Breaking News

BigTv News

ಕಂಬಕ್ಕೆ ಬೈಕ್ ಡಿಕ್ಕಿ : ಹಸುನಿಗಿದ ಇಬ್ಬರ ಸಹೋದರರು

ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಂಗಳೂರಿನ ಅಣೆ ಪಾಳ್ಯ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆ ಇಂದು ಬೆಳಿಗ್ಗೆ 5 ಗಂಟೆ ಜಾವಾ ನಡೆದಿದೆ. ಅತಿ ವೇಗವಾಗಿ ಓಡಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಸಹೋದರರನ್ನು ನೀಲಸಂಧಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಹೆಲ್ಮೆಟ್ ಹಾಕದ ಕಾರಣ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಪೋಲಿಸರ ಆಗಮಿಸಿ ಪರಿಶೀಲನೆ …

Read More »

ಚಾಕುವಿನಿಂದ ಬರೆ ಹಾಕಿ ಗುದದ್ವಾರಕ್ಕೆ ಖಾರದಪುಡಿ ಹಾಕಿ ಕ್ರೌರ್ಯ.!

ಕನಕಪುರ ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಜ್ಯೋತಿ ಬಾಯಿ ಮತ್ತು ರಮೇಶ್ ದಂಪತಿಯ ಪುತ್ರ ದೀಕ್ಷಿತ್ ಎಂಬ ಮಗುವಿನ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಗುದದ್ವಾರಕ್ಕೆ ಖಾರದಪುಡಿ ಹಾಕಿದ್ದಾಳೆ.ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Read More »

ಕೇರಳ:ಹಸುವನ್ನು ರಕ್ಷಿಸಲು ಬಾವಿಗೆ ಇಳಿದ ವ್ಯಕ್ತಿ ಉಸಿರುಗಟ್ಟಿ ಸಾವು.

ಕಾರ್ಕೊಡ್ಲುವಿನಲ್ಲಿ ರಾಘು ಎಂಬುವವರು ಇತ್ತೀಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು.ಬಾವಿಗೆ ಬಿದ್ದಿದ್ದ ಹಸುವನ್ನು ಮೇಲೆತ್ತಲು ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕೋಣಂದೂರು ಸಮೀಪದ ಕಾರಕೊಡ್ಲು ಎಂಬಲ್ಲಿ ಸಂಭವಿಸಿದೆ. ಸತೀಶ್ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ದಳದವರು ಬುಧವಾರ ಬಾವಿಯಿಂದ ಮೇಲಕ್ಕೆ ತೆಗೆದಿದ್ದಾರೆ. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸತೀಶ್ ಅವರ ಮೃತದೇಹವನ್ನು ಕೇರಳಕ್ಕೆ ಕಳುಹಿಸಿಕೊಡಲಾಗಿದೆ. ಈ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೃಷಿಗೆ ತುಂಗಾಭದ್ರಾ ಡ್ಯಾಂ ನೀರು,ಕೃಷಿ ಚಟುವಟಿಕೆಗೆ ತುರ್ತು ಸಭೆ.

ತುಂಗಾಭದ್ರಾ ಜಲಾಶಯದಿಂದ ಕೃಷಿ ಚಟುವಟಿಕೆಗೆ ನೀರನ್ನು ಒದಗಿಸುವ ಕುರಿತು ಚರ್ಚಿಸಿ, ನಿರ್ಣಯಿಸಲು ತುಂಗಾಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯನ್ನು ಮಾರ್ಚ್ 21ರಂದು ಕರೆಯಲಾಗಿದೆ. ರೈತರು ಬೇಸಿಗೆ ಹಂಗಾಮಿನಲ್ಲೂ ಡ್ಯಾಂನಿಂದ ನೀರು ಪೂರೈಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

Read More »

ದೇವಸ್ಥಾನದ ಮೇಲೆ ಕಲ್ಲು ತೂರಾಟ,ಕಂಬಕ್ಕೆ ಕಟ್ಟಿ ತಳಿಸಿದ್ದಾರೆ.

ಬೆಳಗಾವಿ ನಗರದ ಪಾಂಗುಳಗಲ್ಲಿ ಅಶ್ವಥಾಮ ದೇವಸ್ಥಾನದ ಮೇಲೆ ಯುವಕ ಕಲ್ಲು ತೂರಾಟ ನಡೆಸಿದ್ದಾನೆ. ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಸ್ಥಳೀಯರು ಯುವಕನನ್ನು ಹಿಇಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.ದೇವಸ್ಥಾನದ ಮೇಲೆ ಕಲ್ಲೆಸೆದ ವ್ಯಕ್ತಿಯನ್ನು ಉಜ್ವಲ್ ನಗರದ ಯಾಸಿರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸ್ಥಳಿಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

Read More »

ಭದ್ರಾ ನದಿಯಲ್ಲಿ ಬಾಲಕನ ಶವ ಪತ್ತೆ.

