Breaking News

BigTv News

ರಾಯಚೂರಿನಲ್ಲಿ KSRTC ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು

ಸಾರಿಗೆ ಸಂಸ್ಥೆ ಬಸ್ ಹರಿದು ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಿಂಗಸೂಗೂರು ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಸಿದ್ದರಾಮ(11) ಸ್ಥಳದಲ್ಲೇ ಮೃತಪಟ್ಟ ಬಾಲಕ. ಬಾಲಕ ಧನಂಜಯ್​ನ ಎರಡು ಕೈಗಳಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಮೂಲತಃ ಲಿಂಗಸೂಗೂರು ಪಟ್ಟಣದ ನಿವಾಸಿಯಾದ ಬಸವರಾಜ ಎಂಬವರು ಬೇರೆ ಊರಿಗೆ ತೆರಳು ತನ್ನ ಇಬ್ಬರು ಮಕ್ಕಳಾದ ಸಿದ್ದರಾಮ ಹಾಗೂ ಧನಂಜಯ್ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. …

Read More »

ನಕಲಿ ಆರ್ ಟಿಸಿ ನೀಡಿ ಜಾಮೀನು – ಆರೋಪಿ ಅರೆಸ್ಟ್

ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ಆರ್ ಟಿಸಿ ನೀಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಪುತ್ತೂರು ನಿವಾಸಿ ಅಬ್ದುಲ್ ಹಾಶೀಮ್ (34) ಎಂದು ಗುರುತಿಸಲಾಗಿದೆ.ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ನಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಠಾಣೆಯಲ್ಲಿ …

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ‘ವಿಲಾಸಿ ಜೀವನ’: ಮೊಬೈಲ್, ಟಿ.ವಿ ಸೌಲಭ್ಯ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ವಿಶೇಷ ಆತಿಥ್ಯ ಮುಂದುವರಿದಿದೆ. ಕಾರಾಗೃಹದೊಳಗೆ ಕೈದಿಗಳು ವಿಲಾಸಿ ಜೀವನ ನಡೆಸುತ್ತಿರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ.ಅತ್ಯಾಚಾರದ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ,ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ಮೊಬೈಲ್‌ ಹಿಡಿದು ಮಾತನಾಡುತ್ತಿರುವ, ಬ್ಯಾರಕ್‌ ಒಳಗೆ ಎಲ್‌ಇಡಿ ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ.ವಿಡಿಯೊಗಳು ಹರಿದಾಡಿದ ಬೆನ್ನಲ್ಲೇ ಪ್ರಕರಣದ …

Read More »

ಸತ್ತಿದ್ದಾನೆಂದು ಅಂತ್ಯಕ್ರಿಯೆಗೆ ಸಿದ್ಧತೆ : ಶವ ಮನೆಗೆ ತಂದ ಕೂಡಲೇ ಕಣ್ಣು ಬಿಟ್ಟ ವ್ಯಕ್ತಿ, ಗದಗದಲ್ಲಿ ವಿಚಿತ್ರ ಘಟನೆ!

ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು ಗುರುತಿಸಲಾಗಿದೆ.ಇದನ್ನು ಕಂಡ ಸ್ಥಳೀಯರು ಇದು ದೇವರ ಪವಾಡವೇ ಅಂತಿದ್ದಾರೆ. ಬೇಗ ಗುಣಮುಖರಾಗಿ ಬರಲಿ ಎಂದು ಕುಟುಂಬಸ್ಥರು, ಸ್ನೇಹಿತರು, ಬಂದು ಬಾಂಧವರು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ನಾರಾಯಣ ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆಗಳ …

Read More »

ಚಿಕ್ಕಮಗಳೂರಲ್ಲಿ ಖಾಸಗಿ ಬಸ್ ಪಲ್ಟಿ : ಪ್ರವಾಸಕ್ಕೆ ಬಂದಿದ್ದ 11 ವಿದ್ಯಾರ್ಥಿಗಳಿಗೆ ಗಾಯ, ಐವರ ಸ್ಥಿತಿ ಚಿಂತಾಜನಕ

ಚಿಕ್ಕಮಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಶೃಂಗೇರಿ ತಾಲೂಕಿನ ಕಾವಡಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಅಪಘಾತದಲ್ಲಿ 11 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಐವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೃಂಗೇರಿ ಪ್ರವಾಸಕ್ಕೆ ವಿದ್ಯಾರ್ಥಿಗಳ ತಂಡ ಬಂದಿತ್ತು. ಚಿತ್ರದುರ್ಗದ ವಾಸವಿ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಾಗ ಈ ಅಪಘಾತ ಸಂಭವಿಸಿದೆ.ಬಸ್ ನಲ್ಲಿ ಸುಮಾರು 25ಕ್ಕೂ …

Read More »

ಮಂಗಳೂರಿನ ಖ್ಯಾತ ಉದ್ಯಮಿಯ ಪುತ್ರ ನದಿ ತೀರದಲ್ಲಿ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ.!

