BigTv News
July 17, 2022
Uncategorized
ಧಾರವಾಡ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡದ ಸಿಬಿಟಿ ಬಳಿ ಮರವೊಂದು ನೆಲಕ್ಕುರುಳಿತ್ತು . ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ರಸ್ತೆ ದಾಟುತ್ತಿದ್ದ ಕೆಲವರ ಮೇಲೆ ಈ ಮರ ಬಿದ್ದಿದ್ದು , ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ . ನಂತರ ಪಾಲಿಕೆ ಸಿಬ್ಬಂದಿ ಆ ಮರವನ್ನು ತೆರವುಗೊಳಿಸಿದ್ದಾರೆ .
Read More »
BigTv News
July 17, 2022
Uncategorized
ಬೆಂಗಳೂರು: ದೇಶದಲ್ಲಿ ತನಿಖಾ ಸಂಸ್ಥೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಸಂಸತ್ ಅಧಿವೇಶನವಿದ್ದರೂ ಜು.21 ರಂದು ಇಡಿ ತನಿಖೆಗೆ ಕರೆದಿದ್ದಾರೆ. ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು 50 ಗಂಟೆ ತನಿಖೆ ಮಾಡಿದ್ದರು, ಯಾವುದೇ ಸಾಕ್ಷಿಯನ್ನು ಅಧಿಕಾರಿಗಳು ಕೊಟ್ಟಿಲ್ಲ. ಕೇಳಿದ್ದ ಪ್ರಶ್ನೆಯನ್ನೇ ಕೇಳಿ ಕಿರುಕುಳ ಕೊಟಿದ್ದಾರೆ. ಸೋನಿಯಾ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ನಮ್ಮ ನಾಯಕಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಹಾಗಾಗಿ …
Read More »
BigTv News
July 17, 2022
Uncategorized
ಬೆಂಗಳೂರು: ನ್ಯಾಯಾಲದಲ್ಲಿ ಆರೋಪಿಗಳಿಗೆ ಜಾಮೀನು ನೀಡುವಾಗ ನಕಲಿ ದಾಖಲೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ರಂಗನಾಥ್ ಹಾಗೂ ಮಂಜುನಾಥ್ ಎಂಬ ಆರೋಪಿಗಳಿಬ್ಬರು ನ್ಯಾಯಾಲಯದಲ್ಲಿ ಜಾಮೀನು ಪಡದಿದ್ದಾರೆ. ವಂಚಕರು ತಮ್ಮ ಹೆಸರಿನಲ್ಲಿ ಆರ್.ಟಿ.ಸಿ ಫಾರ್ಮ್, ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ಜಾಮೀನು ಪಡೆದಿದ್ದಾರೆಂದು ಆರೋಪಿಸಿ ಮಂಜುಳಾ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಅದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ರವಿಕುಮಾರ್ ಎಂಬುವವರು …
Read More »
BigTv News
July 17, 2022
Uncategorized
ಬೆಂಗಳೂರು: ಎಲ್ಲ ಸಂಬಂಧಗಳು ಹುಟ್ಟಿದ ನಂತರ. ತಾಯಿ ಸಂಬಂಧ ಮಾತ್ರ ಭೂಮಿಗೆ ಬರುವ ಮುನ್ನಾ ಇರುತ್ತೆ. ತಂದೆ, ತಮ್ಮ, ಅಣ್ಣ ಎಲ್ಲವೂ ನಂತರ ಸಂಬಂಧಗಳು.ತಾಯಿ ಸ್ಥಾನ ಬಹಳ ದೊಡ್ಡದು. ದೇವರು, ತಾಯಿ ಮಧ್ಯ ಯಾರನ್ನ ಆಯ್ಕೆ ಮಾಡ್ತಾರೆ ಅಂದ್ರೆ, ನಾನು ತಾಯಿಯನ್ನ ಆಯ್ಕೆ ಮಾಡ್ತೀನಿ. ಷರತ್ತು ಇಲ್ಲದೆ ಪ್ರೀತಿ ನೀಡುವಳು ತಾಯಿ ಮಾತ್ರ ಎಂದು ಸಿಎಂ ಬೊಮ್ಮಾಯಿ ತಾಯಿ ಮೇಲಿನ ಪ್ರೀತ ಬಗ್ಗೆ ಹಾಡಿ ಹೊಗಳಿದ್ದಾರೆ. ರಾಜ್ಯ ಸರ್ಕಾರ, ನಮ್ಮೆಲ್ಲರ …
Read More »
BigTv News
July 17, 2022
Uncategorized
ಬೆಂಗಳೂರು: ನಾನು ಪಕ್ಷದ ಶಿಸ್ತಿನ ಸಿಪಾಯಿ. ಸೋನಿಯಾ ಗಾಂಧಿ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನಗೂ ಇತಿ-ಮಿತಿಗಳಿವೆ. ಸಿದ್ದರಾಮೋತ್ಸವದ ಬಗ್ಗೆ ನನ್ನ ಕೇಳಬೇಡಿ. ಯಾರಿಗೆ ಕೇಳಬೇಕೋ ಅವರನ್ನ ಕೇಳಿ ಎಂದು ಡಿ.ಕೆ.ಶಿವಕುಮಾರ್ ಖಡಕ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಸಿದ್ದರಾಮೋತ್ಸವಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಗ್ಗೆ ನನ್ನ ಕೇಳಬೇಡಿ. ಯಾರನ್ನ ಕೇಳಬೇಕೋ ಅವರನ್ನ ಕೇಳಿ ಎಂದು ಡಿಕೆಶಿ ಹೇಳಿ ದ್ದಾರೆ
