ಕೊಂಡೋಜಿ ಗ್ರಾಮದ ಮಾವಿನ ತೋಟದಲ್ಲಿ ಕೆಲಸಕ್ಕಿದ್ದ ಗದಗ ಜಿಲ್ಲೆಯ ಬಸಾಪುರ ಗ್ರಾಮದ ಮರಿಯವ್ವ ನಾಯ್ಕರ (60) ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮವಾರ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಗಾಳಿ, ಗುಡುಗು ಸಮೇತ ಬಿರುಸಿನ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನ ಹಾನಗಲ್ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಒಂದು ತಾಸು ಸುರಿದ ಮಳೆಗೆ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದವು.
bigtvnews | Hubli Dharwad News | Kannada News | Karnataka News Hubli News | News In Hubli | Local news

