Breaking News

BigTv News

ಉರುಗ್ವೆ: ಮಾಜಿ ಅಧ್ಯಕ್ಷ ಜೋಸ್ ಮುಜಿಕಾ ನಿಧನ!

ಉರುಗ್ವೆಯ ಮಾಜಿ ಅಧ್ಯಕ್ಷ ಜೋಸ್ ಮುಜಿಕಾ (89) ಅವರು ಕ್ಯಾನ್ಸರ್ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಡಿದ ನಂತರ ಮಂಗಳವಾರ ನಿಧನರಾದರು ಎಂದು ಸಿಎನ್‌ಎನ್ ವರದಿ ಮಾಡಿದೆ.ಲ್ಯಾಟಿನ್ ಅಮೆರಿಕ ಮತ್ತು ಇಡೀ ಜಗತ್ತಿಗೆ ಅವರ ಬುದ್ಧಿವಂತಿಕೆ, ದೂರದೃಷ್ಟಿ ಮತ್ತು ಸರಳತೆಗೆ ಉದಾಹರಣೆಯಾಗಿದ್ದ ನಮ್ಮ ಪ್ರೀತಿಯ ಪೆಪೆ ಮುಜಿಕಾ ಅವರ ನಿಧನಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಅವರ ಕುಟುಂಬ, ಸ್ನೇಹಿತರು ಮತ್ತು ಉರುಗ್ವೆಯ ಜನರಿಗೆ ನಮ್ಮ ದುಃಖ ಮತ್ತು ಸಂತಾಪವನ್ನು …

Read More »

ಬೆಂಗಳೂರು :ವಿದೇಶಿ ಪ್ರಜೆಯನ್ನು ಅಡ್ಡಗಟ್ಟಿ ಸುಲಿಗೆ, ಇಬ್ಬರು ಆರೋಪಿಗಳ ಬಂಧನ!

ಕ್ಯಾಮರೂನ್ ದೇಶದ ಪ್ರಜೆಯನ್ನು ಬೆದರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಾಲಾಜಿ ಲೇಔಟ್‌ನ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋ‍ಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.ಮನೆಯ ಮಾಲೀಕರು ಇಸ್ಕಾನ್‌ ದೇವಸ್ಥಾನದಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗಿ ಮನೆಯ ಮುಂದಿನ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಕೊಠಡಿಯ ಬೀರುವಿನಲ್ಲಿ ಇಡಲಾಗಿದ್ದ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು.ರಿಜ್ವಾನ್ ಪಾಶಾ …

Read More »

ಬೆಂಗಳೂರು: ಕಾರು ಸಮೇತ ಮಹಿಳೆ ಪರಾರಿ; ಚಾಲಕ ಶೌಚಗೃಹಕ್ಕೆ ಹೋಗಿದ್ದ ವೇಳೆ ನಡೆದ ಘಟನೆ!

ಬೆಂಗಳೂರು ಹಾಗೂ ಮೈಸೂರು ಸುತ್ತಾಡಲು ಪರಿಚಯಸ್ಥ ಚಾಲಕರೊಬ್ಬರನ್ನು ಸಂಪರ್ಕಿಸಿ, ಬಾಡಿಗೆಗಾಗಿ ಬುಕ್ ಮಾಡಿದ್ದ ಕಾರು ಸಮೇತ ಪರಾರಿಯಾಗಿರುವ ಮಹಿಳೆ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಚ್​ಎಂಟಿ ಲೇಔಟ್ ನಿವಾಸಿ ಅನಂತಕುಮಾರ್ ಅವರ ದೂರು ಆಧರಿಸಿ ಅಪರಿಚಿತ ಮಹಿಳೆ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ಮಹಿಳೆಯು ಹೊರಗಿನಿಂದ ಶೌಚಗೃಹದ ಬಾಗಿಲಿನ ಚಿಲಕ ಹಾಕಿ ಮೊಬೈಲ್ ಹಾಗೂ ಕಾರಿನ ಕೀ ಸಮೇತ ಪರಾರಿಯಾಗಿದ್ದಾಳೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಕಿಟಕಿ ಮೂಲಕ ಹೊರಗಿದ್ದವರನ್ನು ಕರೆಯಿಸಿಕೊಂಡು ಬಾಗಿಲಿನ …

Read More »

ಮೊರಾದಬದ್ :ಪತ್ನಿ ಕೊಂದು ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿದ್ದ ಪತಿ!!

ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ.ನಂತರ ಕೊಡಲಿಯಿಂದ ತಲೆ ಕಡಿದು ದೇಹವನ್ನು ಮನೆಯಲ್ಲಿಯೇ ಹೂತುಹಾಕಿದ್ದ.ಕುಟುಂಬದ ದೂರಿನ ಮೇರೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡ ನಂತರ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ವಸ್ತುಗಳು, ಮಹಿಳೆಯ ತಲೆಯನ್ನು ನದಿಯಿಂದ ಮತ್ತು ಮನೆಯಲ್ಲಿ ಹೂತಿಟ್ಟಿದ್ದ …

Read More »

ಮೊಳಕಾಲ್ಮುರು:ಲವ್ ಬ್ರೇಕ್ ಅಪ್, ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!!

ನಾಗಸಮುದ್ರ ಗ್ರಾಮದ ಯುವತಿಯೊಬ್ಬರು ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಂಪುರ ಗ್ರಾಮದ ಭಾರ್ಗವ ರೆಡ್ಡಿ ಪರಿಚಯವಾಗಿತ್ತು. ನಂತರ ಇಬ್ಬರೂ ಪ್ರೀತಿಸುತ್ತಿದ್ದರು. ಬಳಿಕ ಭಾರ್ಗವರೆಡ್ಡಿ, ‘ನಿಮ್ಮದು ನಮ್ಮದು ಬೇರೆ ಬೇರೆ ಜಾತಿ. ಮದುವೆಯಾದಲ್ಲಿ ಸಮಸ್ಯೆಯಾಗುತ್ತದೆ’ ಎಂದು ನಿರಾಕರಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.ಭಾರ್ಗವರೆಡ್ಡಿ ಮತ್ತು ಪಾಲಕರ ವಿರುದ್ಧ ಕ್ರಮ ಕೊಳ್ಳಬೇಕು ಎಂದು ಆಗ್ರಹಿಸಿ ಅಂಜಲಿ ಸಂಬಂಧಿಕರು ಕೆಲಕಾಲ ರಾಂಪುರ ಆಸ್ಪತ್ರೆ …

Read More »

ದೆಹಲಿ : ಲವರ್ ಜೊತೆ ಸೇರಿ ಪತಿಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿದ ಪತ್ನಿ.!

ಮಹಿಳೆಯೊಬ್ಬರು ತನ್ನ ಪ್ರಿಯಕರ ಮತ್ತು ಇತರ ಇಬ್ಬರ ಸಹಾಯದಿಂದ ತನ್ನ ಮಾಜಿ ಸೇನಾ ಸೈನಿಕ ಪತಿಯನ್ನು ಆರು ತುಂಡುಗಳಾಗಿ ಕತ್ತರಿಸಿ ಹತ್ಯೆ ಮಾಡಿದ್ದಾಳೆ.ನಂತರ, ಕೈಗಳು ಮತ್ತು ಕಾಲುಗಳನ್ನು ಘಟನಾ ಸ್ಥಳದಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿರುವ ಖಾರಿದ್ ಗ್ರಾಮದ ತೋಟದಲ್ಲಿ ಎಸೆಯಲಾಯಿತು.ಮೇ 9 ರ ರಾತ್ರಿ ಕೊಲೆ ಮಾಡಿದ ನಂತರ, ಪತ್ನಿ ಮೇ 10 ರಂದು ತನ್ನ ಪತಿಯ ನಾಪತ್ತೆ ದೂರು ದಾಖಲಿಸಿದ್ದರು.ಸೋಮವಾರ ತಡರಾತ್ರಿ ಪೊಲೀಸರು ಆರೋಪಿ ಪ್ರೇಮಿಯನ್ನು ಎನ್‌ಕೌಂಟರ್‌ನಲ್ಲಿ …

Read More »

ಬೆಂಗಳೂರು: ಬಸ್‌ ಪಲ್ಟಿ, 9 ಮಂದಿಗೆ ಗಾಯ!!

