Breaking News

BigTv News

ಕೈದಿಯ ಜತೆ ಸರಸ ಸಲ್ಲಾಪದ ವಿಡಿಯೋ ಮಾಡಿ ಆತನಿಂದಲೇ ಹಣ ವಸೂಲಿ, ಪಿಎಸ್‌ಐ ಜಯಶ್ರೀಗೆ ಬಿಗ್‌ಶಾಕ್‌

ಬೆಳಗಾವಿ: ಕೈದಿಯೊಂದಿಗೆ ಪಿಎಸ್‌ಐ ಜಯಶ್ರೀ ಅವರ ಸರಸ ಸಲ್ಲಾಪದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಿಂಡಲಗಾ ಜೈಲಿನಲ್ಲಿದ್ದ ರೌಡಿಶೀಟರ್ ಸಾಯಿಕುಮಾರ್ ಜತೆ ಅಕ್ರಮ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೈದಿಗೆ ಮೊಬೈಲ್ ಒದಗಿಸಿ ವಿಡಿಯೋ ಕಾಲ್ ಮೂಲಕ ಅಶ್ಲೀಲವಾಗಿ ವರ್ತಿಸಿದ್ದ ವಿಡಿಯೋ, ಆಡಿಯೋ ಕ್ಲಿಪ್‌ಗಳು ವೈರಲ್ ಆಗಿದ್ದವು. ಅಲ್ಲದೆ, ಹಣ ವರ್ಗಾವಣೆ ಹಾಗೂ ಸ್ಕೂಟರ್‌, ಕಾರನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವ ಚಾಟ್‌ಗಳು …

Read More »

ಕಳ್ಳನಿಂದ ₹20 ಸಾವಿರ ಲಂಚ ಪಡೆಯುವಾಗ ‘ಲೋಕಾ’ ಬಲೆಗೆ ಬಿದ್ದ ಕಾನ್‌ಸ್ಟೆಬಲ್‌ಗಳು

ಕಲಬುರಗಿ: ರೂಢಿಗತ ಕಳ್ಳನ ಕುಟುಂಬಕ್ಕೆ ಗಡೀಪಾರು ಮಾಡುವುದಾಗಿ ಬೆದರಿಸಿ ₹20 ಸಾವಿರ ಲಂಚ ಪಡೆಯುತ್ತಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಪರಶುರಾಮ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮತ್ತೊಬ್ಬ ಕಾನ್‌ಸ್ಟೆಬಲ್‌ ವೀರೇಶ ಪರಾರಿಯಾಗಿದ್ದಾನೆ. ಬ್ರಹ್ಮಪುರ ಪೊಲೀಸ್‌ ಠಾಣೆಯ ಹಿಂಭಾಗದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂಒಬಿ ಶೀಟ್‌ ಹೊಂದಿರುವ ಕಾರ್ತಿಕ್‌ ಪಾಟೀಲನ ಕುಟುಂಬಕ್ಕೆ ₹1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈಗಾಗಲೇ ₹50 ಸಾವಿರ ಪಡೆದಿದ್ದ ಕಾನ್‌ಸ್ಟೆಬಲ್‌ಗಳು ಮತ್ತೆ …

Read More »

ರೌಡಿಶೀಟರ್‌ನಿಂದ ಲಂಚ ಪಡೆಯುವಾಗ ಪೊಲೀಸ್ ಕಾನ್ಸ್‌ಟೇಬಲ್‌ಗಳೇ ಲೋಕಾಯುಕ್ತ ಬಲೆಗೆ!

ಕಲಬುರಗಿ: ಗಡಿಪಾರು ಮಾಡುವುದಾಗಿ ಬೆದರಿಸಿ ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬ್ರಹ್ಮಪುರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಪರಶುರಾಮ್ ಮತ್ತು ವೀರೇಶ್ ರೌಡಿಶೀಟರ್‌ ಖನ್ನಾ ಪಟೇಲ್‌ಗೆ ಬೆದರಿಕೆ ಹಾಕಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲಿಗೆ ₹50 ಸಾವಿರ ಪಡೆದಿದ್ದ ಪೇದೆಗಳು, ಬಳಿಕ ಮತ್ತೆ ₹20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದ ತಂಡ, ಬ್ರಹ್ಮಪುರ ಠಾಣೆ ಆವರಣದಲ್ಲೇ ಲಂಚ …

Read More »

ಬಗೆದಷ್ಟೂ ಬಯಲಾಗ್ತಿದೆ KPSC ಕರ್ಮಕಾಂಡ: ಕನ್ನಾಳೆ ಮನೆಯಲ್ಲಿ 15 ಗ್ರೂಪ್ B ಹಾಲ್ ಟಿಕೆಟ್ ಪತ್ತೆ! KAS ಪರೀಕ್ಷೆಗಳಲ್ಲೂ ಅಕ್ರಮ?

