ಕಿಡಿಗೇಡಿಗಳು ಫ್ಲೈ ಓವರ್ ಮೇಲೆ ಪಟಾಕಿ ಹಚ್ಚಿ ಜನರ ಮೇಲೆ ಎಸೆದು ಹುಚ್ಚಾಟ ಮೆರೆದ ಘಟನೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ರಾಗಿಗುಡ್ಡದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಿಡಿಗೇಡಿಗಳ ಹುಚ್ಚಾಟ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ನಾಲ್ಕು-ಐದು ಮಂದಿ ಯುವಕ-ಯುವತಿಯರಿದ್ದ ಗ್ಯಾಂಗ್ ಫ್ಲೈ ಓವರ್ ಮೇಲೆ ನಿಂತುಕೊಂಡು ಪಟಾಕಿ ಹಚ್ಚಿ ಕೆಳಗೆ ನಿಂತಿದ್ದ ಜನರ ಮೇಲೆ ಎಸೆದಿದ್ದಾರೆ. ರಾಗಿಗುಡ್ಡ -ಸಿಲ್ಕ್ ಬೋರ್ಡ್ ಮಾರ್ಗದ …
Read More »ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿಯೇ ಶವವಾಗಿ ಪತ್ತೆ
ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.ಸವಿತಾ ದೊಡ್ಡಮನಿ (35) ಮೃತ ಗರ್ಭಿಣಿ. ಪತಿ ಹಾಗೂ ಕುಟುಂಬದವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದದರೆ ಎಂದು ಸವಿತಾ ಪೋಷಕರು ಆರೋಪಿಸಿದ್ದಾರೆ.ಸವಿತಾ ಹಾಗೂ ಗಿರೀಶ್ ಮದುವೆಯಾಗಿ 9 ತಿಂಗಳಾಗಿತ್ತು. ಸವಿತಾ 2 ತಿಂಗಳ ಗರ್ಭಿಣಿಯಾಗಿದ್ದಳು. ವರದಕ್ಷಿಣೆಗಾಗಿ ಸವಿತಾಳನ್ನು ಪತಿ ಹಾಗೂ ಮನೆಯವರು ಹಿಂಸಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಇದ್ದಕ್ಕಿದ್ದಂತೆ ಸವಿತಾ ಪತಿ ಮನೆಯಲ್ಲಿ …
Read More »ಬೆಳಗಾವಿಯಲ್ಲಿ ಮಕ್ಕಳ ವೈದ್ಯನ ಮನೆಯಲ್ಲಿ 134 ಗ್ರಾಂ ಗಾಂಜಾ ಪತ್ತೆ!
ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನೇ ಗಾಂಜಾ ಘಮಲೇರಿಸಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳ ವೈದ್ಯರಾಗಿರುವ ಡಾ.ರಾಹುಲ್ ವಿಠಲ ಬಂಟಿ ಅವರ ಮನೆಯಲ್ಲಿ ಗಾಂಜಾ ದೊರೆತಿದೆಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಡಾ.ರಾಹುಲ್ ಬಂಟಿ ಅವರ ಶಿವಬಸವ ನಗರದ ಮನೆ ಮೇಲೆ ದಾಳಿ ಮಾಡಿದಾಗ 134 ಗ್ರಾಂ ಗಾಂಜಾ ಸಿಕ್ಕಿದೆ.ಅಷ್ಟೇ ಅಲ್ಲದೇ, ವೈದ್ಯ ಗಾಂಜಾ ಸೇವಿಸಿರುವ ವಿಚಾರವೂ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಗಾಂಜಾ …
Read More »ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಮನೆಗಳು, 11ಕ್ಕೂ ಹೆಚ್ಚು ಬೈಕ್, ಗೂಡ್ಸ್ ವಾಹನಗಳು ಸುಟ್ಟು ಭಸ್ಮ
ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದೆ.ಕೂಲಿ ಕಾಲೋನಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದ್ದು ಕಳೆದ ರಾತ್ರಿ ಈ ಒಂದು ಅಗ್ನಿ ದುರಂತ ಸಂಭವಿಸಿದೆ.ರಾತ್ರಿ 2 ಗಂಟೆ ಸುಮಾರಿಗೆ ಘಟನೆಯಲ್ಲಿ 11 ಮನೆಗಳಿಗೆ ಹಾನಿಗಳಾಗಿದ್ದು 11ಕ್ಕೂ ಹೆಚ್ಚು ಬೈಕ್ ಗಳು ಹಾಗೂ ಗೂಡ್ಸ್ ಆಟೋಗಳು ಬೆಂಕಿಗೆ ಸುಟ್ಟು ಸಂಪೂರ್ಣವಾಗಿ ಕರಕಲಾಗಿವೆ.ಕಿಡಿಗೇಡಿಗಳು ಈ ಒಂದು ಕೃತಿ ಹರಿದಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ …
Read More »ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಸಮೀಪ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ.ಅಪರಿಚಿತ ವಾಹನ ಡಿಕ್ಕಿಯಾಗಿ ಮಧುಸೂದನ್(21) ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಬೈರಸಾಗರ ಗ್ರಾಮದ ನಿವಾಸಿಯಾಗಿರುವ ಮಧುಸೂದನ್ ಬೈಕ್ ನಲ್ಲಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read More »ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ; ಡಿವೈಎಸ್ಪಿ ತಾಯಿ ಸೇರಿ ಇಬ್ಬರು ದುರ್ಮರಣ
