ಬೀದರ್ ಜಿಲ್ಲೆ ಹುಮನಾಬಾದ್ನ ರಾಷ್ಟ್ರೀಯ ಹೆದ್ದಾರಿ ಮೇಲೆ ಅನಧಿಕೃತವಾಗಿ ಚೆಕ್ ಪೋಸ್ಟ್ ನಿರ್ಮಿಸಿ, ಗಂಟೆಗೆ 8ರಿಂದ 10 ಸಾವಿರ ರೂ. ಸಂಗ್ರಹಿಸುವ ಹಗಲು ದರೋಡೆ ದಂಧೆಯೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಬಹಿರಂಗವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸೂಚಿಸಿದರು.4 ಜಿಲ್ಲೆಗಳಲ್ಲಿ ಲೋಕಾಯುಕ್ತ ತಂಡ ನಿರಂತರ ಪರಿಶೀಲನೆ ನಡೆಸುತ್ತಿದ್ದು, ಸೋಮವಾರದ ತಪಾಸಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಮೇಲೆ ಸರ್ಕಾರಿ ಅಲ್ಲದ, ವಾಹನವನ್ನು ನಿಲ್ಲಿಸಿ, ಅನಧಿಕೃತವಾಗಿ ಹಣ ಸಂಗ್ರಹಿಸುವುದು ಪತ್ತೆಯಾಗಿದೆ. ದೂರದಲ್ಲಿ …
Read More »ಹುಬ್ಬಳ್ಳಿಯಲ್ಲಿ ವೈನ್ ಶಾಪ್ ಸಮೀಪ ಭಾರೀ ಅಗ್ನಿ ಅವಘಡ – ಪೆಟ್ ಸಾರಾಯಿ ಪ್ಯಾಕೆಟ್ಗಳಿಗೆ ಬೆಂಕಿ, ಕಾರುಗಳು ಭಸ್ಮ
ನಗರದ ಕಾರವಾರ ರಸ್ತೆಯಲ್ಲಿರುವ ಶೆಟ್ಟಿ ವೈನ್ ಶಾಪ್ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬಾರಿನಲ್ಲಿ ಬಳಸಿದ ಬಳಿಕ ಹಿಂಭಾಗದಲ್ಲಿ ಸಂಗ್ರಹಿಸಿಟ್ಟಿದ್ದ ಸಾರಾಯಿ ವೈನ್ ಪೆಟ್ ಪ್ಯಾಕೆಟ್ಗಳಿಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿದೆ.ಬೆಂಕಿಯ ತೀವ್ರತೆಯಿಂದ ಸಮೀಪದ ಗ್ಯಾರೇಜ್ನಲ್ಲಿ ನಿಲ್ಲಿಸಿದ್ದ ಹಲವು ಕಾರುಗಳಿಗೆ ಬೆಂಕಿ ವ್ಯಾಪಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ …
Read More »ರೋಗಿ ನರಳಾಡಿ ಪ್ರಾಣಬಿಟ್ಟರು, ಮೊಬೈಲ್ ನಲ್ಲಿ ಬ್ಯುಸಿಯಾದ ವೈದ್ಯ : ಸಾರ್ವಜನಿಕರಿಂದ ಆಕ್ರೋಶ!
