Breaking News

BigTv News

ಬೆಂಗಳೂರಿನಿಂದ ಕಾರ್ಯಾಚರಿಸುತ್ತಿದ್ದ ಶಂಕಿತ ಅಲ್ ಕೈದಾ ಭಯೋತ್ಪಾದಕಿ ಸಮಾ ಪರ್ವೀನ್ ಬಂಧಿಸಿದ ಗುಜರಾತ್ ಎಟಿಎಸ್!

ಅಲ್ ಕೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸಮಾ ಪರ್ವೀನ್ ಎಂಬಾಕೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಈಕೆ ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮೂಲಕ ಜಿಹಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಳು ಎಂಬ ಆರೋಪವಿದೆ.ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದರು. ಅವರು ‘ಘಜ್ವಾ-ಎ-ಹಿಂದ್’ ಬಗ್ಗೆ ವೀಡಿಯೊಗಳು ಮತ್ತು ಭಾಷಣಗಳ ಮೂಲಕ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಈ ನಾಲ್ವರ ವಿಚಾರಣೆ ವೇಳೆ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಸಮಾ ಪರ್ವೀನ್ …

Read More »

ಟಿಕೆಟ್ ಕೊಡದೇ ಮೊಬೈಲ್ ನಲ್ಲಿ ಮಾತನಾಡುತ್ತ ಕುಳಿತಿದ್ದ ರೈಲ್ವೆ ಸಿಬ್ಬಂದಿ: ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ!

ಪ್ರಯಾಣಿಕರಿಗೆ ಟಿಕೆಟ್ ಕೊಡದದೇ ಮೊಬೈಲ್ ನಲ್ಲಿ ಮಾತನಾಡುತ್ತ ಹರಡೆ ಹೊಡ್ಶೆಯುತ್ತಿದ್ದ ರೈಲ್ವೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ..ಇದನ್ನು ಗಮನಿಸಿದ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗೆ ಸ್ಟೇಷನ್ ಮಾಸ್ಟರ್ ಕಳುಹಿಸಿದ್ದರು. ಸ್ಟೇಷನ್ ವ್ಯವಸ್ಥಾಪಕ ಭಾಗೀರಥ ಮೀನಾ ಅಧಿಕಾರಿ ಮಹೇಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ

Read More »

ಹಿರಣ್ಯಕೇಶಿಗಾಗಿ ಒಂದಾದ ಕತ್ತಿ- ಪಾಟೀಲ ಕುಟುಂಬ; ಬೆಳಗಾವಿ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ

ಹುಕ್ಕೇರಿ ಕ್ಷೇತ್ರ ಹಾಗೂ ಜಿಲ್ಲಾ ರಾಜಕಾರಣದಲ್ಲಿ ಪಲ್ಲಟಗಳಿಗೆ ಕಾರಣವಾಗಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ಮತ್ತೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜಕೀಯ ಕಣದಲ್ಲಿ ಪರಸ್ಪರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ವಿರೋಧಿಗಳೆಂದು ಗುರುತಿಸಿಕೊಂಡಿರುವ ಕತ್ತಿ ಮತ್ತು ಎ.ಬಿ.ಪಾಟೀಲ ಕುಟುಂಬ ಕಾರ್ಖಾನೆ ಮುನ್ನಡೆಸಲು ಕೈಜೋಡಿಸಿವೆ

Read More »

ರಾಯಚೂರು: ಅಂಗವಿಕಲ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ!

ಸರ್ಕಾರದಿಂದ ವಿತರಿಸುವ ನಾಲ್ಕು ಚಕ್ರದ ಸ್ಕೂಟಿ ನೀಡದ ಕಾರಣಕ್ಕೆ ಮನನೊಂದ ಅಂಗವಿಕಲ ವ್ಯಕ್ತಿಯೊಬ್ಬರು ಓವರ್‌ ಹೆಡ್‌ ಟ್ಯಾಂಕ್‌ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ದೇವಸುಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

Read More »

ಅಶ್ಲೀಲ ಪದ ಬಳಕೆ ಆರೋಪ; ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ ರಮ್ಯಾ

ರಮ್ಯಾ ಮತ್ತು ದರ್ಶನ್‌ ಫ್ಯಾನ್ಸ್ ನಡುವಿನ ಸೋಷಿಯಲ್ ಮೀಡಿಯಾ ಕಮೆಂಟ್ಸ್‌ ಕಾಳಗ ಮುಂದುವರೆದಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರು.ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ ಅವರು ಮುಂದಾಗಿದ್ದು, ತಮ್ಮ ವಕೀಲರ ಜೊತೆ ಚರ್ಚಿಸಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು …

Read More »

ಶ್ವಾನ ಹೆಸರಲ್ಲಿ ವಾಸಸ್ಥಳ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳು!

ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ವಿವಾದದ ಮಧ್ಯೆ ಪಟ್ನಾ ಜಿಲ್ಲೆಯಲ್ಲಿ ಶ್ವಾನ(ನಾಯಿ) ಹೆಸರಿಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.ಮಸೌರ್ಹಿಯಲ್ಲಿರುವ ಸರ್ಕಾರದ ಸಾರ್ವಜನಿಕ ಸೇವೆಗಳ ಹಕ್ಕು(RTPS) ಪೊರ್ಟಲ್​​ ಮೂಲಕ ಈ ಪ್ರಮಾಣ ಪತ್ರ ನೀಡಲಾಗಿದೆ ಎಂದು ವರದಿಯಾಗಿದೆ.

Read More »

ಆಟವಾಡುತ್ತಿದ್ದ ಬಾಲಕಿಗೆ ‘ಕಿಸ್’ ಕೊಟ್ಟು ಪರಾರಿಯಾದ ಕಾಮುಕ!

ಪಾಕಿಸ್ತಾನದ ಕಸೂರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮನೆಯ ಬಳಿ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಟವಾಡುತ್ತಿದ್ದ ಬಾಲಕಿ ಬಳಿ ಬಂದ ಕಾಮುಕ ಕಿಸ್ ಕೊಟ್ಟು ಪರಾರಿಯಾಗಿದ್ದಾನೆ.

Read More »

ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!

ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಹೆಂಡತಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಆಕೆಯ ಹೊಟ್ಟೆಯಲ್ಲಿದ್ದ ಮಗು ಗರ್ಭಪಾತವಾಗಿ ಸತ್ತು ಹೋಗಿತ್ತು. ಇದರಿಂದ ಗಂಡನ ಮೇಲೆ ಸೇಡಿಗಾಗಿ ಕಾದಿದ್ದ ಹೆಂಡತಿ ಮತ್ತು ಆಕೆಯ ಗೆಳೆಯ ಸೇರಿಕೊಂಡು ಗಂಡನಿಗೆ ಚಟ್ಟ ಕಟ್ಟಿದ್ದಾರೆ.ಪೊಲೀಸರು ನಿಂಗಪ್ಪನ ನಾಪತ್ತೆ ತನಿಖೆಗೆ ಸಂಬಂಧಿಸಿದಂತೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ. ನಂತರ, ಕೇರಳದಲ್ಲಿ ವಾಸವಿದ್ದ ಆರೋಪಿ ಲಕ್ಷ್ಮೀ, ತಿಪ್ಪೇಶ ನಾಯ್ಕ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆತಂದು ಜೈಲಿಗಟ್ಟಿದ್ದಾರೆ. ಈ …

Read More »

ಹೋಗಿ ಮೋದಿಗೆ ಹೇಳು ಎಂದಿದ್ದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎನ್​ಕೌಂಟರ್!

ಭಾರತದ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದನಾ ದಾಳಿಗಳಲ್ಲಿ ಒಂದಾದ ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್​ಕೌಂಟರ್ ಮಾಡಿವೆ. ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ವೇಳೆ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿಗೆ ‘ಹೋಗಿ ಮೋದಿಗೆ ಹೇಳು’ ಎಂದು ಸವಾಲು ಹಾಕಿದ್ದ ಮೂಸಾ ಇದೀಗ ಎನ್​ಕೌಂಟರ್​​ನಲ್ಲಿ ಜೀವ ಕಳೆದುಕೊಂಡಿದ್ದಾನೆ.

Read More »

10ಕ್ಕೂ ಹೆಚ್ಚು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಪೊಲೀಸರು ಎಷ್ಟೇ ಕಠಿಣವಾದ ಕ್ರಮ ತೆಗೆದುಕೊಂಡರು ಸಹ ಕಿಡಿಗೇಡಿಗಳು ತಮ್ಮ ದುಷ್ಕೃತ್ಯ ಮುಂದುವರಿಸಿದ್ದಾರೆ. ಇದೀಗ ರಸ್ತೆಬದಿ ನಿಲ್ಲಿಸಿಂದ ಬೈಕ್ ಗಳಿಗೆ, ಅಂಗಡಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿರುವ ಆರೋಪ ಕೇಳಿಬಂದಿದೆ.ಹಲಸೂರಿನಲ್ಲಿ ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕಿಡಿಗೇಡಿಗಳ ದೃಶ್ಯ ಪತ್ತೆಯಾಗಿದೆ. ಅಂಗಡಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. …

Read More »