ಮದುವೆಗೆ ಸಿದ್ಧವಾಗಿದ್ದ ಮದುಮಗಳನ್ನು ಬರ್ಬರವಾಗಿ ಕೊಲೆಮಾಡಿ, ಆಕೆಯ ದೇಹವನ್ನು ಸುಟ್ಟ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಅಂಶಿಕಾ ಠಾಕೂರ್ ಎಂದು ಗುರುತಿಸಲಾಗಿದ್ದು, ಈಕೆ ಬೈರಿಯನ್ ನಿವಾಸಿಯಾಗಿದ್ದು, ದಿವಂಗತ ವಿಪಿನ್ ಠಾಕೂರ್ ಅವರ ಪುತ್ರಿ.ಸೆಪ್ಟೆಂಬರ್ 24 ರ ಬುಧವಾರದಂದು ಭಿಂಡ್ಲಾ ಗ್ರಾಮದ ಯುವಕನೊಂದಿಗೆ ವಿವಾಹ ನಡೆಯಬೇಕಿತ್ತು. ಅಂಶಿಕಾಳ ದೇಹ ಸುಟ್ಟು ಕರಕಲಾಗಿದ್ದಲ್ಲದೆ, ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ಆಳವಾದ ಗಾಯಗಳು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »ಕಾಲುವೆಗೆ ತಳ್ಳಿ ಯುವತಿಯ ಕೊಲೆಗೈದ ಲವರ್ ಬಾಯ್!
ಯುವನಕನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಪುಸಲಾಯಿಸಿ ಭದ್ರಾ ಕಾಲುವೆಗೆ ಕರೆದುಕೊಂಡು ಹೋಗಿ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಶಿವಮೊಗ್ಗ ಭದ್ರಾವತಿ ಗ್ರಾಮಾಂತರ ಪೊಲೀಸರು ಎ1 ಸೂರ್ಯ ಮತ್ತು ಎ2 ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯಲ್ಲಿ ನಡೆದಿದೆ.
Read More »ಕೊಡಗು ಯೋಧನಿಂದ ಪತ್ನಿಗೆ ಗುಂಡೇಟು; ಗೃಹಿಣಿ ಸ್ಥಿತಿ ಗಂಭೀರ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿದ್ದು, ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೊಣಗೇರಿಯಲ್ಲಿ ನಡೆದಿದೆ.ದೀಪಿಕಾ ದೇಚಮ್ಮ (32) ಗುಂಡೇಟಿನಿಂದ ಗಾಯಗೊಂಡಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
Read More »ಚಾಮುಂಡಿ ಬೆಟ್ಟದ ಅರ್ಚಕ ನಿಧನ – ಇಂದು ಮಧ್ಯಾಹ್ನದವರೆಗೆ ದೇವಿ ದರ್ಶನಕ್ಕೆ ನಿರ್ಬಂಧ.!
ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ, ಇದರ ನಡುವೆಯೇ ದೇವಸ್ಥಾನಕ್ಕೆ ಸೂತಕದ ಛಾಯೆ ಆವರಿಸಿದ್ದು, ಚಾಮುಂಡಿ ಬೆಟ್ಟದ ಶಿವಾರ್ಚಕರು ನಿಧನರಾಗಿದ್ದಾರೆ. ಈ ಹಿನ್ನೆಲೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ನಿರ್ಬಂಧಿಸಲಾಗಿದೆ.ಮೃತರನ್ನು ಶಿವಾರ್ಚಕ ವಿ. ರಾಜು ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ದೇವಸ್ಥಾನದಲ್ಲಿ ಶಿವಾರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಈ ಹಿನ್ನಲೆ ಇಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ದೇವಿ ದರ್ಶನ ಬಂದ್ ಮಾಡಲಾಗಿದೆ.ಮಧ್ಯಾಹ್ನ ರಾಜು …
Read More »ಚಿನ್ನದ ಆಸೆಗಾಗಿ ಮಾವನ ಮಗಳ ಹತ್ಯೆ!
ಚಿನ್ನದ ಮಾಂಗಲ್ಯ ಸರದ ಆಸೆಗಾಗಿ ಮಾವನ ಮಗಳನ್ನೇ ಕೊಲೆ ಮಾಡಿ, ಹೃದಯಾಘಾತ ಎಂದು ಕಥೆ ಹೇಳಿ, ಸತ್ಯ ಗೊತ್ತಾದಂತೆ, ನಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಭಯಪಟ್ಕೊಂಡ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Read More »ಚಿನ್ನದ ಉದ್ಯಮಿಯನ್ನು ಸುಲಿಗೆ ಮಾಡಿದ ಬೆಂಗಳೂರು ಪೊಲೀಸ್!
ಕೋರಮಂಗಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಯಿ ರಾಮರೆಡ್ಡಿ, ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಜಂತ್ರಿ ಆರೋಪಿಗಳಾಗಿರುವ ಇನ್ಸ್ಪೆಕ್ಟರ್ ಗಳಾಗಿದ್ದಾರೆ.ಚಿನ್ನದ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯೊಬ್ಬರನ್ನು ಇವರು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ಇದರಿಂದ ನೊಂದ ಉದ್ಯಮಿ ಪೊಲೀಸ್ ಆಯುಕ್ತರ ಬಳಿ ದೂರು ನೀಡಿದ್ದ. ಅಲ್ಲದೇ ತನ್ನನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸಿಸಿಟಿವಿ ಸಾಕ್ಷ್ಯಾಧಾರಗಳನ್ನೂ ಸಹ ಒದಗಿಸಿದ್ದ. ಆರೋಪಗಳು ಪ್ರಥಮ ಮಾಹಿತಿಯಲ್ಲೇ ಧೃಡಪಟ್ಟ ಕಾರಣ ಇವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ …
Read More »ಪ್ರೇಯಸಿಯ ಶೀಲದ ಬಗ್ಗೆ ಶಂಕೆ – ಒಂಬತ್ತು ಬಾರಿ ಇರಿದು ಕೊಂದ ಪಾಗಲ್ ಪ್ರೇಮಿ!
ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ ಎಂಬ ಮಹಿಳೆಯನ್ನು ಆರೋಪಿ ಲೋಕೇಶ್ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಗಂಡನನ್ನು ಬಿಟ್ಟು ಎರಡು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ರೇಖಾ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ರೇಖಾ ಕೆಲಸ ಮಾಡುತ್ತಿದ್ದರು.ಸೋಮವಾರ ಸುಂಕದಕಟ್ಟೆ ಬಸ್ ನಿಲ್ದಾಣಕ್ಕೆ ಬರುವಂತೆ ಲೋಕೇಶ್ ರೇಖಾಗೆ ಸೂಚನೆ ನೀಡಿದ್ದನು. ಆಕೆ ತನ್ನ ಮಗಳ ಜೊತೆಗೆ ಬರುತ್ತಿದ್ದಂತೆ ಸಾರ್ವಜನಿಕರ ಮಧ್ಯದಲ್ಲಿಯೇ 9 ಬಾರಿ ಚಾಕು ಇರಿದು ಪರಾರಿಯಾಗಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮೃತಾಪಟ್ಟಿದ್ದಾರೆ. …
Read More »ಮುಕಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!
ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿವಾಹ ವಿವಾದ ಹೊಸ ತಿರುವು ಪಡೆದುಕೊಂಡಿದೆ. ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಇದೀಗ ಹಣ ಪಡೆದು ನಿಯಮ ಬಾಹಿರವಾಗಿ ಕ್ವಾಜಾ ಅಲಿಯಾಸ್ ಮುಕಳಪ್ಪ ಹಾಗೂ ಗಾಯತ್ರಿ ವಿವಾಹ ನೊಂದಣಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಹಿಂದೂಪರ ಸಂಘಟನೆ ಹಾಗೂ ಯುವತಿಯ ತಾಯಿ ಶಿವಕ್ಕ ಸಬ್ ರಿಜಿಸ್ಟರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.ಸಬ್ ರಿಜಿಸ್ಟ್ರಾರ್ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಅಧಿಕೃತ …
Read More »ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ – ಆರೋಪಿಗೆ 30 ವರ್ಷ ಜೈಲು!
ಬಾಲಕಿಗೆ ಮದ್ವೆ ಆಗುವೆ ಎಂದು ಹೇಳಿ ಅತ್ಯಾಚಾರವೆಸಗಿದ ಬೆಳಗಾವಿ ರಾಮದುರ್ಗ ತಾಲೂಕಿನ ಮುಳ್ಳೂರಿನ ಕರಿಯಪ್ಪ ವಿಠ್ಠಪ್ಪ ಅವೂಜಿ ಎಂಬ ಅಪರಾಧಿಗೆ ಪೋಕ್ಸೋ ನ್ಯಾಯಾಲಯ 30 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಲಾಗಿದೆ.ಇನ್ನು ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ಥೆಗೆ 4 ಲಕ್ಷ ಪರಿಹಾರ ಪಡೆಯುವಂತೆ ಹಾಗೂ ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇರಿಸುವಂತೆ ಆದೇಶ ನೀಡಲಾಗಿದೆ.
Read More »ಸಾಕು ನಾಯಿ ಗೀರಿ ರೇಬಿಸ್ ರೋಗಕ್ಕೆ ತುತ್ತಾಗಿದ್ದ ಪೊಲೀಸ್ ಅಧಿಕಾರಿ ಸಾವು.!
ರೇಬೀಸ್ಗೆ ತುತ್ತಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ವನರಾಜ್ ಮಂಜರಿಯಾ ಅವರನ್ನು ಅಹಮದಾಬಾದ್ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ನಿಯೋಜಿಸಲಾಗಿತ್ತು. ಘಟನೆಯ ನಂತರ ಮಂಜರಿಯಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ , ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.ಭಾರತದಲ್ಲಿ ರೇಬೀಸ್ ಸಂಬಂಧಿತ ಸಾವುಗಳಲ್ಲಿ ದಾಖಲೆಯ ಶೇಕಡಾ 75 ರಷ್ಟು ಇಳಿಕೆ ಕಂಡುಬಂದಿದ್ದರೂ, ಈ ವರ್ಷದ ಆರಂಭದಲ್ಲಿ ಲ್ಯಾನ್ಸೆಟ್ ಅಧ್ಯಯನವು ದೇಶಾದ್ಯಂತ ಪ್ರತಿ ವರ್ಷ ಕನಿಷ್ಠ 5,726 …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





