ಹುಬ್ಬಳ್ಳಿ:-ವ್ಯಕ್ತಿಯೊರ್ವನ ಬಳಿ ಹಣ ಕಿತ್ತು ಕೊಂಡು ಹೋಗಿದ್ದ ಇಬ್ಬರ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಪೋಲಿಸರು ಯಶಸ್ವಿಯಾಗಿದ್ದಾರೆ.
ಎಸ್. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಬಂದ ಇಬ್ಬರು ವ್ಯಕ್ತಿ ಹತ್ತಿರ ಬಂದು 10,000/-ರೂ ನಗದು ಹಣವನ್ನು ಕಿತ್ತುಕೊಂಡು ಹೋದ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಯಲ್ಲಿ ಜಬರಿ ಪ್ರಕರಣ ದಾಖಲಾಗಿತ್ತು.
ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಡಿ. ಬಿ.ಹಾಗೂ ಪಿ.ಎಸ್.ಐ ಶ್ಯು.ಎಮ್. ಪಾಟೀಲ ಮತ್ತು ಸಿಬ್ಬಂದಿಗಳ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ 2 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗದು ಹಣ 9,500/-ರೂ,ಕೃತ್ಯಕ್ಕೆ ಉಪಯೋಗಿಸಿದ ಒಂದು ಕಪ್ಪು ಬಣ್ಣದ ಆಟೋ ರಿಕ್ಷಾ ವಶಪಡಿಕೊಂಡಿದ್ದಾರೆ. ಅಲ್ಲದೆ, ತನಿಖೆ ವೇಳೆ ಸದರಿ ಇಬ್ಬರು ಆರೋಪಿತರು ಹುಬ್ಬಳ್ಳಿ ವಿದ್ಯಾನಗರ ಪಿಎಸ್ ಹಾಗೂ ಹುಬ್ಬಳ್ಳಿ ಶಹರ ಪಿಎಸ್ ವ್ಯಾಪ್ತಿಯಲ್ಲಿ ಒಂದೊಂದುಕಳ್ಳತನ ಮಾಡಿದ ಬಗ್ಗೆ ತಿಳಿದು ಬಂದಿದ್ದು, ಅದರಂತೆ ಸದರಿ ಆರೋಪಿರಿಂದ ಸದರಿ ಎರಡು ಪ್ರಕರಣಕ್ಕೆ ಒಟ್ಟು ನಗದು ಹಣ 1,500/-ರೂ,ಕೃತ್ಯಕ್ಕೆ ಉಪಯೋಗಿಸಿದ ಒಂದು ಡಿಯೋ ಸ್ಕೂಟಿ ವಶಪಡಿಕೊಂಡಿದ್ದಾರೆ. ಆರೋಪಿತರಿಂದ ಒಟ್ಟು ಮೂರು ಜಬರಿ (ರಾಬರಿ) ಪ್ರಕರಣಗಳಿಗೆ ಸಂಬಂದಿಸಿದ ಒಟ್ಟು ರೂ, 11,000/- ನಗದು ಹಣ, ಒಂದು ಅಟೋ ರಿಕ್ಷಾ ಹಾಗೂ ಒಂದು ಡಿಯೋ ಸ್ಕೂಟಿ ವಶಪಡಿಸಿಕೊಂಡಿದ್ದು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವಿಚಂದ್ರ ಡಿ ಬಿ, ಪಿಎಸ್‍ಐ ಯು, ಎಮ್ ಪಾಟೀಲ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





