ಕುಂದಗೋಳ ತಾಲೂಕಿನ ಗೌಡಗೇರಿ ಚೌಡಹಾಳ್ ಮಧ್ಯ ಇರುವ ಬೇರೆಗುಡ್ಡ ಬಳಿ ಸಾಯಂಕಾಲ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಎಂಬ ಮಾಹಿತಿ ಎಲ್ಲೆಡೆ ಹಬ್ಬಿದೆ. ಸದ್ಯಕ್ಕೆ ಗ್ರಾಮದಲ್ಲಿ ಭಯದ ವಾತಾವರಣ ಹಬ್ಬಿದೆ. ನಿವೃತ್ತಿ ಯೊದ ಶೇಖರ್ ಲಮಾಣಿ ಅವರ ಜಮೀನು ಗುಡ್ಡದ ಪಕ್ಕದಲ್ಲಿದ್ದು ಹೊಲದಲ್ಲಿ ಕೆಲಸ ಮಾಡುವಾಗ ಚಿರತೆ ಕಾಣಿಸಿದೆ. ಶೇಖರ್ ಅವರ ನಾಯಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಅದು ಗುಡ್ಡದಲ್ಲಿ ಮರೆಯಾಗಿದೆ . ಇದು ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

