ಹುಬ್ಬಳ್ಳಿ : ಮನೆಯಲ್ಲಿಯೇ ಕುಳಿತು ಪೆನ್ಸಿಲ್ ಉತ್ಪಾಧಿಸಿ ಹಣ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಗೆ 40 ಸಾವಿರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ . ನಗರದ ರುದ್ರಪ್ಪ ಸೊರಟೂರ ಎಂಬುವರಿಗೆ ವಂಚಿಸಲಾಗಿದೆ . ದೂರುದಾರರು ಫೇಸ್ ಬುಕ್ ನೋಡುತ್ತಿರುವಾಗ ನಟರಾಜ ಕಂಪನಿಯಿಂದ ಉತ್ಪಾದನೆಯಾಗುವ ಪೆನ್ಸಿಲ್‌ಗಳನ್ನು ಮನೆಯಲ್ಲಿಯೇ ಕುಳಿತು ಪ್ಯಾಕಿಂಗ್ ಮಾಡಿ ಮರಳಿ ಕಂಪನಿಗೆ ಕಳುಹಿಸಿದರೆ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ವಂಚನೆ ಮಾಡಲಾಗಿದೆ . ಈ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





