ಮಂಗಳೂರು: ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಬರುವಾಗಲೂ ಗಾಂಜಾ ಸೇವನೆ ಮಾಡಿ ಬಂದ ವ್ಯಕ್ತಿಯ ವಿರುದ್ಧ ಮತ್ತೂಂದು ಪ್ರಕರಣ ದಾಖಲಾಗಿದೆ.ಕಾವೂರು ಠಾಣೆಯಲ್ಲಿ 2024ರಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಅದ್ಯಪಾಡಿ ನಿವಾಸಿ ಮಹೇಂದ್ರ ಪೈ (35) ಎಂಬಾತನನ್ನು ಡಿ.3ರಂದು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಈ ವೇಳೆ ಆತ ಮಾದಕ ಪದಾರ್ಥ ಸೇವನೆ ಮಾಡಿದ್ದಾನೆಯೇ ಎಂದು ಪತ್ತೆಹಚ್ಚಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವಿಸಿರುವುದು ತಿಳಿದು …
Read More »ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ ಬೊಲೆರೊ | ಐವರು ಸ್ಥಳದಲ್ಲೇ ಸಾವು!
ಉತ್ತರಾಖಂಡದ ಚಂಪಾವತ್ ತನಕ್ಪುರ-ಪಿಥೋರಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಾಗ್ಧಾರ ಬಳಿ ಮದುವೆ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಬೊಲೆರೊ ಜೀಪ್ ಬೆಳಗಿನ ಜಾವ 2.30ರ ಸುಮಾರಿಗೆ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಪಡೆದ ಲೋಹಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಕುಮಾರ್ ಸಿಂಗ್ ನೇತೃತ್ವದ ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ತಂಡವು ಕಾರ್ಯಾಚರಣೆ ಪ್ರಾರಂಭಿಸಿ, ಗಾಯಾಳುಗಳನ್ನು ಹೊರತೆಗೆದು ಲೋಹಘಾಟ್ ಉಪ-ಜಿಲ್ಲಾ …
Read More »ಮೆಟ್ರೋ ರೈಲಿಗೆ ಹಾರಿ ಯುವಕ ಆತ್ಮಹತ್ಯೆ: ಮೆಟ್ರೋ ಸಂಚಾರ ಸ್ಥಗಿತ*
ಯುವಕನೊಬ್ಬ ಮೆಟ್ರೋ ರೈಲಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.ಪ್ರಯಾಣಿಕರಂತೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಯುವಕ ಮೆಟ್ರೋ ರೈಲು ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಹಳಿಗೆ ಜಿಗಿದಿದ್ದಾನೆ. ಕ್ಷಣಾರ್ಧದಲ್ಲಿ ಯುವಕನ ದೇಹ ಮೆಟ್ರೊ ರೈಲಿಗೆ ಸಿಲುಕಿ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ತಾತ್ಕಾಲಿಕವಾಗಿ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಯುವಕನ ಮೃತದೇಹವನ್ನು ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ರವಾನಿಸಲಾಗಿದೆ. ಯುವಕ …
Read More »*ಜಾತ್ರೆಯಲ್ಲಿ ಎರಡು ವರ್ಷದ ಅವಳಿ ಮಕ್ಕಳನ್ನು ಬಿಟ್ಟುಹೋದ ಪೋಷಕರು*