ಚಿಕ್ಕಮಗಳೂರು : ರೋಗಿಗಳು ಆಸ್ಪತ್ರೆಗೆ ಬಂದರೆ ವೈದ್ಯರು ತಕ್ಷಣ ಅವರನ್ನು ಪರಿಶೀಲಿಸಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಆದರೆ ಇಲ್ಲಿ ಒಬ್ಬ ವೈದ್ಯ ರೋಗಿ ಬಂದು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದರು ಕೂಡ ನಿರ್ಲಕ್ಷ ವಹಿಸಿದ್ದು, ವೈದ್ಯ ಮತ್ತು ಸಿಬ್ಬಂದಿಗಳ ನಿರ್ಲಕ್ಷಕ್ಕೆ 60 ವರ್ಷದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.ಹೌದು ವೈದ್ಯ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿದ್ದಾರೆ. ರೋಗಿಯು ನೋವಿನಿಂದ ನರಳಾಡುತ್ತಿದ್ದರೆ, ಮತ್ತೊಂದೆಡೆ ಫೋನಲ್ಲಿ ವೈದ್ಯ ಬಿಜಿಯಾಗಿದ್ದಾನೆ. …
Read More »ಮುಳಬಾಗಿಲು: ಮನೆಗೆ ನುಗ್ಗಿ ಆಭರಣ, ನಗದು ಕಳವು
ಮನೆಗೆ ಬೀಗ ಹಾಕಿ ಉರುಸ್ ನೋಡಲು ಹೋಗಿದ್ದ ವೇಳೆ ಮನೆ ಕಬ್ಬಿಣದ ಕಿಟಕಿ ಸರಳು ಕತ್ತರಿಸಿ ಆಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ಮಾರುತಿ ನಗರದ ಧನಂಜಯ ತಮ್ಮ ಕುಟುಂಬದೊಂದಿಗೆ ಹೈದರ್ವಲ್ಲಿ ದರ್ಗಾ ಬಳಿ ಉರುಸ್ ನೋಡಲು ಹೋಗಿದ್ದರು.ಈ ಸಂದರ್ಭದಲ್ಲಿ ಅಪರಿಚಿತರು ಒಳನುಗ್ಗಿ 5 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಆಭರಣ ಮತ್ತು ₹90 ಸಾವಿರ ನಗದು ಕಳವು ಮಾಡಿದ್ದಾರೆ. ಮುಳಬಾಗಿಲು ನಗರ ಠಾಣೆಯಲ್ಲಿ …
Read More »ಮುಂಜಾನೆ ಮಂಜಿನ ಪರಿಣಾಮ ವ್ಯಾನ್ಗೆ ಕಾರು ಢಿಕ್ಕಿ; ಚಾಲಕನಿಗೆ ಗಾಯ
ಹಿರಿಯಡ್ಕದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪರ್ಕಳದ ಕೆನರಾ ಬ್ಯಾಂಕ್ ಸಮೀಪ ತಿರುವಿನಲ್ಲಿತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದ ವ್ಯಾನ್ಗೆ ಢಿಕ್ಕಿ ಹೊಡೆದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.ವ್ಯಾನ್ ಉಡುಪಿಯಿಂದ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿತ್ತು. ಪರ್ಕಳ ಪರಿಸರದಲ್ಲಿ ಬೆಳಗ್ಗಿನ ಜಾವ ಮಂಜು ಕವಿದ ವಾತಾವರಣವಿದ್ದು, ತಿರುವು ಗೋಚರಿಸದ ಕಾರಣ ಕಾರು ಬಲಬದಿಗೆ ಸಾಗಿ ಎದುರಿನಿಂದ ಬರುತ್ತಿದ್ದ ವ್ಯಾನ್ ಢಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು …
Read More »ಮದ್ಯ ನೀಡದ್ದಕ್ಕೆ ಕಾರ್ಗೆ ಬೆಂಕಿಯಿಟ್ಟ ಪುಂಡರು
ಕೆ.ಆರ್.ಪೇಟೆ: ತಾಲೂಕಿನ ಅಗಸರಹಳ್ಳಿ ಬಳಿಯಿರುವ ಈಗಲ್ ಬಾರ್ ಆಯಂಡ್ ರೆಸ್ಟೋರೆಂಟ್ಗೆ ಪುಂಡರು ಬೆಂಕಿ ಹಚ್ಚಿದ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಟ್ಟು ಮೂವರು ಪುಂಡರ ಅಟ್ಟಹಾಸ ಬಾರ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮುರುಕನಹಳ್ಳಿ ಗ್ರಾಮದ ರಕ್ಷಿತ್, ಸಚಿನ್ ಮತ್ತು ಸುನಿಲ್ ಎಂದು ಗುರುತಿಸಲಾಗಿದೆ.ಶನಿವಾರ ರಾತ್ರಿ ರೆಸ್ಟೋರೆಂಟ್ಗೆ ಬಂದ ಪುಂಡರು ಮದ್ಯವನ್ನು ಉಚಿತವಾಗಿ ನೀಡುವಂತೆ ಕೇಳಿದ್ದಾರೆ. ಈ ಸಂದರ್ಭ ಕ್ಯಾಷಿಯರ್ ನಲ್ಲಿದ್ದ ರಕ್ಷಿತ್ ಈ ವಿಚಾರವನ್ನು ಮಾಲೀಕ ಮರಡಹಳ್ಳಿ ಪರಮೇಶ …
