Breaking News

ಜೂ.೨೫ ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಹುಬ್ಬಳ್ಳಿ ; ಸಮಾಜದಲ್ಲಿ ಗಮನಾರ್ಹ ಸಾಧನೆಗೈದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಇತರ ಯುವ ಪ್ರತಿಭೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಎಂದು ಸ್ವಾಭಿಮಾನ ಫೌಂಡೇಶನ್ ನ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಹೇಳಿದರು

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಭಿಮಾನ ಫೌಂಡೇಶನ್ ವತಿಯಿಂದ ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ಯಲ್ಲಿ ಗಮನಾರ್ಹ ಸಾಧನೆ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಮತ್ತು ಆರ್ಥಿಕವಾಗಿ ಹಿಂದುವಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವು ಜೂ.೨೫ ರಂದು ಶನಿವಾರ ಸಂಜೆ ೫ ಘಂಟೆಗೆ ನಗರದ ದೇಶಪಾಂಡೆ ನಗರದಲ್ಲಿನ ಸವಾಯಿ ಗಂಧರ್ವ ಕಾಲಾಕ್ಷೇತ್ರ ದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಮಜಿಕ ಕಾರ್ಯಕರ್ತ ಡಾ.ಕೆ ಎಸ್ ಶರ್ಮಾ ವಹಿಸುವರು, ಮುಖ್ಯ ಅಧಿತಿಗಳಾಗಿ ಹುಧಾ ಮಹಾನಗರ ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ ಬಿ,ವಹಿಸುವರು ಎಂದರು.
ಈ ಸಂಧರ್ಭದಲ್ಲಿ ಸ್ವಾಭಿಮಾನ ಫೌಂಡೇಶನ ಶರಣಪ್ಪ ಒಮ್ಮಿಗಟ್ಟಿ, ಪುಲಕೇಶ ಮಲ್ಯಾಳ, ಮಹೇಶ ಭಂಡಾರಿ ಮತ್ತು ತ್ಯಾಗರಾಜ ಸಿ ಉಪಸ್ಥಿತರಿದ್ದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *