Breaking News

Uncategorized

ಮುಂದಿನ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹೊರತು ಯಾವ ಆಪರೇಷನ್​​ ಮಾಡುವುದಿಲ್ಲ: ಡಾ.ಜಿ.ಪರಮೇಶ್ವರ್

ತುಮಕೂರು: ಮುಂದಿನ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹೊರತು ಯಾವ ಆಪರೇಷನ್​​ ಮಾಡುವುದಿಲ್ಲ, ಜನರ ಆಯ್ಕೆಯ ಮೇಲೆ ಎಲ್ಲಾ ನಿರ್ಧಾರವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ಮಾತನಾಡಿದ ಅವರು, ಜನರ ಮೇಲೆ ನಮಗೆ ವಿಶ್ವಾಸವಿದೆ. 2023ರಲ್ಲಿ ಜನ ನಮ್ಮನ್ನೇ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಇಬ್ಭಾಗ ಆಗಲು ಬಿಡುವುದಿಲ್ಲ, ಯಾವುದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನು ಹೊಡೆಯುವಂತಹ ಕೆಲಸವನ್ನು ಮಾಡಬಾರದು ಎಂದು ಹೇಳಿದರು. ಪಠ್ಯಪುಸ್ತಕ ಹಿಂಪಡೆಯುವ ವಿಚಾರದ …

Read More »

ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆವಿಲ್ಲ : ಬೊಮ್ಮಾಯಿ

ನವದೆಹಲಿ: ಕೇಂದ್ರ ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ, ವಿಚಾರ ಹಾಗೂ ಪ್ರಸ್ತಾಪವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ಸಚಿವ ಉಮೇಶ ಕತ್ತಿ ‘2024ರ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಎರಡು ಭಾಗ ಆಗಲಿದೆ’ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ‌ ಅವರು ‘ಉಮೇಶ್ ಕತ್ತಿಯವರು ಈ ರೀತಿ ಹೇಳಿಕೆ ನೀಡಿರುವುದು ಇದು ಮೊದಲ ಬಾರಿಯೇನಲ್ಲ.ಹತ್ತು ಹಲವಾರು ವರ್ಷಗಳಿಂದ ಅವರು ಹೇಳಿದ್ದಾರೆ. …

Read More »

ಮತ್ತೇ ದೆಹಲಿಯಲ್ಲಿ ಹೆಚ್ಚುತ್ತಿರುವ ಮಹಾಮಾರಿ ಅಟ್ಟಹಾಸ

ನವದೆಹಲಿ: ದಿನೇ ದಿನೇ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿವೆ. ಇಂದು ಕಳೆದ ನಾಲ್ಕು ತಿಂಗಳಿನಲ್ಲಿಯೇ ಅತಿ ಹೆಚ್ಚು ಕೋವಿಡ್ ಕೇಸ್ ಪತ್ತೆಯಾಗುವ ಮೂಲಕ ಕೊರೋನಾ ನಾಲ್ಕನೇ ಅಲೆಯ ಆತಂಕವನ್ನು ಹುಟ್ಟಿಸಿದೆ. ಇಂದು ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 17,336 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಕಳೆದ ನಾಲ್ಕು ತಿಂಗಳಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳ ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ 17,336 ಹೊಸ …

Read More »

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಹರಿದ ನೆತ್ತರು

ಹುಬ್ಬಳ್ಳಿ: ತಂಗಿಯನ್ನ ಚುಡಾಯಿಸಿದ ಕಾರಣಕ್ಕೆ ಅಣ್ಣಂದಿರಿಂದ ಚಾಕು ಇರಿತವಾದ ಘಟನೆ ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿ ಯಲ್ಲಿ ಜರುಗಿದೆ. ಚಂದ್ರಶೇಖರ್ ಎಂಬಾತನಿಗೆ ಚಾಕು ಇರಿದಿರುವ ಅಣ್ಣ ತಮ್ಮಂದಿರು. ತೀವ್ರ ಗಾಯವಾಗಿರುವ ಚಂದ್ರುನನ್ನು ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ. ಕಿಮ್ಸ್ ನಲ್ಲಿ ಚಿಕೆತ್ಸೆ ಚಂದ್ರಶೇಖರ ಪಡೆಯುತ್ತಿದ್ದಾರೆ. ವಿನಾಯಕ ಹಾಗೂ  ಅಬಿ ಎನ್ನುವರು ಚಾಕು ಇರಿದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಗಾಯಾಳುಗಳು ನೀಡಿದ್ದಾರೆ. ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಪೆನ್ಸಿಲ್ ಉತ್ಪಾದನೆ ಹೆಸರಲ್ಲಿ 40 ಸಾವಿರ ಪಂಗನಾಮ

ಹುಬ್ಬಳ್ಳಿ : ಮನೆಯಲ್ಲಿಯೇ ಕುಳಿತು ಪೆನ್ಸಿಲ್ ಉತ್ಪಾಧಿಸಿ ಹಣ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಗೆ 40 ಸಾವಿರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ . ನಗರದ ರುದ್ರಪ್ಪ ಸೊರಟೂರ ಎಂಬುವರಿಗೆ ವಂಚಿಸಲಾಗಿದೆ . ದೂರುದಾರರು ಫೇಸ್ ಬುಕ್ ನೋಡುತ್ತಿರುವಾಗ ನಟರಾಜ ಕಂಪನಿಯಿಂದ ಉತ್ಪಾದನೆಯಾಗುವ ಪೆನ್ಸಿಲ್‌ಗಳನ್ನು ಮನೆಯಲ್ಲಿಯೇ ಕುಳಿತು ಪ್ಯಾಕಿಂಗ್ ಮಾಡಿ ಮರಳಿ ಕಂಪನಿಗೆ ಕಳುಹಿಸಿದರೆ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ವಂಚನೆ ಮಾಡಲಾಗಿದೆ . ಈ ಕುರಿತು ಹುಬ್ಬಳ್ಳಿ …

