ಅಕ್ಟೋಬರ್ 16ರಂದು ಸಂದೀಪ್ ಬರ್ತ್ಡೇ ಇತ್ತು. ಪಾರ್ಟಿಗೆಂದು ಸ್ನೇಹಿತರನ್ನು ಬಾರ್ಗೆ ಕರೆದುಕೊಂಡು ಹೋಗಿದ್ದರು. ಪಾರ್ಟಿ ಮುಗಿದ ಬಳಿಕ ಸಂದೀಪ್ ಬಿಲ್ ಕಟ್ಟಿದ್ದರು. ಆದರೆ 2ನೇ ಸಲ ಬಿಲ್ ಕಟ್ಟುವಂತೆ ಸ್ನೇಹಿತರು ಸಂದೀಪ್ಗೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಸಂತೋಷ್ ಗಲಾಟೆ ಮಾಡಿದ್ದರು. ಇದರಿಂದ ಬೇಸರಗೊಂಡು ಸಂದೀಪ್ ವಾಪಸ್ ಊರಿಗೆ ಬಂದಿದ್ದರು.ಅಷ್ಟಕ್ಕೆ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. …
Read More »33 ಲಕ್ಷದ ವಿಮೆ, ಅಕ್ರಮ ಸಂಬಂಧ: ಮಗನ ಕೊಂದು ಹೆದ್ದಾರಿಯಲ್ಲಿ ಶವ ಎಸೆದ ತಾಯಿ.
ತಾಯಿಯೇಮಗನ ಕೊಲೆ ಮಾಡಿ ಹೆದ್ದಾರಿಯಲ್ಲಿ ಶವ ಎಸೆದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆಕಾರಣ 33 ಲಕ್ಷದ ವಿಮೆ ಹಾಗೂ ಆಕೆಗಿರುವ ಅಕ್ರಮ ಸಂಬಂಧ. ಆ ಮಹಿಳೆ ತನ್ನ ಪ್ರಿಯಕರನಿಂದ ತನ್ನ ಮಗನನ್ನು ಕೊಲೆ ಮಾಡಿಸಿ, ಘಟನೆಯನ್ನು ಅಪಘಾತದಂತೆ ಬಿಂಬಿಸಿ , ಶವವನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ.ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸತ್ಯ ಬೆಳಕಿಗೆ ಬಂದಿದೆ. ಈ ಘಟನೆ ಕಾನ್ಪುರ ದೇಹತ್‌ನ ಅಂಗದ್‌ಪುರ್ ಬರೌರ್ ಗ್ರಾಮದಲ್ಲಿ ನಡೆದಿದೆ.
Read More »ಬಾಲಕಿ ಹತ್ಯೆ ಕೇಸ್: ಆರೋಪಿಗೂ 2ನೇ ಮದುವೆ, ತನಿಖೆ ವೇಳೆ ಇನ್ಸ್ಟಾಗ್ರಾಮ್ ರೋಮಿಯೋ ಅನ್ನೋದು ಬಯಲು.
ಕುಂಬಳಗೋಡಿನಲ್ಲಿ ಮಲತಂದೆಯಿಂದಲೇ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಶಿಲ್ಪಾಳಂತೆ ಆರೋಪಿ ದರ್ಶನ್ಗೂ ಇದು 2ನೇ ಮದುವೆ. ಅಷ್ಟೇ ಅಲ್ಲದೆ, ನಾಲ್ಕೈದು ಹುಡುಗಿಯರೊಂದಿಗೆ ಆರೋಪಿ ಲವ್ನಲ್ಲಿದ್ದ.ಕೊಲೆ ಆರೋಪಿ ದರ್ಶನ್ ಇನ್ಸ್ಟಾಗ್ರಾಮ್ನಲ್ಲಿ ಬಣ್ಣಬಣ್ಣದ ಫೋಟೋ ಹಾಕುತ್ತಿದ್ದ. ಹೀಗಾಗಿ ನಾಲ್ಕೈದು ಹುಡುಗಿಯರ ಜೊತೆ ಲವ್ನಲ್ಲೂ ಇದ್ದ. ಲವ್ ಮಾಡುತ್ತಿದ್ದ ಓರ್ವ ಯುವತಿ ಜೊತೆಗೂ ದರ್ಶನ್ ಮದುವೆಯಾಗಿದ್ದ.ಸೋಮವಾರ ನೆಲಮಂಗಲ ಬಳಿ ಒಬ್ಬನೇ ನಿಂತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕುಂಬಳಗೋಡು ಪೊಲೀಸರು ಆತನನ್ನ ಬಂಧಿಸಿ ಕರೆತಂದಿದ್ದಾರೆ.
Read More »ಬಿಸಿಲೆ ಘಾಟ್ ಘಟನೆ: ಆಂಬುಲೆನ್ಸ್‌ಗೆ ಅಡ್ಡಿ, ಸ್ಕೂಟಿ ಸವಾರನ ಹುಚ್ಚಾಟ!
ಬಿಸಿಲೆ ಘಾಟ್‌ನಲ್ಲಿ ಇತ್ತೀಚೆಗೆ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಈ ಗಾಯಾಳುಗಳಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆಯನ್ನು ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ತುರ್ತಾಗಿ ಸಾಗಿಸುವ ಕಾರ್ಯವನ್ನು ಆಂಬುಲೆನ್ಸ್ ಸಿಬ್ಬಂದಿ ಕೈಗೊಂಡಿದ್ದರು.ಸ್ಕೂಟಿ ಸವಾರನ ಈ ಬೇಜವಾಬ್ದಾರಿಯುತ ವರ್ತನೆಯನ್ನು ಆಂಬುಲೆನ್ಸ್‌ನ ಸಹ-ಚಾಲಕ ಕಾರ್ತಿಕ್ ಅವರು ತಮ್ಮ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ದಾಖಲಿಸಿಕೊಂಡಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತುರ್ತು ಸೇವೆಗೆ ಅಡ್ಡಿಪಡಿಸಿದ ಕಾರಣ ಸ್ಕೂಟಿ …
Read More »ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ.
