Breaking News

ರೇಡಿಯೊ ಕಾಲರ್‌ಗಳಿಲ್ಲದೆ ಕಾಡಿನಲ್ಲಿ ಮೇಲ್ವಿಚಾರಣೆ ಸಾಧ್ಯವಿಲ್ಲ….

ಶಿಯೋಪುರ್ (ಮಧ್ಯಪ್ರದೇಶ): ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ಗಳಿಗೆ ಸಂಬಂಧಿಸಿರುವ ಸಂಭವನೀಯ ಸೋಂಕು ಕಾರಣವಾಗಿರಬಹುದು ಶಂಕೆಯನ್ನು ಚೀತಾ ಪ್ರಾಜೆಕ್ಟ್ ಮುಖ್ಯಸ್ಥ ಎಸ್‌.ಪಿ ಯಾದವ್ ಅಲ್ಲಗಳೆದಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸದಸ್ಯ ಕಾರ್ಯದರ್ಶಿಯೂ ಆಗಿರುವ ಯಾದವ್, ಚೀತಾಗಳನ್ನು ದೇಶದಲ್ಲಿ ಮರು ಪರಿಚಯಿಸಿ ಒಂದು ವರ್ಷ ಪೂರ್ಣಗೊಂಡಿರುವ ಕುರಿತು ಸುದ್ದಿಸಂಸ್ಥೆಯೊಂದರ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದರು. “ಚೀತಾಗಳ ಮೇಲೆ ಎಲ್ಲಾ ಕಡೆ ನಿಗಾ ಇರಿಸಲಾಗಿದೆ. ರೇಡಿಯೋ ಕಾಲರ್‌ ಪ್ರಪಂಚದಲ್ಲಿಯೇ ಸಾಬೀತಾಗಿರುವ ತಂತ್ರಜ್ಞಾನ. ಚೀತಾಗಳು ರೇಡಿಯೋ ಕಾಲರ್‌ನಿಂದ ಸಾವನ್ನಪ್ಪಿದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು. ರೇಡಿಯೊ ಕಾಲರ್‌ಗಳಿಲ್ಲದೆ ಕಾಡಿನಲ್ಲಿ ಮೇಲ್ವಿಚಾರಣೆ ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

Share News

About BigTv News

Check Also

ಮಗಳ ಪ್ರೇಮ ವಿವಾಹ ಅಪ್ಪನ ಹೆಣದ ಮೇಲೆ!!

ಮಗಳ ಪ್ರೇಮ ವಿವಾಹದಿಂದ ನೊಂದ ತಂದೆಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತನನ್ನು ರಿಷಿರಾಜ್ ಅಲಿಯಾಸ್ …

Leave a Reply

Your email address will not be published. Required fields are marked *