ಬೆಳಗಾವಿ: ಚಿಂಚಲಿ ಮಾಯಕ್ಕನ ದೇವಸ್ಥಾನದ ಜಾತ್ರೆಯಲ್ಲಿ ಎರಡು ವರ್ಷದ ಅವಳಿ ಮಕ್ಕಳನ್ನು ಅವರ ಪೋಷಕರು ಬಿಟ್ಟು ಹೋಗಿದ್ದು. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಬೆಳಗಾವಿಗೆ ಒಪ್ಪಿಸಿರುತ್ತಾರೆ.ಕುಮಾರ ಬಾಬು ಮತ್ತು ಕುಮಾರಿ ಸೋನಿ 2 ವರ್ಷದ ಅವಳಿ ಮಕ್ಕಳನ್ನು ತಾತ್ಕಾಲಿಕವಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರದಲ್ಲಿ ಅಭಿರಕ್ಷಣೆಗೆ ಇರಿಸಿದ್ದು. ಸದರಿ ಮಕ್ಕಳ ಜೈವಿಕ ಪಾಲಕರು ಯಾರಾದರು ಇದ್ದಲ್ಲಿ ಜಿಲ್ಲಾ …
Read More »ಹುಬ್ಬಳ್ಳಿ: ಸಿ.ಸಿ ರಸ್ತೆ, 24X7 ನೀರಿನ ಸೌಲಭ್ಯಕ್ಕೆ ಆದ್ಯತೆ
ನಗರದ ಪುಣೆ- ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಾರ್ಡ್ ಸಂಖ್ಯೆ 70ರಲ್ಲಿ ಸಿ.ಸಿ ರಸ್ತೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಬಂಕಾಪುರ ಚೌಕ್ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಗಾರ್ಡನ್ಪೇಟೆಯಲ್ಲಿ ಸರ್ಕಾರಿ ಉರ್ದು ಶಾಲೆ ಇದೆ. ವಾರ್ಡ್ನಲ್ಲಿ ಕಿರಿದಾದ ಓಣಿಗಳಿವೆ. ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಳ್ವೇಕರ ಹಕ್ಕಲ ಕೊಳೆಗೇರಿ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕ ಶೌಚಾಲಯ ಸೇರಿ ಹಲವು ಸೌಲಭ್ಯ ಕಲ್ಪಿಸಬೇಕಿದೆ. ಬಹುತೇಕ ಬಡಾವಣೆಗಳಲ್ಲಿ 24X7 ಕುಡಿಯುವ ನೀರಿನ …
Read More »ಬೆಂಗಳೂರು | ಮುಂದುವರಿದ ಕಾರ್ಯಾಚರಣೆ: ₹18.60 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಡ್ರಗ್ಸ್ ವಿರುದ್ಧ ನಗರದ ವಿವಿಧ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಪ್ರತ್ಯೇಕ ಐದು ಪ್ರಕರಣಗಳಲ್ಲಿ ₹18.60 ಕೋಟಿ ಮೌಲ್ಯದ ಹೈಡ್ರೊಗಾಂಜಾ ಸೇರಿದಂತೆ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ನ ರಾಣಿ ಅಬ್ಬಕ್ಕ ಮೈದಾನದ ಬಳಿ ಮಹಿಳೆಯೊಬ್ಬರು ಹೈಡ್ರೊಗಾಂಜಾವನ್ನು ಕಾರಿನಲ್ಲಿ ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.
Read More »ಸಾಲಗಾರರಿಗೆ ಬಿಗ್ ರಿಲೀಫ್: ರೆಪೋ ದರವನ್ನು ಶೇ.5.25ಕ್ಕೆ ಇಳಿಸಿದ RBI