60 ವರ್ಷ ವಯಸ್ಸಿನ ಕುಮಾರಪ್ಪ, ಇವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ. ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸಾವನ್ನಪ್ಪಿದ್ದು, ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ …
Read More »ಆಸೆಗಿಂತ ದೊಡ್ಡ ಶತ್ರುವಿಲ್ಲ! 5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು! ಆದ್ರೆ ನಡೆದಿದ್ದು ಬೇರೆ…
ಕೋಟ್ಯಂತರ ಮೌಲ್ಯದ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ದವರ ಮನೆಗೆ ಯುವತಿ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಂಡ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದಿದ್ದರು. ಈ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮಂಗಳ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕಳ್ಳತನ ಮಾಡಿ ಅಡಮಾನ ಇಟ್ಟಿದ್ಳು. ಆ ಹಣವನ್ನೂ ಆನ್‌ಲೈನ್ …
Read More »ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಮದುವೆಗೂ ಮುನ್ನ ದಿನವೇ ನವವಧು ಸಾವು.!
ಚಿಕ್ಕಮಗಳೂರು ಜಿಲ್ಲೆಯ ಅಂಜಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಳೆ ಮದುವೆ ಸಿದ್ಧತೆಯಲ್ಲಿದ್ದ ವಧು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.ಶೃತಿ (32) ಮೃತ ಯುವತಿ. ತರೀಕೆರೆಯ ದಿಲೀಪ್ ಜೊತೆ ನಾಳೆ ಶೃತಿ ವಿವಾಹ ತರೀಕೆರೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ಆದರೆ ಇಂದು ಮನೆಯಲ್ಲಿದ್ದಾಗಲೇ ವಧು ಶೃತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
Read More »ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಮುಂದೆ ಕಸ ಸುರಿದ ಜಿಬಿಎ ಅಧಿಕಾರಿಗಳು, ವೈರಲ್ ವಿಡಿಯೋ!
ಬೆಂಗಳೂರಿನಲ್ಲಿ ಕಳೆದ ಒಂದು ದಶಕದ ಅವಧಿಯಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಇದೀಗ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಆಡಳಿತ) ಕ್ರಮಕ್ಕೆ ಮುಂದಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿಯ ದತ್ತಾತ್ರೆಯ ಟೆಂಪಲ್ ರೋಡ್‌ನಲ್ಲಿ ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಯ ಮನೆಯ ಮುಂದೆಯೇ ಆಟೋ ಟಿಪ್ಪರ್‌ನಲ್ಲಿ ಕಸ ಸುರಿಯಲಾಗಿದೆ. ಅಲ್ಲದೇ 100 ರೂಪಾಯಿ ದಂಡ …
Read More »ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್ ಬೆಂಕಿಗೆ ಆಹುತಿ!!
ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್ ಬೆಂಕಿಗೆ ಆಹುತಿಯಾಯಿತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆದ್ದಾರಿಯ ನಾಗ್ಪುರ ಲೇನ್‌ನಲ್ಲಿ ಈ ಘಟನೆ ಸಂಭವಿಸಿದೆ. ಅದರಲ್ಲಿ ಚಾಲಕ ಮತ್ತು ಸಹಾಯಕರ ಜೊತೆಗೆ 12 ಪ್ರಯಾಣಿಕರಿದ್ದರು. ಚಾಲಕ ತಕ್ಷಣ ಬಸ್ ಅನ್ನು ಖಾಲಿ ಮಾಡಿ ಪ್ರಯಾಣಿಕರ ಜೀವಗಳನ್ನು ಉಳಿಸಿದ್ದಾನೆ. ಈ ತಿಂಗಳ ಆರಂಭದಲ್ಲಿ, ಅಕ್ಟೋಬರ್ 18 ರಂದು ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಮಿನಿ ಟ್ರಕ್ …
Read More »ಘಾಟ್ ಮಾರ್ಗದಲ್ಲಿ ಪ್ರಯಾಣಿಸುವಾಗ ಬೆಟ್ಟದ ಮೇಲಿಂದ ಕಾರ್ ಮೇಲೆ ಬಿದ್ದ ಬಂಡೆ, ಸ್ಥಳದಲ್ಲೇ ಮಹಿಳೆ ಸಾವು!
ಭೀಕರ ಅಪಘಾತವೊಂದರಲ್ಲಿ, ಚಲಿಸುತ್ತಿದ್ದ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಬಿದ್ದಿದೆ. ಕಾರ್‌ನ ಸನ್‌ರೂಫ್ ಮೇಲೆ ಬಂಡೆ ಬಿದ್ದ ಪರಿಣಾಮವಾಗಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮಹಾರಾಷ್ಟ್ರದ ಘಾಟ್ ಪ್ರದೇಶದ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ.ಬಂಡೆ ನೇರವಾಗಿ ಮಹಿಳೆಯ ತಲೆಗೆ ಬಡಿದ ಪರಿಣಾಮವಾಗಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮೃತ ಮಹಿಳೆಯನ್ನು 43 ವರ್ಷದ ಸ್ನೇಹಲ್ ಗುಜರಾತಿ ಎಂದು ಗುರುತಿಸಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





