Breaking News

ಪ್ರಧಾನಿ ನರೇಂದ್ರ ಮೋದಿಗೆ ಎಲ್ಲಿ‌ ನಿಮ್ಮ ಉದ್ಯೊಗ ಎಂದ ರಣದೀಪ್ ಸಿಂಗ್ ಸುರ್ಜೆವಾಲ….

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಯುವಜನತೆಗೆ ನೀಡಿದ್ದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಲ್ಲಿ? ಎಂದು ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದಾರೆ.ಕೆಳಿದರೆ ನಾವು ಹಾಗೆ ಮಾಡುತ್ತೆವೆ ಹಿಗೆ ಮಾಡುತ್ತೆವೆ ಎಂದ ಇಗ ಉದ್ಯೊಗ ಎಲ್ಲಿ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆಯೇ? ಈ ಪ್ರಶ್ನೆಯನ್ನು ಆ ಪಕ್ಷದವರು ಒಮ್ಮೆ ತಮಗೆ ತಾವೇ ಹಾಕಿಕೊಳ್ಳಬೇಕು. ತಮ್ಮ ಕಾರ್ಯವೈಖರಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿಕೊಳ್ಳಬೇಕು. ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಹೇಳಿತ್ತು? ಆದರೆ, ಈಗ ಏನಾಗಿದೆ? ಅಷ್ಟು ಪ್ರಮಾಣದ ಉದ್ಯೋಗಗಳು ಸೃಷ್ಟಿಯಾದವೇ? ಎಂದು ಪ್ರಶ್ನಿಸಿದ್ದಾರೆ.
ಉತ್ತರ ಕೊಡಿ ಬಿಜೆಪಿಯವರೇ? ಎಂದರು .15 ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬ ಭಾರತೀಯನ ಖಾತೆಗೆ ಹಾಕುವುದಾಗಿ ಹೇಳಿದ್ದರು. ಕೊನೆಗೆ ಹಾಕಿದರೇ? ಆ ಹಣವನ್ನೂ ಹಾಕಲಿಲ್ಲ. ಅವರ ಭರವಸೆಗಳು ಭರವಸೆಯಾಗಿಯೇ ಉಳಿಯಿತು. ಇಲ್ಲಿ ನಾವು ಭರವಸೆಯನ್ನು ಈಡೇರಿಸಿದ್ದೇವೆ. ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನೂ ಅನುಷ್ಠಾನ ಮಾಡಿದ್ದೇವೆ. ಇದು ನಮ್ಮ ಕಾಂಗ್ರೆಸ್‌ನ ಬದ್ಧತೆಯಾಗಿದೆ ಎಂದು ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

Share News

About BigTv News

Check Also

ಜಾರ್ಖಂಡ್‌: ಪುತ್ರನ ಆರೋಗ್ಯಕ್ಕೆ ಪುತ್ರಿ ನರಬಲಿ, ತಾಯಿ ಸೇರಿ ಮೂವರ ಬಂಧನ

ರಾಂಚಿ: ಅನಾರೋಗ್ಯದಿಂದ ಬಳಲುತ್ತಿರುವ ಪುತ್ರನು ಗುಣಮುಖಕ್ಕಾಗಿ, ತಾಯಿಯೇ ತನ್ನ 13 ವರ್ಷದ ಮಗಳನ್ನು ನರಬಲಿ ನೀಡಿರುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ …

Leave a Reply

Your email address will not be published. Required fields are marked *