Breaking News

ಅಣ್ಣಿಗೇರಿಯಲ್ಲಿ ಸಂಪನ್ನಗೊಂಡ ಶ್ರೀ ದೇವಿಯ ಪುರಾಣ ಪ್ರವಚನ

ಅಣ್ಣಿಗೇರಿ: ಶರನ್ನವರಾತ್ರಿಯ ನಿಮಿತ್ತ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಗ್ರಾಮ ದೇವತೆ ದ್ಯಾಮಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಯ ಪುರಾಣ ಪ್ರವಚನವು ನೆರವೇರಿತು.

ಅಕ್ಟೋಬ‌ರ್ 3ರಿಂದ ನಿತ್ಯವೂ ಪುರಾಣ ಪ್ರಚನ ಕಾರ್ಯಕ್ರಮ ನೆರವೇರುತ್ತಾ ಬಂದಿದ್ದು, ಶುಕ್ರವಾರ ಗ್ರಾಮದ ಪ್ರಮುಖ ಬೀದಿಯಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ವೇಳೆ ಬಾಲಕಿಯರು ಕುಂಬ ಹೊತ್ತು ಸಾಗಿದರೆ, ಭಜನಾ ತಂಡವು ದೇವಿಯ ಆರಾಧನೆ ಮಾಡಿತು.

ರಾತ್ರಿ ಶ್ರೀ ದೇವಿಯ ಪುರಾಣವನ್ನು ಗುರುಶಾಂತ ಬಡಿಗೇರ ಪಠಿಸಿದರೆ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ವಿಶ್ವನಾಥ ಹಿರೇಮಠ ಅವರು ಭಕ್ತರಿಗೆ ಪುರಾಣ ಸಾರದ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸಿದರು. ಇದಕ್ಕೆ ಗುರುರಾಜ ನಾಯಕ್ ಅವರು ಹಾರ್ಮೋನಿಯಂ, ಪದ್ಮನಾಲ ತಬಲಾ ಸಾಥ್ ನೀಡಿದರು. ಪುರಾಣದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಈ ವೇಳೆ ಗ್ರಾಮದ ಹಿರಿಯರಾದ ಮುತ್ತಣ್ಣ ದಂಡಾವತಿಮಠ, ಆರ್.ಟಿ. ನಾಗಟಾನ, ಡಿ.ಎಫ್ ರೋಣದ, ಕೃಷ್ಣಪ್ಪ ರೋಣದ, ಶೇಕಪ್ಪ ನಾಯ್ಕರ್, ಗಂಗಾಧರ ಪತ್ತಾರ, ಸಿದ್ದು ಮುಳಗುಂದ, ರಾಜೇಸಾಬ್ ಕಳ್ಳಿಮನಿ ಇದ್ದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *