Breaking News

Uncategorized

ಗ್ರೂಪ್ ಎ, ಗ್ರೂಪ್ ಸಿ ಹಾಗೂ 384 ವೃಂದ ನೇಮಕಾತಿಯ ಮರು ಪರೀಕ್ಷೆಗೆ ಇದ್ದ ತಡೆಯಾಜ್ಞೆ

ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಗ್ರೂಪ್ ಎ, ಗ್ರೂಪ್ ಸಿ ಹಾಗೂ 384 ವೃಂದ ನೇಮಕಾತಿಯ ಮರು ಪರೀಕ್ಷೆಗೆ ಇದ್ದ ತಡೆಯಾಜ್ಞೆಯನ್ನು ಧಾರವಾಡ ಹೈಕೋರ್ಟ್ ತೆರವುಗೊಳಿಸಿದೆ. ಆ ಮೂಲಕ ಕೆಪಿಎಸ್‌ಸಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೆಪಿಎಸ್‌ಸಿಯು ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಇಂಗ್ಲೀಷ್‌ನಿಂದ ಕನ್ನಡಕ್ಕೆ ಆಗಬೇಕಿದ್ದ ಭಾಷಾಂತರದಲ್ಲಿ ಯಡವಟ್ಟು ಆಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಕೆಲ ಅಭ್ಯರ್ಥಿಗಳು …

Read More »

ಎಮ್.ಆರ್.ಪಾಟೀಲ ಅವರಿಗೆ ಮಾದಿಗ ಮತ್ತು ಉಪಜಾತಿಗಳ ಸಂಘಟನೆ ಒಕ್ಕೂಟ ಮನವಿ

ಕುಂದಗೋಳ : ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಒಳ ಮೀಸಲಾತಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರು, ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜಕ್ಕೆ ಒಳ ಮೀಸಲಾತಿ ನೀಡದೆ ಕಾಲಹರಣ ಮಾಡುತ್ತಿದ್ದು ಅಧಿವೇಶನದಲ್ಲಿ ಈ ವಿಷಯ ಪ್ರಸ್ಥಾಪಿಸುವಂತೆ ಶಾಸಕ ಎಮ್.ಆರ್.ಪಾಟೀಲ ಅವರಿಗೆ ಮಾದಿಗ ಮತ್ತು ಉಪಜಾತಿಗಳ ಸಂಘಟನೆ ಒಕ್ಕೂಟ ಶನಿವಾರ ಮನವಿ ಮಾಡಿದರು. ಶಾಸಕರ ನಿವಾಸದ ಎದುರು ತಮಟೆ ಬಾರಿಸಿ ಮನವಿ ಪತ್ರ ನೀಡಿ ಆಗ್ರಹಿಸಿ, ಹರಿಯಾಣ ಸರ್ಕಾರ ಈಗಾಗಲೇ …

Read More »

ಸಿಎಂ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡ್ತಾರೆ : ಅರವಿಂದ್ ಬೆಲ್ಲದ

ಹುಬ್ಬಳ್ಳಿ: ಸಿಎಂ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೆಂದರೆ ಪ್ರೀತಿ. ಎಲ್ಲರ ಮೀಸಲಾತಿ ತೆಗೆದು ಅವರಿಗೆ ಕೊಡಲು ಹೊರಟಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನ್ನು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಕ್ಕೆ ವಿರೋಧವಿದೆ. ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದಲ್ಲಿಗೆ ಇವರು ಮುತ್ತು ಕೊಡ್ತಾರೆ. ಡಿಜೆ ಹಳ್ಳಿ, …

Read More »

ಕಾಂಗ್ರೆಸ್‌ನವರು ಸಂವಿಧಾನದ ಸುಖಾಸುಮ್ಮನೆ ಮಾತನಾಡುತ್ತಾರೆ:ಅರವಿಂದ್ ಬೆಲ್ಲದ ಆರೋಪ

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೈಯಲ್ಲಿ ಬೈಬಲ್ ಹಿಡ್ಕೊಂಡು ಅಂಬೇಡ್ಕರ್‌ರವರ ಸಂವಿಧಾನದ ಬಗ್ಗೆ ಮಾತಾಡ್ತಾರೆ, ಕಾಂಗ್ರೆಸ್‌ನವರು ಸಂವಿಧಾನದ ಸುಖಾಸುಮ್ಮನೆ ಮಾತನಾಡುತ್ತಾರೆ. ಆದ್ರೆ ಮುಖ್ಯವಾಘಿ ಇವರ ಕೈಯಲ್ಲಿರೋದು ಬೈಬಲ್ ಎಂದು ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ ಆರೋಪ ಮಾಡಿದ್ದಾರೆ.

