Breaking News

Uncategorized

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವೈಫಲ್ಯವು ಅಭಿವೃದ್ಧಿಗೆ ಮಾರಕ : ಖರ್ಗೆ

ಬೆಂಗಳೂರು : ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವೈಫಲ್ಯವು ಅಭಿವೃದ್ಧಿಗೆ ಮಾರಕ. ಕಾನೂನು ಸುವ್ಯವಸ್ಥೆ ವೈಫಲ್ಯ ಕಾರಣವಾದವರು ಹಿಂದೂ, ಮುಸ್ಲಿಂ ಯಾರೇ ಇರಲಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತದೆ. ಬಂಡವಾಳ ಹೂಡಿಕೆಯೂ ಸಹಜವಾಗಿಯೇ ಹೆಚ್ಚಾಗಿ ಹರಿದು ಬರುತ್ತದೆ. ಆದರೆ, ಕಾನೂನು ಸುವ್ಯವಸ್ಥೆ ಸರಿಯಿಲ್ಲದಿದ್ದರೆ ಅಭಿವೃದ್ಧಿಗೆ …

Read More »

ಅ.15ರ ಬಳಿಕ ಜನೋತ್ಸವ

ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆಗಳು ಹಾಗೂ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಉದ್ದೇಶಿತ ‘ಜನೋತ್ಸವ’ಕ್ಕೆ ಆಗಸ್ಟ್ 15ರ ಬಳಿಕ ಚಾಲನೆ ನೀಡುವ ಸಾಧ್ಯತೆಗಳಿವೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆ.6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಇದೇ ವೇಳೆ ಕಾರ್ಯಕ್ರಮದ ರೂಪುರೇಷೆ ವರಿಷ್ಠರ ಗಮನಕ್ಕೆ ತರುವ ಸಾಧ್ಯತೆಗಳಿವೆ. ಪ್ರವೀಣ್ ಹತ್ಯೆ ನಂತರ ಕೆರಳಿರುವ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಹೋರಾಟಗಳಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಉಂಟಾಗಿರುವ ‘ಹಾನಿ ನಿಯಂತ್ರಣ’ ತುರ್ತು …

Read More »

15ಕ್ಕೂ ಹೆಚ್ಚು ಜನರಿಗೆ ಜನರಿಗೆ ಚಾಕು ಇರಿದು ಗಾಯ

ಚಿಕ್ಕಬಳ್ಳಾಪುರ: ಅಪರಿಚಿತ ವ್ಯಕ್ತಿಯೊಬ್ಬ 15ಕ್ಕೂ ಅಧಿಕ ಮಂದಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ನಗರದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿ ಒಂದು ಕೈಯಲ್ಲಿ ಚಾಕು ಹಿಡಿದುಕೊಂಡು ವೇಗವಾಗಿ ಬೈಕ್ ಚಲಾಯಿಸಿಕೊಂಡಿ ಬಂದ ಅಪರಿಚಿತ ನಗರಸಭೆ, ಕಾರ್ಖಾನೆ ಪೇಟೆ, ಬಿಬಿ ರಸ್ತೆ, ಅಂಬಿಕಾ ಮೆಡಿಕಲ್ಸ್ ಮತ್ತಿತರ ಪ್ರದೇಶಗಳಲ್ಲಿ ನಿಂತಿದ್ದ ಹಲವರಿಗೆ ಇರಿದು ಪರಾರಿ ಆಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಬೆಂಗಳೂರಿನ‌ ಆಸ್ಪತ್ರೆಗೆ …

Read More »

ಅ. 2 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಭೇಟಿ

ಹುಬ್ಬಳ್ಳಿ: ಅಗಸ್ಟ್ 2 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದು ಅಂದು ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಐತಿಹಾಸಿಕ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ರಾಹುಲ್ ಆಗಮಿಸಲಿದ್ದು, ಮರುದಿನ ಜಿಲ್ಲೆಯ ಮುರುಘಾಮಠ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ. ನಂತರ ಮಾಜಿ ಸಿಎಂ …

Read More »

