ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ಐ ಜಗದೇವಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.ದೇವನಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಠಾಣೆಯ ಪಿಸಿ ಅಂಬರೀಶ್ ಅಡ್ವಾನ್ಸ್ 25 ಸಾವಿರ ಪಡೆದುಕೊಂಡು ಉಳಿದ 75 ಸಾವಿರ ಲಂಚ ಪಡೆಯುವ ವೇಳೆ ಪಿಸಿ ಅಂಬರೀಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದ. ಹೀಗಾಗಿ ಪಿಸಿ ಅಂಬರೀಶ್ ಗೆ ಹಣ ಪಡೆಯಲು ಸೂಚಿಸಿದ್ದ ಪಿಎಸ್ಐ ಜಗದೇವಿ, ಎಸ್ಕೇಪ್ ಆಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

