ಮೈಸೂರು ರೈಲ್ವೆ ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದ್ದು, 50 ವರ್ಷದ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪೊಲೀಸರು ಬಂಧಿಸಿದ್ದಾರೆ.ಮೈಸೂರು ರೈಲ್ವೆ ನಿಲ್ದಾಣದ ವೇಟಿಂಗ್ ರೂಮ್ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ವೃದ್ಧೆಯೊಬ್ಬರು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ. ಎಚ್ಚರಗೊಂಡ ತಾಯಿಗೆ ಮಗು ನಾಪತ್ತೆಯಾಗಿರುವುದು ಗೊತ್ತಾಗಿ, ಕೂಡಲೇ ಕುಟುಂಬಸ್ಥರೊಂದಿಗೆ ಆರ್ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Read More »ಮೋಸ್ಟ್ ವಾಂಟೆಡ್ ಬಿಹಾರದ ಕುಖ್ಯಾತ ‘ಸಿಗ್ಮಾ ಗ್ಯಾಂಗ್’ ಲೀಡರ್ ರಂಜನ್ ಪಾಠಕ್ ಸೇರಿ ನಾಲ್ವರು ಸಾವು!
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಪ್ರಮುಖ ಪೊಲೀಸ್ ಎನ್ಕೌಂಟರ್ ನಡೆದಿದ್ದು, ಇದರಲ್ಲಿ ಬಿಹಾರದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರು ಸಾವನ್ನಪ್ಪಿದ್ದಾರೆ.ರಂಜನ್ ಪಾಠಕ್ (25)ಬಿಮ್ಲೇಶ್ ಮಹ್ತೋ ಅಲಿಯಾಸ್ ಬಿಮ್ಲೇಶ್ ಸಾಹ್ನಿ (25)ಮನೀಶ್ ಪಾಠಕ್ (33)ಅಮನ್ ಠಾಕೂರ್ (21)ಕುಖ್ಯಾತ ‘ಸಿಗ್ಮಾ & ಕಂಪನಿ’ ದರೋಡೆಕೋರರುನಾಲ್ವರು ಆರೋಪಿಗಳು ಬಿಹಾರದಲ್ಲಿ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದರು. ‘ಸಿಗ್ಮಾ & ಕಂಪನಿ’ ಎಂದು ಕರೆಯಲ್ಪಡುವ ಈ ಗ್ಯಾಂಗ್ ಅನ್ನು ರಂಜನ್ ಪಾಠಕ್ ನೇತೃತ್ವ ವಹಿಸಿದ್ದ. …
Read More »ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ!
ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಹೆಜ್ಜೆ ಹೆಜ್ಕೆಗೂ ಕಂಟಕ ಶುರುವಾಗುತ್ತಿದೆ. ಇಷ್ಟು ದಿನ ಆರ್ಎಸ್ಎಸ್ ವರ್ಸಸ್ ಭೀಮ ಆರ್ಮಿ ಮಧ್ಯೆ ಫೈಟ್ ನಡೆದಿತ್ತು. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆರ್ಎಸ್ ಎಸ್ಗೆ ಕುರುಬ ಸಮಾಜ ಕಂಟಕ ತಂದೊಡ್ಡಿದೆ.ನವೆಂಬರ್ 2 ರಂದು ನಾವೂ ಎಸ್ಟಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡುವುದಾಗಿ ಕುರುಬ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ ಭೀಮ ಆರ್ಮಿ ಮತ್ತು …
Read More »ಶಬರಿಮಲೆ: ಹೆಲಿಪ್ಯಾಡ್ನಲ್ಲಿ ಹೂತುಹೋದ ರಾಷ್ಟ್ರಪತಿ ಮುರ್ಮು ಅವರ ಹೆಲಿಕಾಪ್ಟರ್.
ಶಬರಿಮಲೆಯ ಅಯ್ಯಪ್ಪ ದೇಗುಲ ದರ್ಶನಕ್ಕೆ ಬಂದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ನ ಚಕ್ರಗಳು ಹೊಸದಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಹೂತು ಹೋಗಿರುವ ಘಟನೆ ಇಲ್ಲಿನ ಪ್ರಮಾದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.ಪಂಪಾಗೆ ರಸ್ತೆ ಮಾರ್ಗ ಮೂಲಕ ರಾಷ್ಟ್ರಪತಿ ತೆರಳಿದ ಬಳಿಕ, ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ತಳ್ಳುವ ದೃಶ್ಯಗಳು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾದವು. ರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸ್ಟೇಡಿಯಂ ಅನ್ನು …
Read More »ಆಸ್ತಿಗಾಗಿ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಯೆಡ್ಲಪಾಡು ಮಂಡಲದ ಪಾಟಾ ಸೋಲಾಸಾದಲ್ಲಿ ಅವರ ತಂದೆ ಸಾವನ್ನಪ್ಪಿದ ಮೂರು ದಿನಗಳ ನಂತರ, ಪುತ್ರರು ಅವರ ತಂದೆಯ ಅಂತ್ಯಕ್ರಿಯೆಗಳನ್ನು ಮಾಡಲಿಲ್ಲ.ಪಾಟಾ ಸೋಲಾಸಾದಲ್ಲಿ, ಗುವ್ವುಲಾದ ಹಿರಿಯ ಆಂಜನೇಯುಲು (80) ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು. ಆಸ್ತಿ ಹಂಚಿಕೆಯ ಬಗ್ಗೆ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ವಿವಾದ ಉಂಟಾಯಿತು. ಪರಿಣಾಮವಾಗಿ, ಇಬ್ಬರು ಗಂಡು ಮಕ್ಕಳು ಅಂತ್ಯಕ್ರಿಯೆ ವಿಧಿಗಳನ್ನು ಮಾಡಲು ನಿರಾಕರಿಸಿದರು.ಪೊಲೀಸರ ಮಧ್ಯಪ್ರವೇಶದಿಂದ …
Read More »ರಾತ್ರಿ ಪತ್ನಿ ಬಾಗಿಲು ತೆರೆಯಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ!