ಕಾರ್ಮಿಕರನ್ನು ಊಟಕ್ಕೆ ಕರೆದೊಯ್ಯುತ್ತಿದ್ದ ಬಸ್‌ ಬೇಗೂರು ಜಂಕ್ಷನ್‌ ಬಳಿ ಪಲ್ಟಿಯಾಗಿ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.ಒಬ್ಬರ ಸ್ಥಿತಿ ಗಂಭೀರವಾಗಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ರಸ್ತೆ ವಿಭಜಕಕ್ಕೆ ಬಸ್‌ ಡಿಕ್ಕಿಯಾಗಿ ಪಲ್ಟಿಯಾಗಿದೆ. ಕ್ರೇನ್‌ ತರಿಸಿ ಬಸ್‌ ಅನ್ನು ಮೇಲಕ್ಕೆ ಎತ್ತಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಗದಗ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ!

ಗದಗ ಜಿಲ್ಲೆಯಲ್ಲೂ ಸಹ ಮಳೆ ಆರ್ಭಟ ಜೋರಾಗಿದ್ದು, ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ವ್ಯಕ್ತಿಯೋರ್ವ ಕೊಚ್ಚಿ ಹೋಗಿದ್ದಾರೆ. ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 39 ವರ್ಷದ ಶರಣಪ್ಪ ಹಡಗಲಿ ಎಂಬುವವರು ಬೈಕ್‌ನಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ನೀರು ಪಾಲಾಗಿದ್ದಾರೆ.ಬೆನಕೊಪ್ಪ ಗ್ರಾಮದಲ್ಲೇ ಇದ್ದ ತನ್ನ ಪತ್ನಿಯ ಮನೆಗೆ ತೆರಳುತ್ತಿದ್ದ ಶರಣಪ್ಪ ಹಡಗಲಿ ನೀರಿನಿಲ್ಲಿ ಕೊಚ್ಚಿ ಹೋದ ಬಳಿಕ ಸ್ಥಳಕ್ಕಾಗಮಿಸಿದ ಶೋಧ ಆರಂಭಿಸಿದ್ದರು. ಗದಗ ಗ್ರಾಮಾಂತರ ಠಾಣೆಯಲ್ಲಿ …

Read More »

ಬೆಳಗಾವಿ:ಮಳೆ ಅಬ್ಬರಕ್ಕೆ ಚರಂಡಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ!!

ಅಂಬೇಡ್ಕರ್‌ ನಗರದ ನಿವಾಸಿ ಕಾಟೆಪ್ಪ ದುರಗಪ್ಪ ಶಿರಹಟ್ಟಿ (52) ಅವರು ಮಂಗಳವಾರ ಸಂಜೆ ಚರಂಡಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.ಧಾರಾಕಾರ ಮಳೆಯಿಂದಾಗಿ ಬೃಹತ್ ಚರಂಡಿಯಲ್ಲಿ ನೀರು ಹರಿಯುತ್ತಿತ್ತು. ಕಾಟೆ‍ಪ್ಪ ಅವರು ಚರಂಡಿ ಮೇಲೆ ನಡೆದುಕೊಂಡು ಹೊರಟಾಗ ಆಯತಪ್ಪಿ ಬಿದ್ದರು.ಹತ್ತಿರದಲ್ಲಿದ್ದವರು ಅವರನ್ನು ಕಾಪಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಕಾಟೆ‍ಪ್ಪ ದೂರ ತೇಲಿಕೊಂಡು ಹೋದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರು. ಮಳೆಯ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, …

Read More »

ಹಾನಗಲ್ : ಸಿಡಿಲು ಬಡಿದು ಮಹಿಳೆ ಸಾವು!!

ಕೊಂಡೋಜಿ ಗ್ರಾಮದ ಮಾವಿನ ತೋಟದಲ್ಲಿ ಕೆಲಸಕ್ಕಿದ್ದ ಗದಗ ಜಿಲ್ಲೆಯ ಬಸಾಪುರ ಗ್ರಾಮದ ಮರಿಯವ್ವ ನಾಯ್ಕರ (60) ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮವಾರ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಗಾಳಿ, ಗುಡುಗು ಸಮೇತ ಬಿರುಸಿನ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನ ಹಾನಗಲ್ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಒಂದು ತಾಸು ಸುರಿದ ಮಳೆಗೆ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದವು.

Read More »