ಕೆಪಿಎಸ್‌ಸಿ ಭ್ರಷ್ಟಾಚಾರ ಪ್ರಕರಣದ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ಸಿಐಡಿ ನಡೆಸಿದ ಶೋಧದಲ್ಲಿ 15 ಗ್ರೂಪ್‌-ಬಿ ಪರೀಕ್ಷೆಗಳ ಹಾಲ್‌ಟಿಕೆಟ್‌ಗಳು ಪತ್ತೆಯಾಗಿವೆ. ಇದರಿಂದ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಜೊತೆಗೆ ಗ್ರೂಪ್‌-ಬಿ ಹಾಗೂ ಕೆಎಎಸ್‌ ಪರೀಕ್ಷೆಗಳಲ್ಲೂ ಪ್ರಶ್ನೆಪತ್ರಿಕೆ ಡೀಲ್ ನಡೆದಿರಬಹುದೆಂಬ ಅನುಮಾನ ಸಿಐಡಿಗೆ ಮೂಡಿದೆ. ಕೆಎಎಸ್‌ ಪ್ರಿಲಿಮ್ಸ್‌, ಮೇನ್ಸ್‌ ಹಾಗೂ ಸಂದರ್ಶನದ ಮೂರು ಹಂತಗಳಿಗೂ ಪ್ಯಾಕೇಜ್ ದರ ನಿಗದಿಪಡಿಸಿ ಅಕ್ರಮ ನಡೆಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪಶುವೈದ್ಯಾಧಿಕಾರಿ ನೇಮಕಾತಿ ತನಿಖೆ …

Read More »

ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ: ಕಾಂಗ್ರೆಸ್ ಮುಖಂಡ, ಸಂಘ ಪರಿವಾರದ ಕಾರ್ಯಕರ್ತರಿಬ್ಬರ ಮೇಲೆ FIR

ಮೂಡುಬಿದಿರೆ: ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡರೊಬ್ಬರು ಸೇರಿ ಮೂವರ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಕೆಫೆಗೆ ತೆರಳಿದ್ದ ವೇಳೆ ಆರೋಪಿಗಳು ಅಕ್ರಮವಾಗಿ ಒಳನುಗ್ಗಿ ಅವರ ಹೆಸರು ಕೇಳಿ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳು ದೂರು ನೀಡಲು ಹೆದರಿದ್ದ ಹಿನ್ನೆಲೆಯಲ್ಲಿ ಪಿಎಸ್ಸೈ ಪ್ರತಿಭಾ ನೀಡಿರು ಅವರ ದೂರಿನ …

Read More »

ಐಪಿಎಸ್‌ ಅಧಿಕಾರಿ ಮೇಲೆ ಗೂಂಡಾವರ್ತನೆ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್

ಬೆಂಗಳೂರು: ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರನ್ನು ಹಿಡಿದು ತಳ್ಳಾಡಿದ ಆರೋಪದ ಮೇರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ.31ರಂದು ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಪ್ರತಿಭಟನಾಕಾರರು …

Read More »

ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ: ದಾವಣಗೆರೆ ಟೀಮ್ ಅಕಾಡೆಮಿ ವಿರುದ್ಧ ದೂರು ದಾಖಲಿಸಿದ ಪೋಷಕರು

ದಾವಣಗೆರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತಳನ್ನು ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ 17 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ. ಸೆ.2ರ ರಾತ್ರಿ ಹಾಸ್ಟೆಲ್ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ರಂಜಿತಾ ಕಳೆದ ಒಂದೂವರೆ ವರ್ಷದಿಂದ ದಾವಣಗೆರೆಯ ಟೀಮ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆಗೆ ಸಂಬಂಧಿಸಿ ಪೋಷಕರು ಕಾಲೇಜು ಆಡಳಿತದ ವಿರುದ್ಧ …

Read More »