ಇಲ್ಲಿನ ಹೊರವಲಯದ ತಮಟಕಲ್ಲು ಬ್ರಿಡ್ಜ್ ಬಳಿ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಡಿವೈಎಸ್ಪಿ ವೈಷ್ಣವಿ ಅವರ ತಾಯಿ ಕಮಲ ಹರಿಬಾಬು (69) ಹಾಗೂ ಕಾರು ಚಾಲಕ ರಾಕೇಶ್ (40) ಎಂದು ಗುರುತಿಸಲಾಗಿದೆ.ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಗೊಂಡ ಡಿವೈಎಸ್ಪಿ ವೈಷ್ಣವಿ ಅವರು ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ …
Read More »ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್ಗಾರ್ಡ್ಗೆ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಯುವತಿ
ಬೆಂಗಳೂರು : ಬಟ್ಟೆ ವಿಚಾರಕ್ಕೆ ಯುವತಿಗೆ ಬುದ್ಧಿ ಹೇಳಿದ ಹೋಮ್ಗಾರ್ಡ್ಗೆ ಜುಟ್ಟು ಹಿಡಿದು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೆಆರ್ ಪುರಂ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.ಲಕ್ಷ್ಮಿ ನರಸಮ್ಮ ಹಲ್ಲೆಗೊಳಗಾದ ಮಹಿಳೆ. ಮೋಹಿನಿ ಹಲ್ಲೆಗೈದ ಯುವತಿ.ಮೋಹಿನಿಯು ಶಾರ್ಟ್ ಬಟ್ಟೆ ಹಾಕಿ ಬೀದಿಗೆ ಬಂದು ಸುತ್ತಾಡ್ತಿದ್ದಳು. ಅಲ್ಲದೇ ಅಲ್ಲಿದ್ದ ಯುವಕರು ಈಕೆಗೆ ಚುಡಾಯಿಸುತ್ತಿದ್ದರು. ಇದನ್ನು ಕಂಡ ಹೋಂ ಗಾರ್ಡ್ ಬುದ್ದಿವಾದ ಹೇಳಿದ್ದಕ್ಕೆ ಮೈಯೆಲ್ಲಾ ಕೆಂಪಗಾಗಿಸಿಕೊಂಡ ಯುವತಿ ಡ್ಯೂಟಿಯಲ್ಲಿದ್ದ ಮಹಿಳೆಗೆ ಥಳಿಸಿದ್ದಾಳೆ. ಸದ್ಯ …
Read More »ನಾಡಬಾಂಬ್ ಸ್ಫೋಟಗೊಂಡು ಹಸು ಸಾವು: ಮೂವರು ಆರೋಪಿಗಳು ಅರೆಸ್ಟ್
ರಾಮನಗರ: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಫೋತಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.ಕೃಷ್ಣಮೂರ್ತಿ, ಶಿವಕುಮಾರ್, ಶಿವನಪ್ಪ ಬಂಧಿತ ಆರೋಪಿಗಳು.ಈ ಮೂವರು ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದರು.ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜನವರಿ ೩ರಂದು ರೈತ ಶಿವನಗೌಡ ಎಂಬುವವರು ತಮ್ಮ ಹಸುವನ್ನು ಮೇಯಿಸಲು ಬಿಟ್ಟಿದ್ದಾಗ ನಾಡಬಾಂಬ್ ಸ್ಫೊಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ಎರಡು …
Read More »ಕೌಟುಂಬಿಕ ಕಲಹ : 10 ತಿಂಗಳ ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ
ಕೌಟುಂಬಿಕ ಕಲಹದಿಂದ ಬೇಸತ್ತು 27 ವರ್ಷದ ಮಹಿಳೆಯೊಬ್ಬಳು ತನ್ನ 10 ತಿಂಗಳ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ತಾಯಿ ಮತ್ತು ಮಗು ಸತ್ತಿರುವುದನ್ನು ನೋಡಿ ಮಗುವಿನ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದೆ. ಸುಷ್ಮಾ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಯಶವಂತ್ ರೆಡ್ಡಿ ಎಂಬುವರನ್ನು ವಿವಾಹವಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು …
Read More »ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಗದಗ ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ಕಡಲೆ ಕಳ್ಳತನ ಪ್ರಕರಣದಲ್ಲಿ ರೈತರು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ. ಬೆಳಗಿನ ಜಾವ ಜಮೀನಿನಲ್ಲಿ ಕಡಲೆ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಾಯುವಿಹಾರಕ್ಕೆ ಬಂದ ಜನರ ಕಣ್ಣಿಗೆ ಕಳ್ಳ ಬಿದ್ದಿದ್ದು, ತಕ್ಷಣ ರೈತರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಧಾವಿಸಿದ ರೈತರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ರೈತರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





