ಹುಬ್ಬಳ್ಳಿ: ಗೊಂದಳಿ ಸಮಾಜವನ್ನು ಎಸ್.ಸಿ, ಎಸ್.ಟಿ ಗೆ ಸೇರಿಸುವ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲಿನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಗೊಂದಳಿ ಸಮಾಜದ ರಾಜ್ಯ ಅಧ್ಯಕ್ಷರಾದ ವಿಠ್ಠಲ ಬಿ. ಗಣಚಾರಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಗೊಂದಳಿ ಸಮಾಜವು ಪ್ರವರ್ಗ ಒಂದರಲ್ಲಿ ಇದ್ದು, ಸರ್ಕಾರದ ಯೋಜನೆಗಳಿಂದ ನಮ್ಮ ಸಮಾಜಕ್ಕೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ ಎಂದ ಅವರು, ಅಲೆಮಾರಿ ಸಮಾಜದವರಾದ ನಾವು ಗೊಂದಳ ಹಾಕಿ ಬಿಕ್ಷೆ ಬೇಡುವಂತಹ ಸಮಾಜ ನಮ್ಮದು ಎಂದ ಅವರು ಶೈಕ್ಷಣಿಕ, ಸಮಾಜಿಕ ಅಥವಾ ಯಾವುದೇ ಕ್ಷೇತ್ರದಲ್ಲಿಯೂ ನಾವು ಗುರುತಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಳುವರೇ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ನಮ್ಮ ಸಮಾಜ ಹೊಂದಿದ್ದು, ನಮ್ಮ ಸಮಾಜದ ಜನ ಗುರುತಿಸಿಕೊಳ್ಳಲಿಕೆ ಆಧಾರ ಕಾರ್ಡ್, ರೇಷನ್ ಕಾರ್ಡ್ ಇಲ್ಲಾ ನಮ್ಮ ಜಾತಿಯ ಹೆಸರೇ ಇಲ್ಲ ಎಂದು ಸಂಬಂಧಿಸಿದ ಅಧಿಕಾರಗಳ ವಿರುದ್ಧ ದೂರಿದರು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಅಂದು ನಡೆಯುವ ಪ್ರತಿಭಟನೆಯಲ್ಲಿ ವೇಷ ಭೂಷಣ ಹಾಕಿ ಸರ್ಕಾರದ ಗಮನ ಸೆಳೆಯುವ ಮೂಲಕ ಬೆಂಗಳೂರು ಚಲೋ ಹಮ್ಮಿಕೊಂಡು ಬೇಡಿಕೆಗಳನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಆನಂದ ಸಿಂಗನಾಥ, ಎಂ.ಬಿ.ಶಾಸ್ತ್ರಿ, ನಾಗಭೂಷಣ, ಉಮೇಶ, ಮಂಜು ಪಾಟೀಲ್, ಸುರೇಶ, ರಾಘವೇಂದ್ರ ಜೋಶಿ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





