ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ದೇವರಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತೋಟದ ಕಾರ್ಮಿಕ ಅಣ್ಣಯ್ಯ (41) ಎಂದು ಗುರುತಿಸಲಾಗಿದೆ. ತೋಟಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದಾಗ ಎದುರಾದ ಕಾಡಾನೆ ದಾಳಿ ಮಾಡಿದೆ ಎನ್ನಲಾಗಿದೆ.ಗ್ರಾಮಸ್ಥರ ಸಹಕಾರದಿಂದ ಅರಣ್ಯ ಸಿಬ್ಬಂದಿಗಳು ಕಾಡಾನೆಯನ್ನು ಕಾಡಿಗಟ್ಟಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Read More »ಕುಂದಾಪುರ : ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂಜಪ್ಪ ಎನ್. ನಿಧನ!
ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ನಂಜಪ್ಪ ಅವರು ಕಳೆದ ಅಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕಾರಾಗಿ ಸೇವೆ ಸಲ್ಲಿಸುತ್ತಿದ್ದರು.ಸೋಮವಾರದಂದು ಕರ್ತವ್ಯದಲ್ಲಿರುವಾಗಲೇ ರಕ್ತದೊತ್ತಡದಿಂದ ಬಳಲುತ್ತಿದ್ದ ನಂಜಪ್ಪ ಅವರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆಪಡೆದರೂಅವರ ಆರೋಗ್ಯದಲ್ಲಿ ಯಾವುದೇ ಗಣನೀಯ ಚೇತರಿಕೆ ಕಂಡುಬಂದಿರಲಿಲ್ಲ. ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಆಗಸ್ಟ್ನಲ್ಲಿ ಕುಂದಾಪುರ ಠಾಣೆ ಪೊಲೀಸ್ ನಿರೀಕ್ಷಕರಾಗಿ ನಿಯುಕ್ತಿಗೊಂಡಿದ್ದರು. ಇನ್ಸ್ಪೆಕ್ಟರ್ ನಿಧನಕ್ಕೆ ಜಿಲ್ಲಾ ಪೊಲೀಸ್ …
Read More »ಮೈಸೂರು: ಯುವತಿಯ ಶವ ಪತ್ತೆ, ಕೊಲೆ ಮಾಡಿ ಬಿಸಾಕಿರುವ ಶಂಕೆ!
ಮೈಸೂರಿನ ಹೊರವಲಯದಲ್ಲಿ ಯುವತಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಲತಾ (25) ಶವ ಪತ್ತೆಯಾಗಿದೆ. ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಲತಾ ಗಿರಿಯಾಬೋವಿ ಪಾಳ್ಯ ನಿವಾಸಿಯಾಗಿದ್ದಾಳೆ.ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷಗೆ ರವಾನೆ ಮಾಡಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »ನಂಜನಗೂಡು :ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು!
ಮಡುವಿನಹಳ್ಳಿ ಗ್ರಾಮದ ಮಹದೇವಶೆಟ್ಟಿ ಎಂಬುವವರ ಪುತ್ರಿ ಮಹದೇವಿಯನ್ನು ಕರಳಪುರ ಗ್ರಾಮದ ಕಾಂತ ಎಂಬುವವರಿಗೆ 3 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.ಮಗಳ ಸಾವಿಗೆ ಆಕೆಯ ಗಂಡ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಕಾಂತ ಎಂಬಾತನನ್ನ ಮಹಾದೇವಿ ಪ್ರೀತಿಸಿ ವಿವಾಹವಾಗಿದ್ದಳು ಎನ್ನಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಸ್ಥಳಕ್ಕೆ ಪಿಎಸ್ಐ ಸುನೀಲ್ ಕುಮಾರ್, ಎಎಸ್ಐ ನಾಗರಾಜು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ …
Read More »ಬೆಂಗಳೂರು: ನಿಂತಲ್ಲೇ ಕುಸಿದು ಬಿದ್ದು ಕ್ಯಾಬ್ ಚಾಲಕ ಸಾವು.!
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ . ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮೃತನನ್ನು ಅರಕಲಗೂಡ ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಗ್ರಾಮದ ಅನುಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ಹೇಳಲಾಗಿದೆ.
Read More »ಕೊಳ್ಳೇಗಾಲ: ಕಾಡು ಹಂದಿಗಳ ದಾಳಿ, ಬೆಳೆ ನಾಶ!