Read More »

ಹಣ ಕಿತ್ತುಕೊಂಡು ಹೋಗಿದ್ದ ಆರೋಪಿಗಳ ಬಂಧನ;ಉಪನಗರ ಠಾಣೆ ಪೋಲಿಸರ ಕಾರ್ಯಕ್ಕೆ ಕಮೀಷನರ್ ಮೆಚ್ಚುಗೆ!

ಹುಬ್ಬಳ್ಳಿ:-ವ್ಯಕ್ತಿಯೊರ್ವನ ಬಳಿ ಹಣ ಕಿತ್ತು ಕೊಂಡು ಹೋಗಿದ್ದ ಇಬ್ಬರ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಪೋಲಿಸರು ಯಶಸ್ವಿಯಾಗಿದ್ದಾರೆ.ಎಸ್. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಬಂದ ಇಬ್ಬರು ವ್ಯಕ್ತಿ ಹತ್ತಿರ ಬಂದು 10,000/-ರೂ ನಗದು ಹಣವನ್ನು ಕಿತ್ತುಕೊಂಡು ಹೋದ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಯಲ್ಲಿ ಜಬರಿ ಪ್ರಕರಣ ದಾಖಲಾಗಿತ್ತು. ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಡಿ. ಬಿ.ಹಾಗೂ ಪಿ.ಎಸ್.ಐ ಶ್ಯು.ಎಮ್. ಪಾಟೀಲ ಮತ್ತು ಸಿಬ್ಬಂದಿಗಳ ಆರೋಪಿತರ ಬಗ್ಗೆ ಮಾಹಿತಿ …

Read More »

ಜೆ.ಎಸ್.ಎಸ್. ಮಹಾವಿದ್ಯಾಲಯಕ್ಕೆ ನ್ಯಾಕ್ A+ ಗ್ರೇಡ್ ಮಾನ್ಯತೆ

ಧಾರವಾಡ :ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಜ್ಜ ವಿಜ್ಞಾನ ಲಿಂದ 2021 ರವರೆಗೆ ಸಲ್ಲಿಸಿದ ಸ್ವಯಂ ಮೌಲ್ಯಮಾಪನ ಮಹಾವಿದ್ಯಾಲಯಕ್ಕೆ 2016 ವರದಿಯನ್ನಾಧಲಿಸಿ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಮಟ್ಟ ಸಂಸ್ಥೆಯು (ನ್ಯಾಕ್, NAAC), ಮೌಲ್ಯಮಾಪನ ಮಾಡಿ A+ (CGPA-3.34) ಗ್ರೇಡನ್ನು ನೀಡಿದೆ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ಬಾರಿ ಮಹಾವಿದ್ಯಾಲಯವು ಸತತವಾಗಿ “A” ಗ್ರೇಡನ್ನು ಪಡೆಯುತ್ತ ಬಂದಿದೆ. ಮೊದಲನೆ, …

Read More »

ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ರೌಡಿ ಪರೇಡ್ ಡಿಸಿಪಿಯಿಂದ ಲೆಫ್ಟ್ ರೈಟ್

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಗಳ ಪರೇಡ್ ಮಾಡಲಾಯಿತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸೇರಿ ಹುಬ್ಬಳ್ಳಿಯ ಬಹುತೇಕ ಪೊಲೀಸ್ ಠಾಣೆಗಳಲ್ಲಿ ರೌಡಿಗಳ ಪರೇಡ್ ನಡೆಯಿತು. ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದಿದ್ದರು. ಡಿಸಿಪಿ ಸಾಹಿಲ್ ಬಾಗ್ಲಾ ರೌಡಿಗಳಿಗೆ ವಾರ್ನ್ ಮಾಡಿದರು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕೋಕಾ ಮತ್ತಿತರ …

Read More »

ರಾಯಚೂರು ನಲ್ಲಿ ಮೀನುಗಳು ಮಾರಣಹೋಮ

:ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಬಿ.ಆರ್. ಗುಂಡ ಗ್ರಾಮದಲ್ಲಿ ಮೀನುಗಳು ಸಾವನ್ನಪ್ಪಿವೆ. ದುರ್ಗಪ್ಪ ಎಂಬುವವರು ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿದ್ದರು. ಇಂದು ಏಕಾಏಕಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ಮೀನುಗಳನ್ನು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸತ್ತಿರುವ ರಾಶಿ ರಾಶಿ ಮೀನುಗಳು ಕೆರೆ ದಡದಲ್ಲಿ ಬಿದ್ದಿವೆ.

Read More »

777 ಚಾರ್ಲಿ ಸಿನಿಮಾ ವಿಕ್ಷೀಸಿದ ರಜನಿಕಾಂತ್

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಾರ್ಲಿ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 777 ಚಾರ್ಲಿ ಸಿನಿಮಾಗೆ ಸಿನಿ ಗಣ್ಯರು ಸಹ ರಕ್ಷಿತ್ ಸಿನಿಮಾಗೆ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪರಭಾಷೆಯ ಗಣ್ಯರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ …

Read More »