ಇಶಿತಾ ದ್ವೇಷಕ್ಕೆ ಶ್ರದ್ಧಾ ಶ್ರೀಮಂತಿಕೆ, ಸೌಂದರ್ಯ ಮಾತ್ರ ಕಾರಣವಾಗಿರಲಿಲ್ಲ. ಇಶಿತಾ ಹಾಗೂ ಆಕೆ ಬಾಯ್ ಫ್ರೆಂಡ್ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಶ್ರದ್ಧಾ ಕಾರಣ, ಈ ಘಟನೆಯಲ್ಲಿ ಶ್ರದ್ಧಾ ಕೈವಾಡವಿದೆ ಅಂತ ಇಶಿತಾ ನಂಬಿದ್ದಳು. ಅದೇ ಆಕೆ ಇಷ್ಟೊಂದು ಕಟು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನ್ನ ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ (Acid) ಹಾಕಿದ ಇಶಿತಾಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದ ಅಂಶ್ ಹುಡುಕಾಟ …
Read More »ರಸ್ತೆ ಅಪಘಾತ ಓರ್ವ ಸಾವು , ಮೂವರಿಗೆ ಗಂಭೀರ ಗಾಯ.!
ಮಂಗಳೂರಿನಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಕಾರಿಗೆ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
Read More »20ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ನಕಲಿ ಪೊಲೀಸ್!!
30 ವರ್ಷದ ನೌಶಾದ್ ತ್ಯಾಗಿ ಎಂಬಾತ ರಾಹುಲ್ ತ್ಯಾಗಿ ಎಂಬ ಹೆಸರಿಟ್ಟುಕೊಂಡು ನಾನು ಪೊಲೀಸ್ ಅಂತ ನಕಲಿ ಪೊಲೀಸ್ ಡ್ರೆಸ್ ಧರಿಸಿ ಮಹಿಳೆಯರನ್ನು ಬಕ್ರಾ ಮಾಡುತ್ತಿದ್ದ. ‘ಅರ್ಧದಲ್ಲೇ ಶಾಲೆ ಬಿಟ್ಟಿದ್ದ ನೌಶಾದ್, ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ವಿಧವೆಯರು ಮತ್ತು ಪತಿಯಿಂದ ಬೇರ್ಪಟ್ಟವರನ್ನೇ ಪರಿಚಯ ಮಾಡಿಕೊಂಡು, ಲೈಂಗಿಕ ಹಿಂಸೆ ನೀಡಿ ಎಸ್ಕೇಪ್ ಆಗುತ್ತಿದ್ದ’ ಎಂದು ಎಸ್ಎಸ್ಪಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.ಮಹಿಳೆಯೊಬ್ಬರು ಮುಜಫರ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ …
Read More »ಸರಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಭೇಟಿ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನೂತನ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರ ಮಹತ್ತರವಾಗಿದೆ. ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಸರಕಾರದ ಯಶಸ್ಸಿನಲ್ಲಿ ಕೈಜೋಡಿಸಬೇಕು. ಸಂಘವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
Read More »ಮಂಗಳೂರು :ಲಾರಿಯ ಹಿಂಬದಿಗೆ ಕಾರು ಡಿಕ್ಕಿ- ಇಬ್ಬರಿಗೆ ಗಾಯ!
ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಸಂಭವಿಸಿದೆ.ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸಿದ್ದಾರೆ.ಕೋಡಿಕರೆ ನಿವಾಸಿ ಲೋಕೇಶ್ (43) ಇವರು ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸ್ಥಾಪಕದಕ್ಷ …
Read More »ಕೋಳಿ ಸಾಗಾಟದ ಲಾರಿ ಪಲ್ಟಿ; ಸತ್ತ ಕೋಳಿಗಳಿಗೆ ಮುಗಿಬಿದ್ದ ಜನರು!
ಕಡೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮುಂಬಾಳ್ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಕೋಳಿಗಳನ್ನು ಕೊಂಡೊಯ್ಯಲು ಸ್ಥಳೀಯರು ಮುಗಿಬಿದ್ದಿದ್ದರು.ಸತ್ತ ಕೋಳಿಯಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.
Read More »ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಬೆಂಕಿಗಾಹುತಿಯಾದ ಕಾರು- ಚಾಲಕ ಪಾರು!