Read More »
BigTv News
July 17, 2022
Uncategorized
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.ಚೀನಾದ ವಾಂಗ್ ಝಿ ಯಿ (Wang Zhi Yi) ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿದ್ದರು. ಆರಂಭದಿಂದಲೇ …
Read More »
BigTv News
July 17, 2022
Uncategorized
ನವದೆಹಲಿ: ದೆಹಲಿಯ ಮಾಜಿ ಕ್ರಿಕೆಟಿಗ ಮತ್ತು ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೋಸಗಾರ ಎಂದು ಕರೆದಿದ್ದಾರೆ. ತನ್ನನ್ನು ತಾನು ಸಾಮಾನ್ಯ ಎಂದು ಬಣ್ಣಿಸಿಕೊಳ್ಳುವ ಕೇಜ್ರಿವಾಲ್ ದೆಹಲಿಯ 11 ಲಕ್ಷ ಮನೆಗಳಿಗೆ ಮೋಸ ಮಾಡಿ ಉಚಿತ ವಿದ್ಯುತ್ ಮಾರುತ್ತಿದ್ದಾರೆ ಎಂಬ ಸುಳ್ಳನ್ನು ಮಾರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. …
Read More »
BigTv News
July 17, 2022
Uncategorized
ಹುಬ್ಬಳ್ಳಿ: ಗೊಂದಳಿ ಸಮಾಜವನ್ನು ಎಸ್.ಸಿ, ಎಸ್.ಟಿ ಗೆ ಸೇರಿಸುವ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲಿನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಗೊಂದಳಿ ಸಮಾಜದ ರಾಜ್ಯ ಅಧ್ಯಕ್ಷರಾದ ವಿಠ್ಠಲ ಬಿ. ಗಣಚಾರಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಗೊಂದಳಿ ಸಮಾಜವು ಪ್ರವರ್ಗ ಒಂದರಲ್ಲಿ ಇದ್ದು, ಸರ್ಕಾರದ ಯೋಜನೆಗಳಿಂದ ನಮ್ಮ ಸಮಾಜಕ್ಕೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ ಎಂದ ಅವರು, ಅಲೆಮಾರಿ ಸಮಾಜದವರಾದ …
Read More »
BigTv News
July 17, 2022
Uncategorized
ಬೆಂಗಳೂರು : ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ 2022 ಜುಲೈ 17 ರ ಇಂದು ದೇಶಾದ್ಯಂತ 497 ನಗರಗಳಲ್ಲಿ ನಡೆಯಲಿದೆ. ದೇಶಾದ್ಯಂತ ಸುಮಾರು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, ಅವರಲ್ಲಿ 10 ಲಕ್ಷ ಅಭ್ಯರ್ಥಿಗಳು ಮಹಿಳೆಯರಿದ್ದಾರೆ. ಪರೀಕ್ಷೆಯ ಸಮಯದಲ್ಲಿ, ಅಭ್ಯರ್ಥಿಗಳು ಯಾವುದೇ ಲೋಹದ ಆಭರಣಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಕೊಂಡೊಯ್ಯಲು ಸಹ ನಿರ್ಬಂಧಗಳಿವೆ.
Read More »
BigTv News
July 17, 2022
Uncategorized
ಬೆಂಗಳೂರು: ಕೇಂದ್ರವು 2030 ರ ವೇಳೆಗೆ ಮಲೇರಿಯಾ ವನ್ನು ನಿರ್ಮೂಲನೆ ಮಾಡುವ ಗುರಿಯನ್ನು ನೀಡಿದೆ. ಆದರೆ, ರಾಜ್ಯವನ್ನು 2025 ರ ಹೊತ್ತಿಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಅದನ್ನು ಸವಾಲಾಗಿ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಮಲೇರಿಯಾ ಮತ್ತು ಇತರ ವಾಹಕಗಳಿಂದ ಹರಡುವ ರೋಗಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಮಲೇರಿಯಾ ಪ್ರಕರಣಗಳು ಹೆಚ್ಚಿರುವ …
Read More »