ಅಪ್ರಾಪ್ತ ಬಾಲಕಿಯೊಂದಿಗೆ ನಗ್ನ ವಿಡಿಯೋ ಚಿತ್ರೀಕರಣ

ಕಾಸರಗೋಡು: ಯುವಕನನ್ನು ಅಪಹರಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಅಪ್ರಾಪ್ತ ಬಾಲಕಿಯೊಂದಿಗೆ ಅರೆನಗ್ನವಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿ ₹1.02 ಲಕ್ಷ ದೋಚಿದ ಆರೋಪದಡಿ ಬದಿಯಡ್ಕ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ದೂರು ನೀಡಿದ್ದಾರೆ. ಆ.29ರಂದು ತನ್ನನ್ನು ಕಾರಿನಲ್ಲಿ ಅಪಹರಿಸಿ ಕೊಠಡಿಯಲ್ಲಿ ಬಂಧಿಸಿಟ್ಟ ಆರೋಪಿಗಳು, ಅಪ್ರಾಪ್ತ ಬಾಲಕಿಯೊಂದಿಗೆ ಅರೆನಗ್ನವಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ …

Read More »

ಮೈಸೂರಿನಲ್ಲಿ ಮತ್ತೊಂದು ‘ಗೋಲ್ಡ್ ಸ್ಕ್ಯಾಮ್’: ಮೋಹನ್ ಜ್ಯುವೆಲರಿಯಿಂದ ನೂರಾರು ಗ್ರಾಹಕರಿಗೆ ಮೋಸ

ಮೈಸೂರಿನ ವಿವೇಕಾನಂದ ವೃತ್ತದಲ್ಲಿರುವ ‘ಮೋಹನ್ ಜ್ಯುವೆಲರಿ’ ಮಾಲೀಕ ಮೋಹನ್ ಲಾಲ್, ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ 80ಕ್ಕೂ ಹೆಚ್ಚು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಕಳೆದ ಎರಡು ಕಂತು ಯೋಜನೆಗಳಲ್ಲಿ ಸಮಯಕ್ಕೆ ಸರಿಯಾಗಿ ಚಿನ್ನ ನೀಡಿದ್ದರಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದ ಎನ್ನಲಾಗಿದೆ. ಆದರೆ, ಈ ಬಾರಿ ಕಳೆದ ಒಂದು ವಾರದಿಂದ ಅಂಗಡಿ ಬಾಗಿಲು ಮುಚ್ಚಿದ್ದು, ಮೋಹನ್ ಲಾಲ್ ಕೂಡ ನಾಪತ್ತೆಯಾಗಿದ್ದ. ಮನೆಯೂ ಖಾಲಿಯಾಗಿರುವುದು …

Read More »

ರಾಮನಗರದಲ್ಲಿ ತಯಾರಾದ ಖೋಟಾ ನೋಟು ಯಾವುದಕ್ಕೆ ಬಳಸಲಾಗ್ತಿತ್ತು ಗೊತ್ತಾ? ಪೊಲೀಸರಿಂದ ಸೀಕ್ರೆಟ್ ರಿವೀಲ್!

ರಾಮನಗರದ ಶಾಂತಿಲಾಲ್ ಲೇಔಟ್‌ನ ನಿರ್ಮಾಣ ಹಂತದ ಮನೆಯೊಂದರಲ್ಲಿ ನಡೆಯುತ್ತಿದ್ದ ಖೋಟಾ ನೋಟು ತಯಾರಿಕೆಯ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ದಾಳಿ ವೇಳೆ ₹5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಕೆಗೆ ಸಿದ್ಧಪಡಿಸಿದ್ದ 10 ಪೇಪರ್ ಬಂಡಲ್‌ಗಳು, ಕೆಮಿಕಲ್, ಗ್ಲಾಸ್ ಫಿಲ್ಮ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಜಪ್ತಿ ಮಾಡಿ 7 ಮಂದಿಯನ್ನು ಬಂಧಿಸಿದ್ದಾರೆ. ಮನೆ ಮಾಲೀಕ ಸಂತೋಷ್‌ಗೆ ಕಮಿಷನ್ ನೀಡುವ ಆಮಿಷವೊಡ್ಡಿ ಆರೋಪಿ ಸಂಪತ್ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ನಿರ್ಮಾಣ ಕಾಮಗಾರಿಗೆ …

Read More »