ದೊಡ್ಡಿಂದುವಾಡಿ ಗ್ರಾಮದ ಹೊರವಲಯದ ಗುಂಡಾಲ್ ಜಲಾಶಯದ ವ್ಯಾಪ್ತಿಯ ಜಮೀನುಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬಿಆರ್ಟಿ ವಲಯ ಅರಣ್ಯ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.ಮೊದಲೇ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಕಾಡು ಪ್ರಾಣಿಗಳ ಕಾಟ ಮಿತಿಮೀರಿದ್ದು, ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಕೂಡಲೇ …
Read More »ಗೋಣಿಕೊಪ್ಪಲು :ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’ಕ್ಕೆ ಚಾಲನೆ…
ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’ ಬುಧವಾರ ಆರಂಭಗೊಂಡಿತು. ಪೊನ್ನಂಪೇಟೆ ತಾಲ್ಲೂಕಿನ ಭದ್ರಗೋಳದಲ್ಲಿ ಗುರುವಾರ ನಡೆಯುವ ಹಬ್ಬಕ್ಕೆ ಗಿರಿಜನರು ಬುಧವಾರ ಚಾಲನೆ ನೀಡಿದರು.ಬುಡಕಟ್ಟು ಸಮುದಾಯದ ಯುವಕರು ದೇಹವೆಲ್ಲ ಬಣ್ಣ ಬಳಿದುಕೊಂಡು, ಕೈಗೆ ಸಿಕ್ಕಿದ ಒಡೆದ ಪ್ಲಾಸ್ಟಿಕ್ , ಮುರಿದ ತಗಿಡನ ಡಬ್ಬ, ತುಕ್ಕು ಹಿಡಿದ ಆಂಟೆನಾ ತಟ್ಟೆ, ಬಿದಿರಿನ ಪೈಪ್ ಮೊದಲಾದವುಗಳನ್ನು ವಾದ್ಯ ಪರಿಕರಗಳಾಗಿಸಿಕೊಂಡು ಬಡಿಯುತ್ತಾ ಕುಣಿದು ಕುಪ್ಪಳಿಸಿ ಹಣ ಬೇಡಿದರು.ಗೋಣಿಕೊಪ್ಪಲು ಬಳಿಯ ಭದ್ರಗೋಳದಲ್ಲಿ ನಡೆಯಲಿರುವ ಗಿರಿಜನರ ‘ಕುಂಡೆ ಹಬ್ಬ’ಕ್ಕೆ …
Read More »ಉಳ್ಳಾಲ: ಪಿಕ್ಆಪ್ ಢಿಕ್ಕಿ, ಪಾದಚಾರಿ ಮೃತ್ಯು!
ಪಾದಚಾರಿಗೆ ಪಿಕ್ಆಪ್ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಬ್ಬಕ್ಕ ಸರ್ಕಲ್ ಬಳಿ ಬುಧವಾರ ರಾತ್ರಿ ನಡೆದಿದೆ.ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಸಂಚಾರಿ ವಿಭಾಗದ ಡಿಸಿಪಿ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್.
ನೆಲಮಂಗಲ ದಿಂದ ದೊಡ್ಡಬಳ್ಳಾಪುರದ ಕಡೆ ಹೋಗೋ ರಸ್ತೆ ಕೂಡ ರಿಪೇರಿ ಹಂತದಲ್ಲಿದೆ. ಒಂದು ವಾರದಿಂದ ನಿರಂತರ ಮಳೆ ಆಗುತ್ತಿದ್ದ ಎಫೆಕ್ಟ್ ನೆಲಮಂಗಲ ದೊಡ್ಡಬಳ್ಳಾಪುರ ರಸ್ತೆ ಗುಂಡಿ ಬಿದ್ದಿದೆ.ನಟ ವಿನೋದ್ ರಾಜ್ ಸ್ವತಃ ಗುಂಡಿ ರಿಪೇರಿ ಕಾರ್ಯಕ್ಕೆ ಇಳಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿರುವ ಲೀಲಾವತಿ ಪುತ್ರಕ್ಕೆ ಕಾರ್ಯಕ್ಕೆ ಸ್ಥಳೀಯರು ಸಲಾಂ ಎಂದಿದ್ದಾರೆ.
Read More »ಆಲಿಕಲ್ಲು ಮಳೆ, ಗುಡುಗು, ಮಿಂಚಿನಿಂದ ವಿಮಾನ ಜಸ್ಟ್ ಮಿಸ್! 200 ಜನ ಪಾರು.
ದೆಹಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ 200 ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ಆಕಾಶದಲ್ಲಿ ಆಲಿಕಲ್ಲು ಮಳೆಯ ಆತಂಕದಿಂದ ದೊಡ್ಡ ಅನಾಹುತದಿಂದ ಪಾರಾಗಿದೆ. ಆಲಿಕಲ್ಲು ಮಳೆಯಿಂದ ವಿಮಾನದ ಮುಂಭಾಗ ಹಾನಿಗೊಳಗಾದರೂ, ಎಲ್ಲಾ 200 ಪ್ರಯಾಣಿಕರು ಸುರಕ್ಷಿತವಾಗಿ ಶ್ರೀನಗರದಲ್ಲಿ ಲ್ಯಾಂಡ್ ಆಗಿದ್ದಾರೆ.ಇಂಡಿಗೋ ವಿಮಾನಯಾನ ಸಂಸ್ಥೆಯು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದೆ. ವಿಮಾನದ ಮುಂಭಾಗದ ಹಾನಿಯನ್ನು ತಾಂತ್ರಿಕ ತಂಡವು ಪರಿಶೀಲಿಸುತ್ತಿದೆ. ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್ನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