ಮೊಗರುಕಟ್ಟೆಯಿಂದ ಗಂಜಿಮಠದ ಕಡೆಗೆ ತೆರಳುತ್ತಿದ್ದ ಕಾರೊಂದು ತಡರಾತ್ರಿ ಸುಮಾರು 2 ಗಂಟೆಗೆ ನಾರ್ಲಪದವು ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ.ಪರಿಣಾಮ ಕಾರಿನ ಎಸಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.ಅವಘಡದಲ್ಲಿ ಕಾರು ಸಂಪೂರ್ಣ ಭಸ್ಮಗೊಂಡಿದ್ದು, ಕಾರಿನಲ್ಲಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇದು ಕೊಳಂಬೆ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಟೂರಿಸ್ಟ್ ಕಾರು ಎಂದು ತಿಳಿದು ಬಂದಿದೆ.
Read More »5 ವರ್ಷ ನಾನೇ CM, ಸರ್ಕಾರ ಬಂಡೆ ತರ ಇರುತ್ತೆ : ಸಿದ್ರಾಮಯ್ಯ ಹೇಳಿಕೆ..
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. 5 ವರ್ಷವೂ ನಾನೇ ಈ ರಾಜ್ಯದ ಸಿಎಂ ಆಗಿರುತ್ತಾನೆ. ನಿಮಗ್ಯಾಕೆ ಅನುಮಾನ ಬಂದಿದೆ? ಎಂದು ಪ್ರಶ್ನೆ ಮಾಡಿದರು.ನಾಲ್ಕು ವರ್ಷ ಅಧಿಕಾರದಲ್ಲಿದ್ದರು, ಕುಮಾರಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರಕಾರ ನಡೆಸಿದ್ದರೂ, ಯಾವುದೇ ಕ್ಷೇತ್ರದಲ್ಲೂ ಏನೂ ಕೆಲಸ ಮಾಡಿಲ್ಲ. ಸುಮ್ಮನೆ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ.ಮುಂದಿನ ಐದು ವರ್ಷ ನಾನೆ ಸಿಎಂ ಆಗಿ ಮುಂದುವರಿಯುತ್ತೇನೆ. ಆರ್. ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಏನು ನಮ್ಮ ಹೈಕಮಾಂಡಾ? …
Read More »ಬಾಲಕಿಯನ್ನು ಟೆರೇಸ್ನಿಂದ ತಳ್ಳಿದ ವ್ಯಕ್ತಿ ಬಂಧನ!!
ಭಾಂಡಪ್ನ ಎತ್ತರದ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 24 ರಂದು 15 ವರ್ಷದ ಬಾಲಕಿಯನ್ನು ಕಟ್ಟಡದ ಟೆರೇಸ್ನಿಂದ ತಳ್ಳಿ ಆಕೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.ತನಿಖೆಯ ಸಮಯದಲ್ಲಿ, ಬಾಲಕಿ ಅಧ್ಯಯನಕ್ಕೆ ಸಂಬಂಧಿಸಿದ ಒತ್ತಡದಿಂದಾಗಿ 30 ಮತ್ತು 31 ನೇ ಮಹಡಿಗಳ ನಡುವಿನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಕಟ್ಟಡದ ಸಿಸಿಟಿವಿ …
Read More »ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಯುವತಿಯರ ಮಾರಾಟ!!
14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್ನಲ್ಲಿನ ಮಂಚದ ಕೆಳಗೆ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಬ್ಯಾಗವಾದಿ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದಾರೆ.ಮನೆ ಬಿಟ್ಟು ಬಂದವರು, ಬಡವರು, ಅನಾಥರು, ನೊಂದ ಯುವತಿಯರು, ಬಾಲಕಿಯರನ್ನೇ ಮಹಿಳೆ ಟಾರ್ಗೆಟ್ ಮಾಡುತ್ತಿದ್ದಳಂತೆ. ಈ ಬಾಲಕಿಯರನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿಗೆ ಮಾರಾಟ ಅಥವಾ ಮದುವೆ ಮಾಡಿಕೊಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.ಪೊಲೀಸರು ಯುವತಿಯನ್ನು ಚಿಕ್ಕಮಗಳೂರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