ಮಂಗಳೂರಿನ ಖ್ಯಾತ ಉದ್ಯಮಿಯ ಪುತ್ರ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಆಳ್ವ (29) ಮೃತದೇಹ ಪತ್ತೆಯಾಗಿದೆ.ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ನಿಖರ ಕಾರಣ ತಿಳಿದು ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಲಿ ತಾಲೂಕಿನ ಬಪ್ಪನಾಡು ಬಳಿ ಈ ಘಟನೆ ನಡೆದಿದೆ.ಈತ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಉದ್ಯಮಿ ನವೀನ್ ಚಂದ್ರ ಆಳ್ವಾ ಪುತ್ರ ಅಭಿಷೇಕ್ ಮೃತಪಟ್ಟ ಯುವಕ. ನ.5 ರಂದು ಮೂಲ್ಕಿ …

Read More »

ಮೂರು ವರ್ಷ ಪ್ರೀತಿಸಿ ಮದುವೆ ಬೇಡ ಎಂದ ಯುವಕ: ಮನನೊಂದು ಯುವತಿ ಆತ್ಮಹತ್ಯೆ

ಬ್ಯಾಡಗಿ ತಾಲೂಕಿನ ಶಂಕ್ರಿಪುರ ಗ್ರಾಮದ ಸಿಂಧೂರಿ ಪರಮೇಶಪ್ಪ ಪರಮಣ್ಣನವರ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯನ್ನು ಕುದರಿಹಾಳ ಗ್ರಾಮದ ಯುವಕ ಶರತ ನೀಲಪ್ಪನವರ ಎಂಬುವನು ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಮದುವೆ ವಿಚಾರ ಬಂದಾಗ ಶರತ್ ಆಕೆಯನ್ನು ನಿಕಾರಿಸಿದ್ದ. ಇದರಿಂದ ಮನನೊಂದ ಸಿಂಧೂರಿ ಶುಕ್ರವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಒಂದು ವಾರದ ಹಿಂದೆ …

Read More »

‘ಫೋನ್ ಪೇ’ ಮೂಲಕ ಲವ್ವಿಡವ್ವಿ : 9 ನೇ ತರಗತಿ ವಿದ್ಯಾರ್ಥಿನಿಯನ್ನ ‘ಗರ್ಭಿಣಿ’ ಮಾಡಿದ ಭೂಪ ಅರೆಸ್ಟ್.!

ಫೋನ್ ಪೇ’ ಮೂಲಕ ಲವ್ವಿಡವ್ವಿ ನಡೆಸಿದ ಯುವಕ 9 ನೇ ತರಗತಿ ವಿದ್ಯಾರ್ಥಿನಿಯನ್ನ ಗರ್ಭಿಣಿ ಮಾಡಿ ಇದೀಗ ಜೈಲು ಸೇರಿದ್ದಾನೆ.ಹೌದು, ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಶಿವಮೂರ್ತಿ (25) ಮಾಡಿದ ತಪ್ಪಿಗೆ ಕಂಬಿ ಎಣಿಸುತ್ತಿದ್ದಾನೆ.ಈತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.ಸಂತ್ರಸ್ತ ಬಾಲಕಿಯ ತಂದೆ ಚಿಕನ್ ಶಾಪ್ ಹೊಂದಿದ್ದರು. ಅಲ್ಲಿಗೆ ಮಾಂಸ ಖರೀದಿಗೆ ಅಂತ ಶಿವಮೂರ್ತಿ ಬರ್ತಾನೆ. ನಂತರ ಫೋನ್ ಫೇ ಮೂಲಕ …

Read More »

6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಜೀವ ಹೋಯ್ತು! ಆದರೆ ಅಂತ್ಯಕ್ರಿಯೆ ವೇಳೆ ಕಣ್ಬಿಟ್ಟ ವ್ಯಕ್ತಿ

6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು ಗುರುತಿಸಲಾಗಿದೆ.ನಾರಾಯಣ ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ಮೃತಪಟ್ಟಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದರು.ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ …

Read More »

ಬೆಂಗಳೂರಲ್ಲಿ ಘೋರ ದುರಂತ : ಸಿಮೆಂಟ್ ಮಿಕ್ಸರ್ ಲಾರಿ ಅವಂತರಕ್ಕೆ 1ವರ್ಷ 8 ತಿಂಗಳ ಮಗು ಸಾವು!

ಬೆಂಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಒಂದು ವರ್ಷದ ಎಂಟು ತಿಂಗಳಿನ ಮಗು ಬಲಿಯಾಗಿದೆ. ಪ್ರಣವ್ ಎನ್ನುವ ಮಗು ದಾರುಣವಾಗಿ ಸಾವನಪ್ಪಿದೆ. ನವೆಂಬರ್ 7ರಂದು ಕುಂದಲಹಳ್ಳಿ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ.ಮೋಲ್ಡಿಂಗ್ ಮುಗಿಸಿ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಿದ್ಯುತ್ ತಂತಿ ಎಳೆದಿದ್ದು, ವೈರಿಂಗ್ ಕಂಬ ಕಿತ್ತು ಬಂದು ಮನೆ ಗೋಡೆ ಕುಸಿದಿದೆ. ಆಟ ಆಡುತ್ತಿದ್ದ ಮಗು ಮೇಲೆ ಮನೆಯ ಗೋಡೆ ಅವಶೇಷ ಬಿದ್ದಿದೆ. …

Read More »