ಶಿರಾದ ಭವಾನಿನಗರದ ನಿವಾಸಿಗಳಾದ ರಮೇಶ್ ಮತ್ತು ಉಮಾ ದಂಪತಿಯ ಎರಡು ತಿಂಗಳ ಮಗುವಿಗೆ ಏಕಾಏಕಿ ವಾಂತಿ ಕಾಣಿಸಿಕೊಂಡಿತ್ತು.ಮಗುವನ್ನು ಶುಕ್ರವಾರ ಮಧ್ಯರಾತ್ರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ವೈದ್ಯ ಚಿಕಿತ್ಸೆ ನೀಡಿದ ನಂತರ ಮಗುವನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.ಚಿಕಿತ್ಸೆ ನೀಡಿದರೂ ವಾಂತಿ ನಿಲ್ಲದ ಕಾರಣ ಮತ್ತೆ ಶನಿವಾರ ಆಸ್ಪತ್ರೆಗೆ ಕರೆ ತಂದಿದ್ದು ರಕ್ತ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸಿದಾಗ ಪರೀಕ್ಷೆಗಾಗಿ ರಕ್ತ ಪಡೆಯುವಾಗ ಮಗು ಮೃತಪಟ್ಟಿದೆ.ಪ್ರಕರಣ ದಾಖಲಾಗಿದ್ದು ತನಿಖೆ ನಂತರ …
Read More »ಸಚಿವರಿದ್ದ ಹೆಲಿಕಾಪ್ಟರ್ ಜಿಂದಾಲ್ ನಲ್ಲಿ ತುರ್ತು ಭೂಸ್ಪರ್ಶ.!
ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವಕ್ಕೆ ಹೋಗುವ ವೇಳೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬರುವಾಗ ಚಿತ್ರದುರ್ಗದಲ್ಲಿ ಇಂಧನ ಹಾಕಿಸಲಾಗಿತ್ತು.ಬಳಿಕ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಿಂದಾಲ್ ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.ಬಳ್ಳಾರಿಯ ಜಿಂದಾಲ್ ನಿಂದ ಹೆಲಿಕಾಪ್ಟರ್ ಟೇಕ್ ಅಫ್ ಗೆ ಯತ್ನ. ಒಮ್ಮೆ ಟೇಕ್ ಆಫ್ ಆಗಿ ವಿಶೇಷ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.
Read More »ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ, ಮನೋಹರ್ ಲಾಲ್ ಧಕಡ್ ಬಂಧನ!
ಮಹಿಳೆಯೊಬ್ಬರ ಜೊತೆಗಿನ ಲೈಂಗಿಕ ಕ್ರಿಯೆಯೇ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಮನೋಹರ್ ಲಾಲ್ ಧಕಡ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದರು ಅದರಂತೆ ಭಾನುವಾರ ಮನೋಹರ್ ಲಾಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಮಂಡಸೌರ್ ಎಸ್ಪಿ ಅಭಿಷೇಕ್ ಆನಂದ್ ದೃಢಪಡಿಸಿದ್ದಾರೆ.
Read More »ಪುಣೆ :ಮಗುವಿನ ಮೇಲೆ ಅತ್ಯಾಚಾರ ಎಸಗಿದ ನೃತ್ಯ ಶಿಕ್ಷಕ!
ಬೇಸಿಗೆ ಶಿಬಿರಕ್ಕೆ ತೆರಳಿ ಮನೆಗೆ ಬಂದಿದ್ದ ಬಾಲಕಿ ಅಸ್ವಸ್ಥಗೊಂಡಿದ್ದು ಈ ಕುರಿತು ಗಾಬರಿಗೊಂಡ ಪೋಷಕರು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ತಪಾಸಣೆ ನಡೆಸಿದ್ದಾರೆ ಈ ವೇಳೆ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ, ಇದಾದ ಬಳಿಕ ಮಗುವಿನ ಬಳಿ ವಿಚಾರಿಸಿದಾಗ ನೃತ್ಯ ಶಿಕ್ಷಕ ಕೃತ್ಯ ಎಸಗಿರುವುದಾಗಿ ಹೇಳಿದ್ದು ಈ ಕುರಿತು ಪೋಷಕರು ನೃತ್ಯ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ನೃತ್ಯ ಶಿಕ್ಷಕನನ್ನು ಆತನ ಮನೆಯಿಂದ ಬಂಧಿಸಿ ಬಳಿಕ …
Read More »ಮಂಡ್ಯ :ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ.!
ಹೆಲ್ಮೆಟ್ ತಪಾಸಣೆಗಾಗಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸವಾರ ಬಿದ್ದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.ವಾಣಿ-ಅಶೋಕ್ ದಂಪತಿಯ ಮೂರುವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ವೇಳೆ ಆಯತಪ್ಪಿ ಬೈಕ್ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
Read More »ಮೂಡಿಗೆರೆ: ಹರಿಯುವ ನದಿಗೆ ಪಲ್ಟಿ ಬಿದ್ದ ಕಾರು!
