ಸವದತ್ತಿ/ಯರಗಟ್ಟಿ: ಮುರಗೋಡ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ಘಟನೆ ನ.23ರಂದು ನಡೆದಿದೆ. ಮಣಿಕಂಠ ಮಹಾಂತೇಶ ದಿನ್ನಿಮನಿ (28) ಹಾಗೂ ಈರಣ್ಣ ಮಹಾಂತೇಶ ಸಂಕಮ್ಮನವರ (26) ಆರೋಪಿತರು. ಗಿರಣಿಗೆ ಹೊರಟಿದ್ದ ಬಾಲಕಿಯನ್ನು ಬಲವಂತದಿಂದ ಕಬ್ಬು ಬೆಳೆದ ಜಮೀನಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.ಅಲ್ಲದೇ ಈ ವಿಷಯ ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ತಾಯಿ ಮುರಗೋಡ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂದಿಸಲಾಗಿದ್ದು, ಮುರಗೋಡ ಪೋಲಿಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

