ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’ ಬುಧವಾರ ಆರಂಭಗೊಂಡಿತು. ಪೊನ್ನಂಪೇಟೆ ತಾಲ್ಲೂಕಿನ ಭದ್ರಗೋಳದಲ್ಲಿ ಗುರುವಾರ ನಡೆಯುವ ಹಬ್ಬಕ್ಕೆ ಗಿರಿಜನರು ಬುಧವಾರ ಚಾಲನೆ ನೀಡಿದರು.ಬುಡಕಟ್ಟು ಸಮುದಾಯದ ಯುವಕರು ದೇಹವೆಲ್ಲ ಬಣ್ಣ ಬಳಿದುಕೊಂಡು, ಕೈಗೆ ಸಿಕ್ಕಿದ ಒಡೆದ ಪ್ಲಾಸ್ಟಿಕ್ , ಮುರಿದ ತಗಿಡನ ಡಬ್ಬ, ತುಕ್ಕು ಹಿಡಿದ ಆಂಟೆನಾ ತಟ್ಟೆ, ಬಿದಿರಿನ ಪೈಪ್ ಮೊದಲಾದವುಗಳನ್ನು ವಾದ್ಯ ಪರಿಕರಗಳಾಗಿಸಿಕೊಂಡು ಬಡಿಯುತ್ತಾ ಕುಣಿದು ಕುಪ್ಪಳಿಸಿ ಹಣ ಬೇಡಿದರು.ಗೋಣಿಕೊಪ್ಪಲು ಬಳಿಯ ಭದ್ರಗೋಳದಲ್ಲಿ ನಡೆಯಲಿರುವ ಗಿರಿಜನರ ‘ಕುಂಡೆ ಹಬ್ಬ’ಕ್ಕೆ ಬುಧವಾರ ಗಿರಿಜನ ಯುವಕರು ವೇಷ ಧರಿಸಿ ಕುಣಿಯುವ ಮೂಲಕ ಚಾಲನೆ ನೀಡಿದರು.ಅಹಿಕತರ ಘಟನೆ ಸಂಭವಿಸದಂತೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಹಬ್ಬ ಮುಕ್ತಾಯಗೊಳ್ಳಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