ಮೂಡಿಗೆರೆ ತಾಲೂಕಿನಲ್ಲಿ ಕಾರೊಂದು ಉಕ್ಕಿ ಹರಿಯುವ ಹಳ್ಳಕ್ಕೆ ಉರುಳಿ ಬಿದ್ದಿದ್ದು, ಸೊಂಟಕ್ಕೆ ಹಗ್ಗ ಕಟ್ಟಿ ಇಳಿದು ಕಾರಿನಲ್ಲಿದ್ದ ವರನ್ನು ರಕ್ಷಣೆ ಮಾಡಲಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ಅಕ್ಷರಶಃ ತತ್ತರಿಸಿ ಹೋಗಿ ದ್ದಾರೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಸುತ್ತಮುತ್ತ ಕಳೆದ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ
Read More »ಆಟೋ ಮೇಲೆ ಮರ ಬಿದ್ದು ಚಾಲಕ ಮೃತ್ಯು!
ಕೊಪ್ಪ ತಾಲೂಕು ಜಯಪುರ ಸಮೀಪದ ಕೊಗ್ರೆಯ ಜಾಳ್ಮಾರದಲ್ಲಿ ಆಟೋ ಮೇಲೆ ಮರ ಬಿದ್ದು, ಚಾಲಕ ರತ್ನಾಕರ (38) ಮೃತಪಟ್ಟಿದ್ದಾರೆ.ಚಿಕ್ಕಮಗಳೂರು ತಾಲೂಕು ಸುತ್ತಮುತ್ತ ಮಳೆಯ ಅಬ್ಬರ ಜೋರಾಗಿದ್ದು, ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ನಗರದ ಕೆಲವು ಭಾಗ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಕಾರ್ಮಿಕರು, ಮಾಲೀಕರು ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ. ನದಿಗಳ ನೀರಿನ ಮಟ್ಟ ಹಳ್ಳಕೊಳ್ಳ, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಒಟ್ಟಾರೆ …
Read More »ಹೊಂಡಕ್ಕೆ ಬಿದ್ದು ಉಪನ್ಯಾಸಕ ಸಾವು!!
ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಂಗಿಮಾಳು ಗ್ರಾಮದಲ್ಲಿ ಶನಿವಾರ ಅರೆಕಾಲಿಕ ಉಪನ್ಯಾಸಕರೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿ ಶಂಕರರೆಡ್ಡಿ (38) ಎಂದು ಗುರುತಿಸಲಾಗಿದೆ.ಶಂಕರರೆಡ್ಡಿ ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
Read More »ಮುಂಬೈ : ತುಂಬಿದ ಲಾರಿ ಪಲ್ಟಿ, ಜನರು ಅಸ್ವಸ್ಥ!
ಪುಣೆಗೆ ತೆರಳುತ್ತಿದ್ದ ಟ್ಯಾಂಕರ್ ಒಂದು ಮಂಜಿನಿಂದ ಆವೃತವಾದ ತಮ್ಹಿನಿ ಘಾಟ್ ಪ್ರದೇಶದ ಡೊಂಗರ್ವಾಡಿ ಗ್ರಾಮದ ಬಳಿ ಮಗುಚಿ ಬಿದ್ದಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಟ್ಯಾಂಕರ್ನಲ್ಲಿ ಸುಮಾರು 28,000 ಲೀಟರ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊತ್ತೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಸದ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದ ಬಸ್ ಅಪಘಾತವನ್ನು ಗಮನಿಸಿ ತಕ್ಷಣ ಟ್ಯಂಕರ್ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಪಘಾತದಲ್ಲಿ ಚಾಲಕನ ಬೆರಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್ನಲ್ಲಿದ್ದ ಅಪಾರ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲವು ಆಳವಾದ ಕಣಿವೆಗೆ …
Read More »ಗ್ರಾಹಕನಮೇಲೆ ಹಲ್ಲೆ ನಡೆಸಿದ ಜೆಪ್ಟೋ ಡೆಲಿವರಿ ಬಾಯ್ ಅರೆಸ್ಟ್!!
ಆರ್ಡರ್ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಈ ವೇಳೆ ಮಹಿಳೆಗೆ ಯಾಕೆ ತಪ್ಪಾದ ವಿಳಾಸ ನೀಡಿದಿರಿ ಎಂದು ಕೇಳಿದೆ. ಆಗ ಶಶಾಂಕ್ ಎಂಬಾತ ಹೊರಬಂದು ನನ್ನ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ನಾನು ಕೋಪಗೊಂಡು ಹಲ್ಲೆ ಮಾಡಿದ್ದಾಗಿ ವಿಷ್ಣುವರ್ಧನ್ ಹೇಳಿದ್ದಾನೆ.ವಿಷ್ಣುವರ್ಧನ್ ಶಶಾಂಕ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಶಶಾಂಕ್ ಕಣ್ಣಿಗೆ ಗಂಭೀರವಾದ ಗಾಯವಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಿಷ್ಣುವರ್ಧನ್ನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





