ಕಿಡಿಗೇಡಿಗಳು ಫ್ಲೈ ಓವರ್ ಮೇಲೆ ಪಟಾಕಿ ಹಚ್ಚಿ ಜನರ ಮೇಲೆ ಎಸೆದು ಹುಚ್ಚಾಟ ಮೆರೆದ ಘಟನೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ರಾಗಿಗುಡ್ಡದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಿಡಿಗೇಡಿಗಳ ಹುಚ್ಚಾಟ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ನಾಲ್ಕು-ಐದು ಮಂದಿ ಯುವಕ-ಯುವತಿಯರಿದ್ದ ಗ್ಯಾಂಗ್ ಫ್ಲೈ ಓವರ್ ಮೇಲೆ ನಿಂತುಕೊಂಡು ಪಟಾಕಿ ಹಚ್ಚಿ ಕೆಳಗೆ ನಿಂತಿದ್ದ ಜನರ ಮೇಲೆ ಎಸೆದಿದ್ದಾರೆ. ರಾಗಿಗುಡ್ಡ -ಸಿಲ್ಕ್ ಬೋರ್ಡ್ ಮಾರ್ಗದ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ವಿಡಿಯೋ ಆಧರಿಸಿ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕರ ಅವಿವೇಕಿತನ ದೊಡ್ಡ ಅವಘಡಕ್ಕೆ ಕಾರಣವಾಗಿತ್ತು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬೈಕ್ ನಲ್ಲಿ ಬಂದ ಯುವಕ-ಯುವತಿಯರ ಗ್ಯಾಂಗ್ ಪಟಾಕಿ ಬಾಕ್ಸ್ ಗಳನ್ನು ತಂದಿದ್ದರು. ವೈರಲ್ ಆದ ವಿಡಿಯೋದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