Read More »ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಪುಂಡರು: ಓರ್ವನ ಸ್ಥಿತಿ ಗಂಭೀರ
ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಪುಂಡರು: ಓರ್ವನ ಸ್ಥಿತಿ ಗಂಭೀರಹುಬ್ಬಳ್ಳಿತ ಕಮರಿಪೇಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಎರಡು ಪುಡಿರೌಡಿಗಳ ಗುಂಪು ತಲ್ವಾರ್ ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೊಡೆದಾಟದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಕೇಸ್ : ಶಾಸಕ ಜನಾರ್ದನ ರೆಡ್ಡಿ ಮನೆಯ ಬಳಿ ಮತ್ತೊಂದು ಬುಲೆಟ್ ಪತ್ತೆ!
ಬಳ್ಳಾರಿಯಲ್ಲಿ ಬ್ಯಾನರ್, ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಶಾಸಕ ಜನಾರ್ದನ ರೆಡ್ಡಿ ಮನೆಗೆ ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು, ಇದೀಗ ಶಾಸಕ ಜನಾರ್ಧನ ರೆಡ್ಡಿ ಮನೆಯ ಮುಂದೆ ಮತ್ತೊಂದು ಬುಲೆಟ್ ಪತ್ತೆಯಾಗಿದೆ.ಹೌದು ಶಾಸಕ ಜನಾರ್ಧನರೆಡ್ಡಿ ಮನೆ ಮುಂಭಾಗದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಬುಲೆಟ್ ಪತ್ತೆಯನ್ನು ಬಾಂಬ್ ನಿಷ್ಕ್ರಿಯ ದಳ ಇದೀಗ ಪತ್ತೆ ಮಾಡಿದೆ. ಬುಲೆಟ್ ಪತ್ತೆ ಹಚ್ಚುವ ಮಷೀನ್ ನಿಂದ ಮತ್ತೊಂದು ಬುಲೆಟ್ …
Read More »*ಜೀಪು-ಕಾರು ಭೀಕರ ಅಪಘಾತ: ಹೊತ್ತಿ ಉರಿದ ಕಾರು*
ಜೀಪ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಯಡವನಹಳ್ಳಿಯಲ್ಲಿ ನಡೆದಿದೆ. ಸರ್ಕಾರಿ ಜೀಪ್ ಹಾಗೂ ಕಿಯಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.ಕ್ಷಣಾರ್ಧದಲ್ಲಿ ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ. ನೋಡನೋಡುತ್ತಿದ್ದಂತೆ ಕಾರು ಸುಟ್ಟು ಕರಕಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Read More »ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ : ಶಾಸಕ ಲಕ್ಷಣ ಸವದಿ, ಪುತ್ರನ ವಿರುದ್ಧ ‘FIR’
ಬೆಳಗಾವಿಯ ಕೇಂದ್ರ ಸಹಕಾರಿ ಬ್ಯಾಂಕ್ (DCC) ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. BNS ಕಾಯ್ದೆ 189(2), 191(2), 115(2), 351(2), 352 (2), 190 ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