ಬ್ಲೂಮ್ ಬರ್ಗ್ ಸಮೀಕ್ಷೆ ನಡೆಸಿದ 44 ಅರ್ಥಶಾಸ್ತ್ರಜ್ಞರಲ್ಲಿ ಹೆಚ್ಚಿನವರು ಆರ್ ಬಿಐ ತನ್ನ ಬೆಂಚ್ ಮಾರ್ಕ್ ಮರುಖರೀದಿ ದರವನ್ನು ಶುಕ್ರವಾರ 5.25% ಕ್ಕೆ ಇಳಿಸುವ ನಿರೀಕ್ಷೆಯಿದೆ, ಹಣದುಬ್ಬರವು 4% ಗುರಿಗಿಂತ ಕಡಿಮೆಯಾಗಿದೆ. ಆದರೆ ಭಾರತೀಯ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಡಾಲರ್ ಗೆ ಪ್ರತಿಯಾಗಿ ರೂಪಾಯಿ 90 ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿಯುತ್ತಿದೆ, ಸಿಟಿಗ್ರೂಪ್ ಇಂಕ್, ಸ್ಟ್ಯಾಂಡರ್ಡ್ ಚಾರ್ಟೆಡ್ ಪಿಎಲ್ ಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುನ್ಸೂಚನೆಯಂತೆ …
Read More »ಟೋಲ್ ಬಳಿ ಸ್ಕೂಟರ್ ಹಾರಿಸಿ ಸವಾರ ಸಾವು
ಯಾದಗಿರಿ ತಾಲೂಕಿನ ಯರಗೋಳ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರ ನಿರ್ಮಾಣ ಹಂತದ ಟೋಲ್ ಗೇಟ್ ಬಳಿ ಬುಧವಾರ (ಡಿ.3) ತಡರಾತ್ರಿ ಸ್ಕೂಟರ್ ಸವಾರ ಸಿನಿಮೀಯ ಶೈಲಿಯಲ್ಲಿ ಮಣ್ಣಿನ ಗುಡ್ಡೆಯನ್ನು ಹಾರಿಸಿದ್ದು, ಈ ಪರಿಣಾಮ ಸ್ಕೂಟರ್ನಿಂದ ಕೆಳಗೆ ಬಿದ್ದ ಆತನ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪುರ ತಾಂಡಾದ ನಿವಾಸಿ ಸಚಿನ್ (22) ಮೃತ ಯುವಕ. ಘಟನೆ ದೃಶ್ಯ ಟೊಲ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾದಗಿರಿ …
Read More »ತೆರಿಗೆ ಹಣ ದುರುಪಯೋಗ ಆರೋಪ : ಪಂಜ ಗ್ರಾಪಂ ಸಿಬ್ಬಂದಿ ಅಮಾನತು
ಸುಳ್ಯ: ಪಂಜ ಗ್ರಾಮ ಪಂಚಾಯತ್ನ ತೆರಿಗೆ ವಸೂಲಾತಿಯ ಹಣವನ್ನು ಬ್ಯಾಂಕ್ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಪಂ ಸಿಬ್ಬಂದಿ ಬಾಬು ಎಂಬವರನ್ನು ಗ್ರಾಪಂ ಆಡಳಿತ ಅಮಾನತುಗೊಳಿಸಿದೆ.ಪಂಚಾಯತ್ ಸಿಬ್ಬಂದಿಯಾಗಿರುವ ಬಾಬು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ಗೆ ಪಾವತಿಸದೆ ದುರುಪಯೋಗ ಮಾಡಿದ್ದಾರೆ.ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಾಬುರನ್ನು ವಿಚಾರಿಸಿದಾಗ ಹಣ ದುರುಪಯೋಗ ಮಾಡಿದನ್ನು ಒಪ್ಪಿಕೊಂಡಿದ್ದಾರೆ. ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿ ಹಾಗೂ …
Read More »ಬೆಂಗಳೂರಲ್ಲಿ ಮೊಮೋಸ್ ಶಾಪ್ ಹುಡುಗನ ಮೇಲೆ ರೌಡಿಸಂ : ಹಲ್ಲೆ ಮಾಡಿ ಅಂಗಡಿ ಧ್ವಂಸಗೊಳಿಸಿದ ಪುಡಿ ರೌಡಿ!
ಬೆಂಗಳೂರಿನಲ್ಲಿ ಮೊಮೋಸ್ ಶಾಪ್ ಹುಡುಗನ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಬೈಕ್ ನಲ್ಲಿ ಬಂದಿದ್ದ ಮೂವರ ಪೈಕಿ ಓರ್ವ ಈ ಕೃತ್ಯ ಎಸಗಿದ್ದಾನೆ.ಮೊಮೋಸ್ ಶಾಪ್ ಹುಡುಗನ ಮೇಲೆ ಹಲ್ಲೆ ಮಾಡಿ ಅಂಗಡಿ ಧ್ವಂಸಗೊಳಿಸಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಯಾವ ಕಾರಣಕ್ಕಾಗಿ ಗಲಾಟೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