Read More »

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬಿಜೆಪಿಯವರಿಗೆ ಆಸಕ್ತಿ ಇಲ್ಲಾ : ಡಿಕೆಶಿ

ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸಿದ್ಧರಿದ್ದೇವೆ. ಆದ್ರೆ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ನೀರಾವರಿ ಸೇರಿದಂತೆ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಆದ್ರೆ ಬಿಜೆಪಿಯವರಿಗೆ ರಾಜಕಾರಣವೇ ಮುಖ್ಯ. ಅವರಲ್ಲಿ ಯಾವುದೇ ಒಗ್ಗಟ್ಟಿಲ್ಲ ಉತ್ತರ ಕರ್ನಾಟಕಭಾಗದ ಚರ್ಚೆ ಮಾಡಲು ಅವರೇ ಸಿದ್ಧರಿಲ್ಲ ಎಂದು ಹುಬ್ಬಳ್ಳಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಹೇಳಿದ್ದಾರೆ.

Read More »

ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ

ಹುಬ್ಬಳ್ಳಿ: ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ, ಹುಣ್ಣಿಮೆಯ ಅಂಗವಾಗಿ, ಇಂದಿನಿಂದ ಬರುವ ಅಮವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದ್ದಾರೆ. ಕಳೆದ ಶೀಗಿ ಹುಣ್ಣಿಮೆ, ದೀಪಾವಳಿ ಅಮವಾಸ್ಯೆ ಹಾಗೂ ನಂತರದ ಹುಣ್ಣಿಮೆಗಳ ಸಮಯದಲ್ಲಿ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ, ವಿಶೇಷ ನೇರ ಬಸ್‌ ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ …

Read More »

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ₹15000 ಕೋಟಿ ಬಂಡವಾಳ ಹೂಡಿಕೆ: ಕೇಂದ್ರ ಸಚಿವ ಕುಮಾರಸ್ವಾಮಿ

ಭದ್ರಾವತಿ: ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್)ಗೆ ₹ 15,000 ಕೋಟಿ ಬಂಡವಾಳ ತೊಡಗಿಸುವ ಸಂಬಂಧ ಯೋಜನಾ ವರದಿ ತಯಾರಿಸಲು ಕೋಲ್ಕತ್ತದ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದ್ದು, ಶೀಘ್ರ ಕಾರ್ಖಾನೆಗೆ ಭೇಟಿ ನೀಡಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಮುಖಂಡ ಮಂಗೋಟೆ ರುದ್ರೇಶ್ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ನೇತೃತ್ವದ ಕಾರ್ಮಿಕರ ನಿಯೋಗ ಈಚೆಗೆ ನವದೆಹಲಿಯಲ್ಲಿ …

Read More »

ಒಬಿಸಿಗಳಿಗೆ ಕಾಂಗ್ರೆಸ್ ಸರ್ಕಾರವನ್ನು ತೆಗೆದುಹಾಕಿದ ನಂತರವೇ ಮೀಸಲಾತಿ ಸಿಕ್ಕಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವೋಟ್ ಬ್ಯಾಂಕ್ ರಾಜಕೀಯದ ಗೀಳು ಹೊಂದಿರುವವರು ಮೀಸಲಾತಿಯೊಂದಿಗೆ ಆಟವಾಡಿದರು, ಅಂತಿಮವಾಗಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಅನಾನುಕೂಲತೆಯನ್ನುಂಟು ಮಾಡಿದರು. ಡಾ. ಅಂಬೇಡ್ಕರ್ ಅವರು ಮೀಸಲಾತಿಯನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಆರಂಭದಲ್ಲಿ ಅದನ್ನು ವಿರೋಧಿಸಿತು ಮತ್ತು ಮಂಡಲ್ ಆಯೋಗದ ವರದಿಯನ್ನು ನಿರ್ಲಕ್ಷಿಸಿತು. ಕಾಂಗ್ರೆಸ್ ಸರ್ಕಾರವನ್ನು ತೆಗೆದುಹಾಕಿದ ನಂತರವೇ ಒಬಿಸಿಗಳಿಗೆ ಮೀಸಲಾತಿ ಸಿಕ್ಕಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮೀಸಲಾತಿ ನೀತಿಗಳನ್ನು ನಿಭಾಯಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಟೀಕಿಸಿದರು. …

Read More »

ಅಪರಾಧ ತಡೆ ಮಾಸಾಚರಣೆ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ #ಧಾರವಾಡ ಉಪವಿಭಾಗದ ACP ಶ್ರೀ ಪ್ರಶಾಂತ ಸಿದ್ದನಗೌಡ್ರ ರವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಸೈಬರ್ ವಂಚನೆ, ಡ್ರಗ್ಸ್ ದುಷ್ಪರಿಣಾಮ, ರಸ್ತೆ ಸುರಕ್ಷತೆ ಮತ್ತು 112 ಸಹಾಯವಾಣಿ ಸಂಖ್ಯೆ ಕುರಿತು ಜಾಗೃತಿ ಮೂಡಿಸಿದರು.

Read More »

ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ರಾಷ್ಟ್ರೀಯ ಲೋಕ ಅದಾಲತ್‌; ಒಟ್ಟು 235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತ

ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಈ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಜೆ.ಎಮ್. ಖಾಜಿ ಮತ್ತು ಟಿ. ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ ಎಮ್. ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ. ಜಿ. ದಳವಾಯಿ ಈ ರೀತಿಯಾಗಿ …

Read More »