ್ದರು.ಜ.18ರಂದು ಕಾಸನಕಂಡಿ ಸೀಮಾದ ಜೋಪಡಿಯಲ್ಲಿ ಹೇನಿನ ಪುಡಿ …
Read More »‘ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ’ : ಮುಸ್ಲಿಂ ಯುವತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಎಸೆದ ರಾಕ್ಷಸರು.!
ಧಾರವಾಡ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆದಿದ್ದು, ಯುವತಿಯನ್ನು ಕೊಂದು ಮೃತದೇಹವನ್ನು ಪೀಸ್ ಮಾಡಿ ಎಸೆದ ಘಟನೆ ಧಾರವಾಡದ ಜನರನ್ನು ಬೆಚ್ಚಿ ಬೀಳಿಸಿದೆ. ಧಾರವಾಡದ ಹೊರವಲಯದಲ್ಲಿ ಈ ಕೊಲೆ ನಡೆದಿದೆ. ಮೃತಳನ್ನು 19 ವರ್ಷದ ಝಕಿಯಾ ಮುಲ್ಲಾ ಎಂದು ಗುರುತಿಸಲಾಗಿದೆ.ಝಕಿಯಾ ಎಂಬ ಮುಸ್ಲಿಂ ಯುವತಿಯ ಕೊಲೆಯಾಗಿದ್ದು, ಈಕೆ ಧಾರವಾಡದ ಗಾಂಧಿ ಚೌಕ್ ಬಡಾವಣೆಯ ನಿವಾಸಿ ಎಂದು ಗುರುತಿಸಲಾಗಿದೆ. ಹಂತಕರು ಯುವತಿಯನ್ನು ಶವ ಪೀಸ್ ಪೀಸ್ ಮಾಡಿ ಬಿಸಾಡಿದ್ದಾರೆ ಎನ್ನಲಾಗಿದೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





