Breaking News

BigTv News

ಡ್ಯಾಂನಲ್ಲಿ ಮುಳುಗಿ ಡಿಪ್ಲೊಮಾ ವಿದ್ಯಾರ್ಥಿ ದಾರುಣ ಸಾವು!

ವಿದ್ಯಾರ್ಥಿ ವಿಕಾಸ್, ತನ್ನ ಸ್ನೇಹಿತರಾದ ಸೃಜನ್ ಮತ್ತು ಲೋಕೇಶ್ ಗೌಡ ಅವರೊಂದಿಗೆ ಮಂಚನಬೆಲೆ ಡ್ಯಾಂಗೆ ಈಜಲು ಹೋಗಿದ್ದಾರೆ.ನೀರಿನಲ್ಲಿ ಕೆಲವೇ ನಿಮಿಷಗಳಲ್ಲಿ ವಿಕಾಸ್ ಆಳಕ್ಕೆ ಸಿಲುಕಿ ಮುಳುಗಲು ಆರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ಪೊಲೀಸರು ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಜಿದ್ದಾರೆ. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.ಸುಮಾರು 6 ಗಂಟೆಗಳ ಹುಡುಕಾಟದ ಬಳಿಕ ವಿಕಾಸ್ ಮೃತದೇಹ ಪತ್ತೆಯಾಗಿದೆ. ಇದೀಗ ಮೃತದೇಹವ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಸ್ವಾಭಾವಿಕ …

Read More »

ರೌಡಿಶೀಟರ್ ಕೊಲೆ ಪ್ರಕರಣ: ಮತ್ತಿಬ್ಬರ ಬಂಧನ!!

ನಗರದ ಜನತಾ ಕಾಲೊನಿಯಲ್ಲಿ ಜೂನ್ 14ರ ರಾತ್ರಿ ವಿಜಯ್ (26) ಎಂಬ ರೌಡಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು.ಕಾರ್ಯಾಚರಣೆ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಪರಾರಿಯಾಗುತ್ತಿದ್ದ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಬಂಧಿತ ಅರುಣ್ ಹಾಗೂ ದೀಪು ಹೇಳಿಕೆ ಆಧರಿಸಿ ಇನ್ನಿಬ್ಬರನ್ನು ಬಂಧಿಸಲಾಗಿದೆ. ದಾಳಿ ವೇಳೆ ಜೆ.ಜೆ.ನಗರ ಠಾಣೆ ಎಎಸ್‌ಐ ಕುಮಾರ್ ಮತ್ತು ಕಾನ್‌ಸ್ಟೆಬಲ್‌ ಕರೀಂ ಸಾಬ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಗುಂಡ್ಲುಪೇಟೆ: ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಪೊಲೀಸರ ವಶಕ್ಕೆ!!

ಜೂನ್ 16 ರಂದು ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲಾ ಮುಂಭಾಗ ನಡೆದ ಹಿಂದೂ ಯುವಕನ ಹತ್ಯೆಗೆ ಸಂಬಂದಿಸಿದಂತೆ ಘಟನೆ ನಡೆದ ಮರುದಿನವೇ ಕರ್ನಾಟಕ ಗೃಹಮಂಡಳಿ ನಿವಾಸಿ ನಿಜಾಮುದ್ದೀನ್ ಎಂಬಾತನನ್ನ ಬಂದಿಸಿದ್ದ ಪೊಲೀಸರು ಇನ್ನೋರ್ವ ಆರೋಪಿ ಮಹಮ್ಮದ್ ರಫಿ ಬಿನ್ ಮಹಮದ್ ಜಿಯಾಯುದ್ದೀನ್ ( 35 ) ಎಂಬುವವನ್ನ ವಶಕ್ಕೆ ಪಡೆದಿದ್ದಾರೆ.

Read More »

ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಗುಂಪು ವಿಚಾರಣೆ, ಮಹಿಳೆ ಆತ್ಮಹತ್ಯೆ!

ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಮಹಿಳೆಯೊಬ್ಬರನ್ನು ಜನರ ಗುಂಪೊಂದು ಸಾರ್ವಜನಿಕವಾಗಿ ನಿಂದಿಸಿದ್ದು, ಇದರಿಂದ ನೊಂದ ಅವರು iಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ರಸೀನಾ ಮತ್ತು ಆಕೆಯ ಸ್ನೇಹಿತನನ್ನು ಮಸೀದಿಯ ಬಳಿ ಗುಂಪೊಂದು ಪ್ರಶ್ನಿಸಿತು. ಬಳಿಕ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಅನ್ನು ಕಸಿದುಕೊಂಡಿದೆ. ಅಲ್ಲದೇ ಮಹಿಳೆಯ ಕುಟುಂಬ ಸದಸ್ಯರನ್ನು ಎಸ್‌ಡಿಪಿಐ ಕಚೇರಿಗೆ ಕರೆಸಿ ಅವಮಾನಿಸಿದೆ ಎಂದು …

Read More »

ಅಪಾರ್ಟ್​ಮೆಂಟ್​ ಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರಗಳ ರಾಶಿ!!

ಬೇಗೂರಿನಲ್ಲಿ ಇರುವ ಅಪಾರ್ಟ್​​ಮೆಂಟ್​​ವೊಂದರಲ್ಲಿ ಒಳಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಹಲವು ಭಾಗಗಳು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.ಮೂಳೆಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಈ ಪರೀಕ್ಷೆಗಳ ಫಲಿತಾಂಶಗಳು ಒಂದು ವಾರದೊಳಗೆ ನಿರೀಕ್ಷಿಸಲಾಗಿದೆ ಎಂದು ಬೇಗೂರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಕಳೆದ‌ 10 ವರ್ಷಗಳ ಹಿಂದೆ ಅಪಾರ್ಟ್​​ಮೆಂಟ್ ನಿರ್ಮಾಣವಾಗುವ‌ ಆ ಜಾಗದ ಬಳಿ ಸ್ಮಶಾನವಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗೆ ಇದ್ದಿರಬಹುದು, ಆದ್ದರಿಂದಲೇ ಇವೆಲ್ಲಾ …

Read More »

ಶಾಲೆಗೆ ತೆರಳುತ್ತಿದ್ದ ನೆಚ್ಚಿನ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು, ಮಕ್ಕಳ ಕಣ್ಣೀರು!!

ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಯಿಸುತ್ತಿದ್ದ ವಾಸುದೇವ ಹಂಚಾಟೆ ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದರು.ಶಿಕ್ಷಕ ಬೈಕ್ ಸ್ಕಿಡ್ ಆಗಿ ರಸ್ತೆಗೆ ಅಪ್ಪಳಿಸಿದ್ದಾರೆ. ಈ ವೇಳೆ ತಲೆಗೆ ಗಂಭೀರವಾದ ಗಾಯವಾಗಿದೆ. ದೇಹದ ಇತರ ಭಾಗಕ್ಕೆ ಹೆಚ್ಚಿನ ಗಾಯವಿಲ್ಲ. ತಲೆಗೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ಸ್ಥಳದಲ್ಲೇ ಶಿಕ್ಷಕ ಮೃತಪಟ್ಟಿದ್ದಾರೆ. ಸ್ಥಳೀಯರು ಸೇರಿ ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ವೈದ್ಯರು ಶಿಕ್ಷಕ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

Read More »

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶಾಲಾ ವಾಹನ ಡಿಕ್ಕಿ: ಬೈಕ್ ಸವಾರ ಸಾವು!

ಬಿಜಿಎಸ್ ಗ್ಲೋಬಲ್ ಸ್ಕೂಲ್ ವಾಹನವು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು.ಈ ವೇಳೆ ಎದುರಿಗೆ ಬಂದ ಬೈಕ್ ಚಾಲಕನಿಗೆ ವಾಹನ ಡಿಕ್ಕಿ ಹೊಡೆಯಿತು. ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಅಮಿತ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

Read More »

ಬೆಂಗಳೂರ: ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು.!

ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಏಕಾಏಕಿ ಮರದ ಕೊಂಬೆ ಮುರಿದು ಬಿದ್ದಿದ್ದು, ಬೈಕ್ ಸವಾರ ಅಕ್ಷಯ್ (29) ಗಂಭೀರವಾಗಿ ಗಾಯಗೊಂಡಿದ್ದನು.ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಭಾನುವಾರ ತಂದೆ ಹುಟ್ಟುಹಬ್ಬದ ಹಿನ್ನೆಲೆ ಮಟನ್ ತೆಗೆದುಕೊಂಡು ಬರುವುದಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗಳಾಗಿದ್ದ ಅಕ್ಷಯ್ ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತಲೆಚಿಪ್ಪು 17 ಚೂರುಗಳಾಗಿದೆ ಎಂದು ವೈದ್ಯರು ಹೇಳಿದ್ದರು.ಮರದ ಕೊಂಬೆ …

Read More »

ಪತಿ ಮತ್ತು ಗರ್ಭಿಣಿ ಪತ್ನಿಯ ಮೃತದೇಹಗಳು ಮನೆಯಲ್ಲಿ ಪತ್ತೆ!!

ತಿಮ್ಮಪ್ಪರ ಮನೆ ಮಿತ್ತಮಜಲಿನಲ್ಲಿದ್ದು, ಜಯಂತಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಜಯಂತಿ ಗರ್ಭಿಣಿಯಾಗಿದ್ದು, ಜು.2ರಂದು ಸೀಮಂತ ನಡೆಸಲು ದಿನಾಂಕ ನಿಗದಿಯಾಗಿತ್ತು ಎನ್ನಲಾಗಿದೆ.ಪತಿಯ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿದ್ದರೆ, ಪತ್ನಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

Read More »

ಕೆೆರೆಯಲ್ಲಿ ಮುಳುಗಿದ ತಮ್ಮನನ್ನು ರಕ್ಷಿಸಲು ಹೋದ ಅಣ್ಣನ ಸಾವು!

ಕುಟುಂಬದೊಂದಿಗೆ ಮಾಲಿಕ್‌ ದಿನಾರ್‌ ಸಿಯಾರತ್‌ಗಾಗಿ ವಿದ್ಯಾರ್ಥಿ ತಲುಪಿದ್ದರು. ಸಕ್‌ಲೈನ್‌(18) ತಳಂಗರೆ ಮಾಲಿಕ್‌ ದಿನಾರ್‌ ಮಸೀದಿಯ ಕೆರೆಯಲ್ಲಿ ಸ್ನಾನ ಮಾಡಲೆಂದು ಇಳಿದಿದ್ದನು. ಈ ಸಂದರ್ಭದಲ್ಲಿ ಕಾಲು ಜಾರಿ ಮುಳುಗುತ್ತಿದ್ದ ಸಕ್‌ಲೈನ್‌ನನ್ನು ರಕ್ಷಿಸಲೆಂದು ಕೆರೆಗೆ ಹಾರಿದ್ದು, ಸಾವಿಗೆ ಕಾರಣವಾಯಿತು.ಹತ್ತಿರದಲ್ಲಿದ್ದ ಕುಟುಂಬ ಸದಸ್ಯರ ಬೊಬ್ಬೆ ಕೇಳಿ ಸ್ಥಳೀಯ ನಿವಾಸಿಗಳು ಹಾಗು ಅಗ್ನಿಶಾಮಕ ದಳ ಇಬ್ಬರನ್ನು ಮೇಲಕ್ಕೆತ್ತಿ, ಆಸ್ಪತ್ರೆಗೆ ತಲುಪಿಸಿದ್ದರು. ಫೈಝಲ್‌ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ

Read More »