ಬಾಲಕ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನವನು. ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ. ಪರೀಕ್ಷೆಗೆ 2 ದಿನ ಇರುವಂತೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.. ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂಡಿಗೆರೆ ಎಸ್‌ಐ ರಾಜಶೇಖರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಶ್ರೇಯಸ್‌ ಕಳೆದ ಮಾ.16ರಂದು ಕಾಣೆಯಾಗಿದ್ದನು. ಮಾ.19ರಂದು ಭದ್ರಾ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.

Read More »

ತುಮಕೂರು :ರಸ್ತೆ ದಾಟುತ್ತಿದ್ದ ಮಹಿಳೆ,ಸ್ಥಳದಲ್ಲೇ ಸಾವು.!

ತುಮಕೂರಿನ ಬಸ್ ಸ್ಟಾಂಡ್‌ನಿಂದ ಕಡೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಗರದ ಟೌನ್‌ಹಾಲ್ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಮಂಜಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಅತ್ತೆ ಮೇಲೆ ಮಾರಣಾಂತಕ ಹಲ್ಲೆ:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ.

ಮಾವಿನಕಟ್ಟಿ ಗ್ರಾಮದಲ್ಲಿ ಪತಿ ತನ್ನ ತಾಯಿ ಮನೆಗೆ ಊಟಕ್ಕೆ ಹೋಗಿದ್ದಕ್ಕೆ ಪತ್ನಿ ಶಿಲ್ಪಾ ಆಕ್ರೋಶ ವ್ಯಕ್ತಪಡಿಸಿ ಅತ್ತೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಅತ್ತೆ ಸೊಸೆ ಮಧ್ಯೆ ಕಳೆದ ಹಲವು ವರ್ಷಗಳಿಂದ ಜಗಳ ನಡೆಯುತ್ತಿದ್ದು, ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಾರೆ.ಶಿಲ್ಪಾ ವಿರುದ್ಧ ಮಹಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಶಿಲ್ಪಾ ಮಾತ್ರ ತಾನು ಹಲ್ಲೆ ಮಾಡಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.ಸಧ್ಯ ಜಾನವ್ವ ಬೀಮ್ಸ್ ಆಸ್ಪತ್ರೆಯಲ್ಲಿ …

Read More »

ಮಹಾರಾಷ್ಟ್ರ :ಜೈಲು ಕಂಬಿನಲ್ಲಿ ನುಸುಳಿ ಪರಾರಿಯಾದ ಅಪರಾಧಿ.

ಠಾಣೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಆರೋಪಿ ಜೈಲು ಕಂಬಿಯ ನಡುವೆಯೇ ನುಸುಳಿ ಪರಾರಿಯಾಗಿದ್ದಾನೆ. ಆರೋಪಿಯು ಇದಕ್ಕೂ ಮೊದಲು ಹಲವಾರು ಬಾರಿ ಇದೆ ರೀತಿ ಪರಾರಿಯಾಗಿದ್ದ ಎನ್ನಲಾಗಿದೆ.ಆರೋಪಿ ತಪ್ಪಿಸಿಕೊಂಡು ಹೋಗುತ್ತಿದ್ದಂತೆ ಪೊಲೀಸರು ಮತ್ತೆ ಆತನನ್ನು ಬಂಧಿಸಿ ಬಂಧೀಖಾನೆ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಬೀಗ, ಸರಳು ಯಾವುದಕ್ಕೂ ಹಾನಿ ಮಾಡದೆ ಆಚೆ ಬಂಡಿರೋದನ್ನು ನೋಡಿ ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.

Read More »

ನಿಯಮ ಉಲ್ಲಂಘಿಸಿದ್ದಕ್ಕಾಗಿಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ಜಂಬಲದಿನ್ನಿ ಗ್ರಾಮದ ವೀರೇಶ ಶಾಂತಗೌಡ ಬಿರಾದಾರ ಟ್ಯಾಂಕರ್ ಚಾಲಕ ಶಿಕ್ಷೆಗೆ ಒಳಗಾದ ವ್ಯಕ್ತಿ. ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಟಂಟಂ ಚಾಲಕ ಮಲ್ಲಪ್ಪ ಮಲ್ಲಪ್ಪ ನಾಯ್ಕೋಡಿ ಅವರಿಗೆ ದಂಡ ವಿಧಿಸಲಾಗಿದೆ. ಟ್ರ್ಯಾಕ್ಟರ್‌-ಟಂಟಂ ಡಿಕ್ಕಿಯಾಗಿ ಆರು ಜನರ ಸಾವಿಗೆ ಕಾರಣವಾದ ಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು ಶಿಕ್ಷೆ, ₹3500 ದಂಡ, ವಿಧಿಸಲಾಗಿದೆ.

Read More »