ದೀಪಾವಳಿ ರಾತ್ರಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ, ಕುಡಿದ ಅಮಲಿನಲ್ಲಿದ್ದ ಟಿಂಕು, ತನ್ನ ಹೆಂಡತಿ ಮನೆಗೆ ಮರಳಿದನು. ಯಾವುದೇ ಪ್ರತಿಕ್ರಿಯೆಯಿಲ್ಲದೆ ಡೋರ್ಬೆಲ್ ಬಾರಿಸಿದ ನಂತರ, ಬಾಗಿಲು ಮುಚ್ಚಿದ್ದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಅವನ ಹೆಂಡತಿಯಿಂದ ನಿರ್ಲಕ್ಷಿಸಲ್ಪಟ್ಟ ಅವನು ತನ್ನ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡನು. ಮನೆಯ ಹೊರಗೆ ಕುಳಿತು ಬೆಂಕಿ ಹಚ್ಚಿಕೊಂಡು ಬೆಂಕಿ ಹಚ್ಚಿಕೊಂಡು ಓಡಿ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ನೆರೆಹೊರೆಯವರು ಬಟ್ಟೆ ಮತ್ತು …
Read More »500+ ನಕಲಿ ಪ್ಯಾನ್ ಕಾರ್ಡ್; 27 ಕೋಟಿ ವಂಚಿಸಿದವ ಅರೆಸ್ಟ್!
ಫೆಡರಲ್ ಬ್ಯಾಂಕ್ನದೇ ಆಯಪ್ ಮೂಲಕ ಶಿರಾಜುಲ್ ಇಸ್ಲಾಂ ಈ ವಂಚನೆ ನಡೆಸಿದ್ದ. ಬ್ಯಾಂಕ್ ಗ್ರಾಹಕರ ಗುರುತಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಾಲ ಪಡೆಯುವುದೇ ಇವರ ವಂಚನೆಯ ಗುರಿಯಾಗಿತ್ತು. ಮೊದಲು ಉತ್ತಮ ಸಿಬಿಲ್ ಸ್ಕೋರ್ ಇರುವವರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗುತ್ತಿತ್ತು. ಅವರ ಪ್ಯಾನ್ ಕಾರ್ಡ್ ಅನ್ನು ನಕಲಿಯಾಗಿ ತಯಾರಿಸಿ, ವಿಳಾಸವನ್ನು ಸರಿಯಾಗಿ ನೀಡಿ, ಫೋಟೋವನ್ನು ಮಾತ್ರ ವಂಚಕನ ತಂಡದ ಸದಸ್ಯನೊಬ್ಬನದ್ದು ಹಾಕಲಾಗುತ್ತಿತ್ತು. ಕೆವೈಸಿ ಪರಿಶೀಲನೆಗಾಗಿ ವಿಡಿಯೋ ಕಾಲ್ ಬಂದಾಗ, ಪ್ಯಾನ್ ಕಾರ್ಡ್ನಲ್ಲಿ …
Read More »ಅಕ್ರಮ ಗೋಸಾಗಾಟ: ವಾಹನ ನಿಲ್ಲಿಸದ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್, ಓರ್ವನಿಗೆ ಗಾಯ.
ಪುತ್ತೂರು ತಾಲೂಕಿನ ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ಇಂದು ಮುಂಜಾನೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದಾಗ ಪೊಲೀಸರ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಓರ್ವ ಆರೋಪಿ ಗಾಯಗೊಂಡಿದ್ದಾನೆ.ಪೊಲೀಸರ ಗುಂಡೇಟಿನಿಂದ ವಾಹನದಲ್ಲಿದ್ದ ಆರೋಪಿಗಳಲ್ಲಿ ಓರ್ವನಾದ ಅಬ್ದುಲ್ಲಾ (40) ಗಾಯಗೊಂಡಿದ್ದಾನೆ. ಗಾಯಗೊಂಡ ತಕ್ಷಣವೇ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ …
Read More »ಬೆಂಗಳೂರು: ಮಳೆ ಅವಾಂತರ; ಮುರಿದು ಬಿದ್ದ ಮರದ ಕೊಂಬೆ, ಕೂದಲೆಳೆ ಅಂತರದಲ್ಲಿ ಮೂವರು ಪಾರು.
ನಿರಂತರ ಮಳೆಗೆ ಬೆಳೆಗಳು ನೀರು ಪಾಲಾದರೆ, ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಸಿಲಿಕಾನ್ ಸಿಟಿಯಲ್ಲೂ ಮಳೆ ಅಬ್ಬರಿಸಿದೆ. ನಗರದಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ.ಪರಿಣಾಮ ಕೆಲವು ಅವಾಂತರಗಳು ಸಂಭವಿಸಿವೆ. ಏಕಾಏಕಿ ಬೃಹತ್ ಮರದ ಕೊಂಬೆ ರಸ್ತೆಗೆ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಮೂವರು ಪಾರಾಗಿದ್ದಾರೆ.ಇನ್ನು ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದು, ಅಲಿ ಅಸ್ಕರ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಕನ್ನಿಂಗ್ಹ್ಯಾಮ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರಯಾಣಿಕರು …
Read More »ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು!
ಹಾವೇರಿಯ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳ್ಳತನ ನಡೆದಿದೆ.ಮಠದ ಕೊಠಡಿಗಳ ಬೀಗ ಮುರಿದು ಚಿನ್ನಾಭರಣ, ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಸರಿಸುಮಾರು 10 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





