Breaking News

BigTv News

21ನೇ ಮಹಡಿಯಿಂದ ಹಾರಿ 29 ವರ್ಷದ ಯುವ ವೈದ್ಯ ಆತ್ಮಹತ್ಯೆ.

ಮಥುರಾ ನಿವಾಸಿ ೨೯ ವರ್ಷದ ಶಿವ ಗೌರ್‌ ನಗರ-2ರಲ್ಲಿದ್ದ ಸೋದರಿ ಮನೆಗೆ ಆಗಮಿಸಿದ್ದ. ಈ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿದ್ದಾಗಲೇ ಸೋಮವಾರ ಮಧ್ಯಾಹ್ನ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮನೆಯಲ್ಲಿ ಎಲ್ಲರೂ ಇದ್ದಾಗಲೇ ಮಹಡಿ ಏರಿ 21ನೇ ಮಹಡಿಗೆ ಹೋಗಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Read More »

ಪೆಟ್ರೋಲ್ ಕಳ್ಳತನ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

ನೆರಿಯ ಪೆಟ್ರೋನೆಟ್ ಪೈಪ್ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More »

ಜ್ಯುವೆಲ್ಲರಿಯಿಂದ ಚಿನ್ನ ಖರೀದಿಸಿ ಹಣ ಕೊಡದೆ ವಂಚನೆ: ಆರೋಪಿ ಸೆರೆ

ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿಯಿಂದ 2024ರ ನ.3ರಂದು ಸಂತೋಷ ಎಂದು ಹೆಸರು ಹೇಳಿಕೊಂಡು ಕಾರಿನಲ್ಲಿ ಬಂದ ವ್ಯಕ್ತಿ ಗಿಪ್ಟ್ ಕೊಡುವ ಬಗ್ಗೆ 30 ಸಾವಿರ ರೂ.ಮೌಲ್ಯದ 2 ಚಿನ್ನದ ಉಂಗುರಗಳನ್ನು ಖರೀದಿ ಮಾಡಿದ್ದನು. ಹಣವನ್ನು ನೆಫ್ಟ್ ಮೂಲಕ ಹಾಕಿರುವುದಾಗಿ ಮೊಬೈಲ್ ಪೋನ್ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದನು.ಆದರೆ ಹಣ ಖಾತೆಗೆ ಜಮಾ ಆಗದ ಬಗ್ಗೆ ಆತನಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು, ಆತ ನಾಳೆ ಕೊಡುವುದಾಗಿ ಹೇಳಿ ವಂಚಿಸಿದ್ದನು. ಬಂಧಿಸಿ, ಕಾರು …

Read More »

ಮಹಿಳೆಯ ನಗ್ನ ವೀಡಿಯೋ ಇಟ್ಕೊಂಡು ಬ್ಲ್ಯಾಕ್‌ ಮೇಲ್.. ಪುಡಿ ರೌಡಿ ವಿರುದ್ಧ ಎಫ್‌ಐಆರ್‌!

ಮಹಿಳೆಯ ನಗ್ನ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ ಇಬ್ಬರು ಪುಡಿ ರೌಡಿಗಳ ಗಿರಿ ಹಣ ಕೊಡುವುದಾಗಿ ಮಹಿಳೆಯನ್ನು ತಡೆದಿದ್ದ. ಹೀಗಾಗಿ ಮಹಿಳೆ ಸುಮ್ಮನಾಗಿದ್ದಳು. ನಂತರ, ಹಣ ಕೊಡುವೆ ಅಂತ ಹೇಳಿ ಯಾಮಾರಿಸುತ್ತಿದ್ದ ಈತ ಬಳಿಕ ಹಣ ಕೊಡದೇ, ಸ್ವರೂಪ್‌ ನಮ್ಮ ಹುಡುಗ ಅವನ ತಂಟೆಗೆ ಬಂದ್ರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೇ ಖಾಸಗಿ ವೀಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ …

Read More »

ದೇವಾಲಯಗಳ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ಭಕ್ತರಿಗೆ ವಂಚನೆ- ಇಬ್ಬರು ಅರೆಸ್ಟ್‌.

ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಇತರ ದೇವಾಲಯಗಳ ಹೆಸರಲ್ಲಿ ನಕಲಿ ವೆಬ್‌ಸೈಟ್ ತೆರೆದು ಖದೀಮರು ಭಕ್ತರಿಂದ ಕೋಟ್ಯಂತರ ರೂ. ಹಣವನ್ನು ವಂಚಿಸುತ್ತಿದ್ದರು. ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.ವಂಚನೆಗೆ ಒಳಗಾದ ಭಕ್ತರು ಎಚ್ಚರದಿಂದಿರುವಂತೆ ಹಾಗೂ ಈ ರೀತಿ ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ದೇವಾಲಯದ ಪ್ರಸಾದ ಸೇವೆಗಳಿಗೆ ಪಾವತಿ …

Read More »

ಲೋಕಾಯುಕ್ತ ರೇಡ್ ವೇಳೆ ಎಸ್ಕೇಪ್ – ಪಿಎಸ್‌ಐ ಜಗದೇವಿಗಿಲ್ಲ ಜಾಮೀನು!

ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಜಗದೇವಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.ದೇವನಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಠಾಣೆಯ ಪಿಸಿ ಅಂಬರೀಶ್‌ ಅಡ್ವಾನ್ಸ್ 25 ಸಾವಿರ ಪಡೆದುಕೊಂಡು ಉಳಿದ 75 ಸಾವಿರ ಲಂಚ ಪಡೆಯುವ ವೇಳೆ ಪಿಸಿ ಅಂಬರೀಶ್‌ ಲೋಕಾಯುಕ್ತರ ಬಲೆಗೆ ಬಿದ್ದಿದ್ದ. ಹೀಗಾಗಿ ಪಿಸಿ …

Read More »

ದಸರಾ ಸಂಭ್ರಮ ನೋಡಲು ಹೋಗಿದ್ದ ಉದ್ಯಮಿ ಮನೆಗೆ ಕನ್ನ.

ಮೈಸೂರು ದಸರಾ ಸಂಭ್ರಮ ನೋಡಲು ಕುಟುಂಬ ಸಮೇತರಾಗಿ ತೆರಳಿದ್ದ ಗುಂಡ್ಲುಪೇಟೆ ಪಟ್ಟಣದ ಉದ್ಯಮಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಹಣ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.ಗುಂಡ್ಲುಪೇಟೆ ಪಟ್ಟಣದ ಉದ್ಯಮಿ ಉಮೇಶ್ ಎಂಬವರು ದಸರಾ ನೋಡಲು ಮೈಸೂರಿಗೆ ತೆರಳಿದ್ದ ವೇಳೆ ರಾತ್ರಿ ವೇಳೆ ಬಾಗಿಲು ಮೀಟಿ ಮನೆ ಹೊಕ್ಕ ಕಳ್ಳರು 300 ಗ್ರಾಂ ಚಿನ್ನಾಭರಣ, 20 ಲಕ್ಷಕ್ಕೂ ಹೆಚ್ಚು ನಗದು ಹಣವನ್ನ ಹೊತ್ತೊಯ್ದಿದ್ದಾರೆ.

Read More »

ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಪಡುಬಿದ್ರಿ ಸಮೀಪದ ಉಚ್ಚಿಲ ಕೆನರಾ ಬ್ಯಾಂಕ್ ಎಟಿಎಂ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಬೆಳಗಿನ ಜಾವ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಬೈಕ್‌ ಸವಾರನ ಗುರುತು ಪತ್ತೆ ಇನ್ನೂ ಪತ್ತೆಯಾಗಿಲ್ಲ.

Read More »

ಸೌಲಭ್ಯಗಳ ದುರ್ಬಳಿಕೆ ಕಾರಣ ಉಪತಹಶೀಲ್ದಾರ್ ಗೆ ಅಮಾನತು ಸೂಚನೆ!.

ಗದಗ ಜಿಲ್ಲೆಯಲ್ಲಿ ಅನರ್ಹರಿಗೆ ಪಿಂಚಣಿಗಳನ್ನು ಕೊಡುವಂತಹ ಜಾಲವೊಂದು ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗದಗ ಜಿಲ್ಲಾಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿ ಅನರ್ಹರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಗದಗ ಜಿಲ್ಲೆಯಲ್ಲಿ ಒಟ್ಟೂ 17,997 ಜನ ಅನರ್ಹರಿಗೆ ಬಡವರಿಗೆ, ವೃದ್ಧರಿಗೆ, ವಿಧವೆಯರಿಗೆ ಸಿಗಬೇಕಿದ್ದ ಸೌಲಭ್ಯವನ್ನು ಅಕ್ರಮವಾಗಿ ನೀಡಲಾಗುತ್ತಿತ್ತು. ಈ ಎಲ್ಲಾ ತಪ್ಪುಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್​ ಟಿ.ಟಿ ವಾಲ್ಮೀಕಿ …

Read More »

25 ವಾಹನ ಜಖಂಗೊಳಿಸಿದ್ದ 6 ಪುಂಡರ ಸೆರೆ.

ಬ್ಯಾಡರಹಳ್ಳಿ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ತಡರಾತ್ರಿ ಮನೆ ಮುಂದೆ ನಿಲುಗಡೆ ಮಾಡಿದ್ದ ವಾಹನಗಳ ಜಖಂಗೊಳಿಸಿದ ಪ್ರಕರಣ ಭೇದಿಸಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರು ಅಪ್ರಾಪ್ತರು ಸೇರಿ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬ್ಯಾಡರಹಳ್ಳಿಯ ರತ್ನನಗರ ನಿವಾಸಿ ಜಯಂತ್‌ (19), ಲಿಖೀತ್‌ (18) ಹಾಗೂ ಕಾಮಾಕ್ಷಿಪಾಳ್ಯದ ಗಗನ್‌ (23) ಬಂಧಿತರು. ಹಾಗೆಯೇ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

Read More »