Breaking News

BigTv News

ಕಾರ್ಮಿಕರ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಕಲಬುರಗಿ ಜಿಲ್ಲೆ: ಕಲ್ಲುಗಣಿ ಕಾರ್ಮಿಕರ ಅಪ್ರಾಪ್ತ ಮಗಳ ಮೇಲೆ ಮಾಲೀಕನ ಮಗ ನಿರಂತರ ಅತ್ಯಾಚಾರ ಎಸಗಿದ್ದು, ಆರೋಪಿ ಮಿರಿಯಾಣ ಗ್ರಾಮದ ಸದ್ದಾಂ ಅಲಿಯಾಸ್ ಇಮ್ರಾನ್ (33) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.15 ವರ್ಷದ ಸಂತ್ರಸ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ಮೇಲೆ ಈ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆ ಮಹಿಳೆ ಈಗಲೂ ಇವನ ಅಧೀನದಲ್ಲಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ಮೈತ್ತೊಂದು ಚಾಕು ಇರಿತ ಕೇಸ್: ಹಳೇ ದ್ವೇಷದಿಂದ ವ್ಯಕ್ತಿಗೆ ಮೇಲೆ‌ ಅಟ್ಯಾಕ್

ಕಳೆದ‌ ಮೂರು ದಿನಗಳು ಹಿಂದೇ ಅಷ್ಟೇ ಪುಡಿ ರೌಡಿಗಳ ಅಟ್ಟಹಾಸದಿಂದ ಓರ್ವ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದ ಪ್ರಕರಣ ನಡೆದ ಬೆನ್ನಲ್ಲೇ ಇನ್ನೊಂದು ಚಾಕು ಇರಿತ ಪ್ರಕರಣ ನಗರದಲ್ಲಿ ತಡ ರಾತ್ರಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದ್ದು,ನ ಯಲ್ಲಾಪುರ ಓಣಿಯ ಅಫ್ತಾಬ್ ಎಂಬ ಯುವಕನಿಗೆ ನಾಲೈದು ಜನರ ಗುಂಪೊಂದು ಚಾಕು ಇರಿದು ಪರಾರಿಯಾಗಿದ್ದಾರೆ.ಯಲ್ಲಾಪುರ ಓಣಿಯ …

Read More »

ಸಾಲ ವಾಪಸ್ ನೀಡದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಸ್ನೇಹಿತನ ಬರ್ಬರ ಹತ್ಯೆ

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ಸಾಲ ವಾಪಸ್ ನೀಡಿಲ್ಲವೆಂದು ಮಂಜುನಾಥ ಗೌಡರ(30) ಅವರನ್ನು ಕೊಲೆ ಮಾಡಲಾಗಿದೆ.ಕೊಡಲಿಯಿಂದ ಕೊಚ್ಚಿ ದಯಾನಂದ ಗುಂಡ್ಲೂರ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ದಯಾನಂದ ಪೊಲೀಸರ ಮುಂದೆ ಶರಣಾಗಿದ್ದಾನೆ.ಕಳೆದ ವಾರ ದಯಾನಂದನ ಬಳಿ 2,000 ರೂ. ಸಾಲ ಪಡೆದುಕೊಂಡಿದ್ದ ಮಂಜುನಾಥ ಒಂದು ವಾರದೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಈ ವಿಚಾರವಾಗಿ …

Read More »

ಕಾಲೇಜು ಬಳಿ ಮೂವರು ಯುವಕರಿಂದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ

ದೆಹಲಿಯ ಕಾಲೇಜಿನ ಬಳಿ ಮೂವರು ಯುವಕರು 20 ವರ್ಷದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ. ಹಾಡಹಗಲೇ ಈ ಘಟನೆ ನಡೆದಿದೆ. ಜಿತೇಂದರ್ ಎಂಬಾತ ತನ್ನ ಇನ್ನಿಬ್ಬರು ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಜತೆ ಲಕ್ಷ್ಮೀಬಾಯಿ ಕಾಳೇಜಿನ ಬಳಿ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.ಆಕೆ ಮುಖವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಕಾರಣ ಕೈಗಳಿಗೆ ಗಂಭೀರ ಗಾಯಗಳಾಗಿವೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು …

Read More »

ಚಿನ್ನ’ ಕಳ್ಳಸಾಗಣೆ ಮಾಡ್ತಿದ್ದ ವ್ಯಕ್ತಿಯ ‘ಬುದ್ಧಿವಂತಿಕೆ’ಗೆ ಅಧಿಕಾರಿಗಳೇ ಶಾಕ್,

ದೆಹಲಿ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದುಬೈನಿಂದ ಬಂದ ಪ್ರಯಾಣಿಕನೊಬ್ಬ ಚಿನ್ನವನ್ನು ಕಳ್ಳಸಾಗಣೆ ಮಾಡಿದ ರೀತಿ ಕಸ್ಟಮ್ಸ್ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. ಏಕೆಂದರೆ ಆ ಪ್ರಯಾಣಿಕನು ನೀರಿನ ಬಾಟಲ್ ಮುಚ್ಚಳದ ರೂಪದಲ್ಲಿ ಚಿನ್ನವನ್ನ ತಂದಿದ್ದ.ಅಂದ್ಹಾಗೆ, AI-996 ವಿಮಾನದಲ್ಲಿ ದುಬೈನಿಂದ ಆಗಮಿಸಿದ ಭಾರತೀಯ ಪ್ರಯಾಣಿಕನಿಂದ ಕಸ್ಟಮ್ಸ್ ಅಧಿಕಾರಿಗಳು 170 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇಳಿದ ನಂತರ, ಪ್ರಯಾಣಿಕನು ಗ್ರೀನ್ ಚಾನೆಲ್ ಮೂಲಕ ವಿಮಾನ ನಿಲ್ದಾಣದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಗ ಅನುಮಾನಾಸ್ಪದ ಅಧಿಕಾರಿಗಳು …

Read More »

ಜಮೀನು ವಿಚಾರಕ್ಕೆ ಅತ್ತಿಗೆಯ ಮೇಲೆ ಹಲ್ಲೆಗೈದ ಮೈದುನಾ

17 ಗುಂಟೆ ಜಮೀನು ವಿಚಾರವಾಗಿ ಅಣ್ಣ ಇಲ್ಲದ‌ ಸಮಯದಲ್ಲಿ ಅತ್ತಿಗೆ ಮೇಲೆ‌ ಹಲ್ಲೆ ಮೈದುನಾ ಮಾಡಿದ್ದಾನೆ.ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಮೀನು ವಿಚಾರವಾಗಿ ಅಣ್ಣ- ತಮ್ಮಂದಿರ ಗಲಾಟೆ ನಡೆದಿದ್ದು, ಅಣ್ಣ ಇಲ್ಲದ ಸಮಯದಲ್ಲಿ ಅತ್ತಿಗೆ ಮೇಲೆ‌ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಡು ರಸ್ತೆಯಲ್ಲೇ ಹಲ್ಲೆ ಎಸಗಿದ್ದಾನೆ ಬಳಿಕ ಬಾವಿಗೆ ತಳ್ಳಿ ಕೊಲೆ ಮಾಡಲು ಮುಂದಾಗಿದ್ದಾನೆ.ಮುನಿಕೃಷ್ಣ ಎಂಬುವವನಿಂದ ಲಕ್ಷ್ಮಿದೇವಮ್ಮ‌ನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, …

Read More »

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ; ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹೊಡೆದು ಕೊಂದ ಜನ

ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ದಪ್ಪ ಕೋಲಿನಿಂದ ಕ್ರೂರವಾಗಿ ಥಳಿಸಿ ಆತ ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ನಾಂದೇಡ್ ಜಿಲ್ಲೆಯ ಗೌನಗಾಂವ್ ಗ್ರಾಮದ ನಿವಾಸಿ ವಿಷ್ಣು ಮೃತ ವ್ಯಕ್ತಿ.ವಿಷ್ಣು ಬೀದರ್‌ನ ಚಿಂತಾಕಿ ಗ್ರಾಮದ ಪೂಜಾಳೊಂದಿಗೆ ಅಕ್ರಮ ಸಂಬಂಧದಲ್ಲಿದ್ದ. ಪೂಜಾಗೆ ಈಗಾಗಲೇ ಮದುವೆಯಾಗಿದ್ದರೂ, ಆಕೆ ವಿಷ್ಣುವಿನೊಟ್ಟಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಇವರಿಬ್ಬರ ವಿಷಯ ತಿಳಿಯುತ್ತಲೇ ಪೂಜಾಳ ಗ್ರಾಮಸ್ಥರು ವಿಷ್ಣುವನ್ನು ಕರೆಸಿ ಕಂಬಕ್ಕೆ ಕಟ್ಟಿ ಥಳಿಸಿದ್ದರು.ಗಾಯಗೊಂಡ ವಿಷ್ಣುವನ್ನು ಬೀದರ್ ಬ್ರಿಮ್ಸ್ …

Read More »

ಕೊಳ್ಳೇಗಾಲ: ಕುಡಿದ ಮತ್ತಿನಲ್ಲಿ ಸೇತುವೆ ಮೇಲಿಂದ ಜಿಗಿದ ವ್ಯಕ್ತಿ

ಕೊಳ್ಳೇಗಾಲ: ತಾಲ್ಲೂಕಿನ ಹೊಸ ಹಂಪಾಪುರ ಹಾಗೂ ಮುಳ್ಳೂರು ಗ್ರಾಮದ ರಸ್ತೆಯ ಹೊನ್ನಹೊಳೆ ಸೇತುವೆಯ ಮೇಲಿಂದ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೀರಿಗೆ ಜಿಗಿದಿದ್ದಾನೆ.ಹೊಸಹಂಪಾಪುರ ಗ್ರಾಮದ ಕೂಲಿ ಕಾರ್ಮಿಕ ವಿಷಕಂಠಮೂರ್ತಿ (33) ಎಂಬಾತ ನೀರಿಗೆ ಹಾರಿದ ವ್ಯಕ್ತಿ.ಈತ ತನ್ನ ಸ್ನೇಹಿತನ ಜೊತೆ ಸೇತುವೆ ಮೇಲಿಂದ ಮೀನನ್ನು ಹಿಡಿಯುತ್ತಿದ್ದನು. ಕುಡಿದ ಮತ್ತಿನಲ್ಲಿ ಜೋರಾಗಿ ಕಿರುಚಿಕೊಂಡು ನೀರಿಗೆ ಧುಮುಕಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಎರಡು-ಮೂರು ತಾಸು ಶೋಧ ನಡೆಸಿದರು, ವ್ಯಕ್ತಿ ಪತ್ತೆಯಾಗಿಲ್ಲ. …

Read More »

ದೀಪಾವಳಿ ಹಿನ್ನೆಲೆ ಧಾರವಾಡ ಇಸ್ಬೀಟ್ ಅಡ್ಡೆಗಳ ಮೇಲೆ ದಾಳಿ : 492 ಜನರ ಮೇಲೆ ಪ್ರಕರಣ

ದೀಪಾವಳಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಎಲ್ಲೆಂದರಲ್ಲಿ ಜಿಲ್ಲೆಯ ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದ ಧಾರವಾಡ ಜಿಲ್ಲಾ ಪೊಲೀಸರು 492 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಂದ 4.41ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 20ರಿಂದ 23ರವರೆಗೆ ಒಟ್ಟು 9 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 54 ಕಡೆಗಳಲ್ಲಿ ಈ ದಾಳಿ ನಡೆಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11, ಗರಗ …

Read More »

ಬೆಂಗಳೂರಿನಲ್ಲಿ ಡೆತ್ ನೋಟ್ ಬರೆದಿಟ್ಟು ಅರ್ಚಕ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಅರ್ಚಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಶ್ವತ್ಥನಾರಾಯಣ ಆತ್ಮಹತ್ಯೆಗೆ ಶರಣಾಗಿರುವ ಅರ್ಚಕ. ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಶ್ವತ್ಥನಾರಾಯಣ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

Read More »