ಆಂಧ್ರಪ್ರದೇಶ ಕರ್ನೂಲ್ನಲ್ಲಿ ಬಸ್ಗೆ ಬೆಂಕಿ ತಗುಲಿ 20 ಜನ ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ನಡೆದಿತ್ತು. ಈ 20 ಜನರ ಸಾವಿನೊಂದಿಗೆ ಅನೇಕ ಕುಟುಂಬಗಳ ಕನಸುಗಳು ಸುಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಮಕ್ಕಳು ಸೋದರ, ಸೋದರಿ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಆದರೆ ಇದೇ ಸುಟ್ಟು ಕರಕಲಾದ ಬಸ್ನಲ್ಲಿ ಕೆಲವರು ಚಿನ್ನ ಹುಡುಕುವ ಯತ್ನದಲ್ಲಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಆಕ್ರೋಶ …
Read More »ಪುತ್ರಿ ಮೃತದೇಹಕ್ಕೂ ಲಂಚ ಕೇಳಿದ ಬೆಳ್ಳಂದೂರು ಇನ್ಸ್ಪೆಕ್ಟರ್ ಅಮಾನತು
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ (CFO) ಕೆ. ಶಿವಕುಮಾರ್ ಅವರ 34 ವರ್ಷದ ಪುತ್ರಿ ಅಕ್ಷಯಾ ಅವರು ಸೆಪ್ಟೆಂಬರ್ 18 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸುದ್ದಿ ತಿಳಿದು ಮುಂಬೈನಿಂದ ಬೆಂಗಳೂರಿಗೆ ಧಾವಿಸಿದ ಪೋಷಕರಿಗೆ, ಮಗಳ ಅಂತ್ಯಸಂಸ್ಕಾರ ನಡೆಸಲು ಮುಂದಾದಾಗ ಲಂಚದ ಬಿಸಿ ತಟ್ಟಿದೆ. ಮಗಳ ಸಾವಿನ ದುಃಖದಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರಿಗೆ, ಮರಣೋತ್ತರ ಪರೀಕ್ಷೆ ನಡೆಸಲು ಮತ್ತು ಪ್ರಕರಣ ದಾಖಲಿಸಲು ಲಂಚಕ್ಕಾಗಿ ಪೀಡಿಸಿದ ಆರೋಪದ …
Read More »ಬುರ್ಖಾ ಧರಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆ ಸೆರೆ.
ನೆರೆ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರುತ್ತಿದ್ದ ನೈಜೀರಿಯಾ ಪ್ರಜೆಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನೈಜಿರಿಯಾ ಪ್ರಜೆ ಸ್ಟೆಫಿನ್ ಬ್ಲೆಸ್ಸಿಂಗ್ ನೋಸ್ಲಿ (35) ಬಂಧಿತ ಆರೋಪಿ. 35 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ಆರೋಪಿ ಪೊಲೀಸರ ಕಂಡು ಪರಾರಿಯಾಗುವ ಯತ್ನದಲ್ಲಿ ಎಂಡಿಎಂಎ ಕ್ರಿಸ್ಟಲ್ ಪೊಟ್ಟಣಗಳನ್ನು ರಸ್ತೆ ಬದಿ ಎಸೆದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ …
Read More »ಎರಡೂವರೆ ತಿಂಗಳ ಬಳಿಕ ಜೈಲಿನಿಂದ ಹೊರಬಂದ ದರ್ಶನ್ ಲುಕ್ ಹೇಗಿದೆ? ಇಲ್ಲಿದೆ ವಿಡಿಯೋ.
ಸುಪ್ರೀಂ ಕೋರ್ಟ್ನಲ್ಲಿ ಆರೋಪಿಗಳ ಜಾಮೀನು ರದ್ದಾಗಿತ್ತು. ಆಗಸ್ಟ್ 14ರಂದು ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ದರ್ಶನ್ ತೂಕ ಕಳೆದುಕೊಂಡು ತೆಳ್ಳಗಾಗಿದ್ದಾರೆ, ಸರಿಯಾದ ಸೌಲಭ್ಯ ಇಲ್ಲದೇ ಕಂಗೆಟ್ಟಿದ್ದಾರೆ ಅಂತ ಸುದ್ದಿ ಆಗಿತ್ತು.ಅಂತೂ ಇಂತೂ 81 ದಿನಗಳ ಬಳಿಕ ಕೋರ್ಟ್ ವಿಚಾರಣೆಗಾಗಿ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ. ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ವಿಚಾರಣೆಗಾಗಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಜೈಲಿನಿಂದ ಕರೆದುಕೊಂಡು ಬರಲಾಗಿತ್ತು. …
Read More »ಬಾಲಕನ ಬಲಿ ಪಡೆದ ಚಿರತೆ: ಕಂಡಲ್ಲಿ ಗುಂಡಿಕ್ಕಲು ಅರಣ್ಯ ಇಲಾಖೆ ಆದೇಶ..
ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ಚಿರತೆ ದಾಳಿಗೆ 13 ವರ್ಷದ ಬಾಲಕ ಸಾವನ್ನಪ್ಪಿದ ಬಳಿಕ, ನರಹಂತಕ ಚಿರತೆಯನ್ನು ಸೆರೆಹಿಡಿದು ನಿರ್ಮೂಲನೆ ಮಾಡಲು ಅರಣ್ಯ ಇಲಾಖೆ ಸೋಮವಾರ ಆದೇಶಿಸಿದೆ. ಬಾಲಕನ ಸಾವಿನಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಅರಣ್ಯ ಇಲಾಖೆಯ ವಾಹನಕ್ಕೆ ಬೆಂಕಿ ಹಚ್ಚಿದ ಮಾರನೇ ದಿನವೇ ಈ ಕಠಿನ ನಿರ್ಧಾರ ಪ್ರಕಟವಾಗಿದೆ.ರವಿವಾರ ಪಿಂಪಾರ್ಖೇಡ್ ಗ್ರಾಮದಲ್ಲಿ ತೋಟದ ಬಳಿ ಆಟವಾಡುತ್ತಿದ್ದ ರೋಹನ್ ಬೊಂಬೆ (13) ಎಂಬ ಬಾಲಕನನ್ನು ಚಿರತೆ ಕೊಂದು ಹಾಕಿತ್ತು.
Read More »ತೆಕ್ಕಟ್ಟೆ – ಸ್ಕೂಟರ್ ಡಿಕ್ಕಿ ಹೊಡೆದು ಅಯ್ಯಪ್ಪ ಮಾಲಾಧಾರಿ ಸಾವು.
ಸ್ಕೂಟರ್ ಒಂದು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಅಯ್ಯಪ್ಪ ಮಾಲಾಧಾರಿ ಸಾವನಪ್ಪಿದ ಘಟನೆ ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವೆಂಬರ್ 3 ರಂದು ಸಂಭವಿಸಿದೆ. ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ.
Read More »ಬಾಗಲಕೋಟೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿ : ಪತಿ ಸಾವಿನ ಸುದ್ದಿ ತಿಳಿದು ಪತ್ನಿಯು ಹೃದಯಾಘಾತದಿಂದ ಸಾವು!
ಬಾಗಲಕೋಟೆಯಲ್ಲಿ ಸಾವಿನಲ್ಲು ದಂಪತಿಗಳು ಒಂದಾಗಿರುವ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಶಶಿಧರ್ ಪತ್ತಾರ್ (40) ಸಾವನ್ನಪ್ಪಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಿಳಗಿಯ ನಿವಾಸಿ ಆಗಿರುವ ಇವರು ಸಾವಿನಲ್ಲೂ ಕೂಡ ಒಂದಾಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇಬ್ಬರ ಮದುವೆ ಆಗಿತ್ತು.ಪತಿಯ ಸಾವಿನ ಸುದ್ದಿ ತಿಳಿದು ಶಶಿಧರ್ ಅವರ ಪತ್ನಿ ಸರೋಜಾ ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Read More »ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣ ಎನ್ನುವ ಆರೋಪ, ಮನನೊಂದು ಯುವಕ ಆತ್ಮಹತ್ಯೆ!
ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಯುವಕ ಕಾರಣ ಎನ್ನುವ ಆರೋಪದಿಂದ ಮನನೊಂದು ಯುವಕನೊಬ್ಬ ವಾಟ್ಸಾಪ್ನಲ್ಲಿ ಆಡಿಯೋ ನೋಟ್ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಾಯ್ಸ್ ನೋಟ್ಅನ್ನು ಕಳಿಸಿ ನಾಲೆಗೆ ಹಾರಿ ಯುವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ನಿವಾಸಿ 27 ವರ್ಷದ ರಾಮು ಮೃತ ಯುವಕ ಎಂದು ಗುರುತಿಸಲಾಗಿದೆ.
Read More »ವಿದ್ಯಾರ್ಥಿನಿಯನ್ನು ಅಪಹರಿಸಿ ದೌರ್ಜನ್ಯ – ಕಾಲಿಗೆ ಗುಂಡು ಹಾರಿಸಿ ಮೂವರ ಬಂಧನ!
ಮಂಗಳವಾರ ಮುಂಜಾನೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ತವಾಸಿ, ಕಾರ್ತಿಕ್ ಮತ್ತು ಕಾಳೀಶ್ವರನ್ ಎಂದು ಗುರುತಿಸಲಾದ ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ವರದಿಗಳ ಪ್ರಕಾರ, ಕೊಯಮತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ, ಬಲವಂತವಾಗಿ ಬೇರೆ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಚಾರ ತಿಳಿಯುತ್ತಲೇ ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಹಿಡಿಯಲು ಏಳು ವಿಶೇಷ ತಂಡಗಳನ್ನು ರಚಿಸಲಾಗಿತ್ತು ಎಂದು …
Read More »ಮನೆಕೆಲಸದವರಿಂದ ನಾಯಿಯ ಬರ್ಬರ ಹತ್ಯೆ: ಮೃತದೇಹ ಹೊರತೆಗೆದು ಶವಪರೀಕ್ಷೆಗೆ ನಿರ್ಧಾರ
ಮನೆಕೆಲಸದ ಮಹಿಳೆಯೊಬ್ಬರು ನಾಲ್ಕು ವರ್ಷದ ನಾಯಿ ಮರಿಯನ್ನು ಲಿಫ್ಟ್ನಲ್ಲಿ ಬಟ್ಟೆ ಒಗೆದಂತೆ ನೆಲಕ್ಕಪ್ಪಳಿಸಿ ಕೊಲೆಗೈದಿರುವ ಹೇಯ ಕೃತ್ಯ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ನಾಯಿಯನ್ನು ಮಣ್ಣು ಮಾಡಲಾಗಿದ್ದು, ಇದೀಗ ಮೃತದೇಹ ಹೊರತೆಗೆದು ಶವಪರೀಕ್ಷೆ ಮಾಡಲಾಗುತ್ತದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





