ಗದಗ:- ಜಿಲ್ಲೆಯ ಶಿರಹಟ್ಟಿ ತಾಲೂಕು ಮಜ್ಜುರ ಬಳಿ ಇಂದು ಬೆಳಿಗ್ಗೆ ನಡೆದ ಅಪಘಾತ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಗದಗದಿಂದ ಶಿರಹಟ್ಟಿ ಮೂಲಕ ಕೇರಳ್ಳಿ ತಾಂಡಾಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.ಈ ದುರಂತದಲ್ಲಿ 5 ಜನ ಗಂಭೀರವಾಗಿ ಗಾಯಗೊಂಡಿದ್ದು, 15 ಮಂದಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರ ಪ್ರಕಾರ ಚಾಲಕನ ಅಜಾಗರೂಕ ಚಾಲನೆ ಕಾರಣವಾಗಿರಬಹುದೆಂಬ ಆರೋಪಗಳು ಕೇಳಿ …
Read More »ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 4.5 ಕೋಟಿ ಮೌಲ್ಯದ ಗಾಂಜಾ ವಶ : ಓರ್ವ ಅರೆಸ್ಟ್.!
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 4.5 ಕೋಟಿ ಮೌಲ್ಯದ ಗಾಂಜಾವನ್ನು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ನಿಜಾಮುದ್ದೀನ್ ಅಬೂಬಕರ್ ಎಂಬಾತನನ್ನ ಬಂಧಿಸಿದ್ದಾರೆ. 4.5 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಈತ ಏರ್ ಏಷ್ಯಾ ವಿಮಾನದಲ್ಲಿ ಗಾಂಜಾ ತಂದಿದ್ದನು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗ ಸಿಕ್ಕಿಹಾಕಿಕೊಂಡಿದ್ದಾನೆ. 4.5 ಕೋಟಿ ಮೌಲ್ಯದ ಹೈಡ್ರೋಪೋನಿಕಲ್ ಗಾಂಜಾ ವಶಪಡಿಸಿಕೊಂಡ ಭದ್ರತಾ ಸಿಬ್ಬಂದಿಗಳು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
Read More »ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರು ಯುವಕರ ಬಂಧನ
ಸವದತ್ತಿ/ಯರಗಟ್ಟಿ: ಮುರಗೋಡ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ಘಟನೆ ನ.23ರಂದು ನಡೆದಿದೆ. ಮಣಿಕಂಠ ಮಹಾಂತೇಶ ದಿನ್ನಿಮನಿ (28) ಹಾಗೂ ಈರಣ್ಣ ಮಹಾಂತೇಶ ಸಂಕಮ್ಮನವರ (26) ಆರೋಪಿತರು. ಗಿರಣಿಗೆ ಹೊರಟಿದ್ದ ಬಾಲಕಿಯನ್ನು ಬಲವಂತದಿಂದ ಕಬ್ಬು ಬೆಳೆದ ಜಮೀನಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.ಅಲ್ಲದೇ ಈ ವಿಷಯ ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ತಾಯಿ ಮುರಗೋಡ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರೂ …
Read More »ತಾಯಿಗೆ ಹಲ್ಲೆಗೈದ ಮಗಳ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಮೂಡುಶೆಡ್ಡೆ ಗ್ರಾಪಂನಲ್ಲಿ 65ರ ಹರೆಯದ ನಿರ್ಮಲಾ ಎಂಬವರಿಗೆ ಹಲ್ಲೆಗೈದ ಆಕೆಯ ಪುತ್ರಿ 35ರ ನೇತ್ರಾವತಿ ಎಂಬಾಕೆಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷೆಯಾಗಿರುವ ರಮಿತಾ ಸೂರ್ಯವಂಶಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ನ.25ರಂದು ಮಧ್ಯಾಹ್ನ 1 ಗಂಟೆಗೆ ಮೂಡುಶೆಡ್ಡೆ ಗ್ರಾಪಂ ಎದುರು ತಾಯಿಗೆ ಮಗಳು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ನ.29ರ ಪೂ. 11ಕ್ಕೆ ತನ್ನ ಗಮನಕ್ಕೆ ಬಂದಿದೆ. …
Read More »ಮಂಡ್ಯದ ಮದ್ದೂರಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರಿನಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಯೋಗಕ್ಷೇಮ ವಿಚಾರಿಸಲು ತೆರಳಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಭಾನುವಾರ ತಡರಾತ್ರಿ ಮನೆಗೆ ನುಗ್ಗಿ ಕಳ್ಳರು ಸುಮಾರು 60 ಗ್ರಾಂ ಚಿನ್ನಾಭರಣ 1 ಲಕ್ಷ ರೂ ಹಣದೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮದ್ದೂರು ಠಾಣೆಯ ಪೋಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್, ಮದ್ದೂರು …
Read More »ಜಮಖಂಡಿ; ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ: ನಾಲ್ವರು ಯುವಕರ ಸಾವು
ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ 12.30ಕ್ಕೆ ಕಬ್ಬಿನ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.ಸಿದ್ದಾಪುರ ಗ್ರಾಮದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್ ಶೇಡಬಾಳ(17) ಮೃತರು.ಸಿದ್ದಾಪುರ ಗ್ರಾಮದಿಂದ ಸ್ನೇಹಿತರು ಸೇರಿಕೊಂಡು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ಗೆ ಕಾರು ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಜಮಖಂಡಿ ಗ್ರಾಮೀಣ …
Read More »ಹೃದಯಾಘಾತಕ್ಕೆ ನವವಿವಾಹಿತ ಮೃತ್ಯು!!
ನವವಿವಾಹಿತನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಮೀಪದ ಹನುಮಂತಾಪುರ ಎಂಬಲ್ಲಿ ಸೋಮವಾರ ನಡೆದಿದೆ.ಸೋಮವಾರ ಹರಪನಹಳ್ಳಿಯ ಬಂಡ್ರಿಯ ವಧುವಿನ ಮನೆಗೆ ಹೋಗಿದ್ದರು. ದೇವಸ್ಥಾನದಿಂದ ಮೆರವಣಿಗೆ ಮೂಲಕ ವಧುವಿನ ಮನೆಗೆ ಕರೆದುಕೊಂಡು ಹೋಗಿದ್ದರು. ವಧುವಿನ ಮನೆ ತಲುಪಿದ ರಮೇಶ್ ದಂಪತಿಗಳು ದೇವರಿಗೆ ಕೈ ಮುಗಿಯಲು ತೆರಳಿದ ವೇಳೆ ಕುಸಿದು ಬಿದ್ದಿದ್ದರು.ರಮೇಶನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಅಷ್ಟರಲ್ಲೇ ರಮೇಶ್ ಕೊನೆಯುಸಿರೆಳೆದಿದ್ದಾರೆ.
Read More »ಪ್ರೇಯಸಿನ್ ನೋಡಲು ಬಂದ ಯುವಕನನ್ನ ಕೊಲೆ
ಅಬ್ಧುಲ್ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಸಹೋದರನಿಗೆ ಯುವತಿಯ ತಂದೆ ಕರೆ ಮಾಡಿ ತಿಳಿಸಿದ್ದಾರೆ. ಜೊತೆಗೆ ಗಜಾನನ ನಗರ ಬಳಿಯಲ್ಲಿ ಬರಲು ತಿಳಿಸಿದ್ದಾರೆ. ಅಂತೆಯೇ ಅಬ್ದುಲ್ ಸಹೋದರ ಸ್ಥಳಕ್ಕೆ ಬರುತ್ತಿದ್ದಂತೆಯೇ ಮೃತದೇಹವನ್ನು ಆಟೋದಲ್ಲಿ ಇಟ್ಟು ಯುವತಿ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ.ಇತ್ತ ಈ ಕುರಿತು ಅಬ್ಧುಲ್ ಹುಸೇನ್ ಕುಟುಂಬಸ್ಥರು ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಯುವತಿಯ ಕುಟುಂಬಸ್ಥರ ವಿರುದ್ಧ ಕೊಲೆ ಮಾಡಿರುವ …
Read More »IAS ಅಧಿಕಾರಿ ಮಗಳ ಅನುಮಾನಾಸ್ಪದ ಸಾವು!
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಂಗಳಗಿರಿ-ತಾಡೇಪಲ್ಲಿ ಹಿರಿಯ ಐಎಎಸ್ ಅಧಿಕಾರಿ ಮತ್ತು ಎಸ್ಸಿ ಕಾರ್ಪೊರೇಷನ್ ಕಾರ್ಯದರ್ಶಿ ಚಿನ್ನರಾಮ್ ಅವರ ಪುತ್ರಿ ಮಾಧುರಿ ಸಾಹಿತಿ ಬಾಯಿ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಐಎಎಸ್ ಅಧಿಕಾರಿ ಕುಟುಂಬ ಮಗಳ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದು, ಇದಕ್ಕೆ ಆಕೆಯ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ತಾವು ಮನೆಯಲ್ಲಿರದಿದ್ದಾಗ ಮಗಳಾದ ಮಾಧುರಿ ರೂಮಿನ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. …
Read More »ನಡತೆಯ ಮೇಲಿನ ಅನುಮಾನದಿಂದ ಲಿವ್-ಇನ್ ಸಂಗಾತಿಯ ಕೊಲೆ, ಪ್ರಿಯಕರ ಆತ್ಮಹತ್ಯೆಗೆ ಶರಣು!
ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆಕೆಯ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕೊಲೆಯಾದ ಮಹಿಳೆಯನ್ನು ಲಲಿತಾ (49) ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಲಕ್ಷ್ಮಿನಾರಾಯಣ (51) ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ತಕ್ಷಣವೇ ರಾಜಗೋಪಾಲನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