ಗಿರಿಯಾಳ ಬಳಿ ಮಹಿಳೆಯೊಬ್ಬರು ಅನುಮಾನಸ್ಪಧವಾಗಿ ಸಾವನ್ನಾಪ್ಪಿದ್ದಾರೆಂದು ಸುಳ್ಳು ವದಂತಿ

ಹುಬ್ಬಳ್ಳಿ: ಹುಬ್ಬಳ್ಳಿಯ ಹೊರ ವಲಯದ ಗಿರಿಯಾಳ ಬಳಿ ಮಹಿಳೆಯೊಬ್ಬರು ಅನುಮಾನಸ್ಪಧವಾಗಿ ಸಾವನ್ನಾಪ್ಪಿದ್ದಾರೆಂದು ಹಲವು ವದಂತಿಗಳು ಏದಿದ್ದವು. ಸ್ಥಳಿಯರು ಗ್ರಾಮೀಣ ಪೋಲಿಸರಿಗೆ ಮಹಿಳೆಯೊಬ್ಬರು ಸಾವನ್ನಾಪ್ಪಿದ್ದಾರೆಂದು ತಪ್ಪು ಸಂದೇಶವನ್ನು ರವಾನೆ ಮಾಡಿದ್ದರು. ಆದ್ರೇ ಸ್ಥಳಕ್ಕೆ ಪೋಲಿಸರು ಬಂದು ಪರಿಶೀಲನೆ ನಡೆಸಿದಾಗ 35 ವರ್ಷದ ಮಹಿಳೆ ಅಸ್ವಸ್ಥಲಾಗಿದ್ದಳು ಎಂಬುದು ಕಂಡು ಬಂದಿದೆ. ಮಹಿಳೆಯನ್ನು ವಿಚಾರಣೆ ಮಾಡಿದಾಗ ನವಲೂರು ಗ್ರಾಮದ ನೀಲವ್ವ ವಾಡೆಕಾರ ಎಂಬುದು ತಿಳಿದು ಬಂದಿದೆ. ಅಸ್ವಸ್ಥಗೊಂಡ ಮಹಿಳೆಯನ್ನು ಕೂಡಲ್ಲೆ ಪೋಲಿಸರು ಕಿಮ್ಸ್ ಆಸ್ಪತ್ರೆಗೆ …

Read More »

ಫಾಸಿಲ್ ಹತ್ಯೆಗೈದ ಐವರು ಆರೋಪಿಗಳು ಬಂಧನ

ಮಂಗಳೂರು: ಸುರತ್ಕಲ್ ನಲ್ಲಿ ಫಾಸಿಲ್ ಹತ್ಯೆಗೈದ ಐವರು ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹಂತಕರು ಬಳಸಿದ್ದ ಕಾರ್ ಮಾಲೀಕ ಅಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಜಿತ್ ಬಾಡಿಗೆ ಕಾರ್ ಬಿಟ್ಟಿದ್ದು, ಆತನ ಕಾರ್ ನಲ್ಲಿ ದುಷ್ಕರ್ಮಿಗಳು ಬಂದಿದ್ದರು.ಜುಲೈ 28ರಂದು ಸುರತ್ಕಲ್ ನಲ್ಲಿ ಹತ್ಯೆ ಮಾಡಲಾಗಿತ್ತು. ಅಜಿತ್ ವಿಚಾರಣೆ ವೇಳೆ ಮಾಹಿತಿ ಕಲೆಹಾಕಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ವಿಚಾರಗೊಳಪಡಿಸಿದ್ದಾರೆ ಎನ್ನಲಾಗಿದೆ.

Read More »

ರೇಣುಕಾಚಾರ್ಯ ಪಕ್ಷದ ಕಾರ್ಯಕರ್ತರಲ್ಲಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ

ದಾವಣಗೆರೆ : ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದು, ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಪಕ್ಷದ ಕಾರ್ಯಕರ್ತರಲ್ಲಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾರ್ಯಕರ್ತರೆ ಪಕ್ಷದ ಶಕ್ತಿ’ ನಾನು ಕಾರ್ಯಕರ್ತರಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡುತ್ತೇನೆ. ರಾಜೀನಾಮೆಯನ್ನು ವಾಪಸ್ ಪಡೆಯಬೇಕು, ನಾವು ನಿಮ್ಮೊಂದಿಗಿದ್ದೇವೆ ಎಂದು …

Read More »

ರಾಜ್ಯದ ಅನ್ನದಾತರಿಗೆ ಸಿಹಿ ಸಿದ್ದಿ

ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಹೆಚ್ಚಿನ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆ ಕಾರ್ಯ ಪೂರ್ಣವಾಗಿದ್ದು ಮುಸುಕಿನ ಜೋಳ ಮತ್ತು ರಾಗಿ ಬೆಳೆ ಬಿತ್ತನೆ ಕಾರ್ಯ ಚುರುಕಾಗಿರುತ್ತದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ಮುಸುಕಿನ ಜೋಳ, ತೂಗರಿ, ಅಲಸಂದಿ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮವಹಿಸಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೂಳ್ಳಲು ಕೋರಿದೆ.

Read More »

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ತುಸು ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಎರಡು ಸಾವಿರಕ್ಕೆ ಹೆಚ್ಚಿದ್ದ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ತುಸು ಇಳಿಕೆಯಾಗಿವೆ. ಆದರೆ, ನಿರಂತರ ಹೊಸ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 10 ಸಾವಿರದ ಗಡಿ ದಾಟಿವೆ. ಶನಿವಾರ 1,886 ಹೊಸ ಪ್ರಕರಣ ಪತ್ತೆಯಾಗಿದ್ದು, 1,242 ಮಂದಿ ಗುಣಮುಖರಾಗಿದ್ದಾರೆ. ಬಳ್ಳಾರಿಯಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 32 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.5.8 ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿದರೆ 150 ಸೋಂಕು …

Read More »

ಇಸ್ಪೀಟ್ ಆಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು

ಹುಬ್ಬಳ್ಳಿ : ಇಸ್ಪೀಟ್ ಆಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ. ನಗರದ ಅಕ್ಷಯ ಕಾಲನಿಯ ಮನೆಯೊಂದರಲ್ಲಿ ಮೊನ್ನೆ ರಾತ್ರಿ ಇಸ್ಪೀಟ್ ಜೂಜಾಟವಾಡಿದ್ದ ಪ್ರಕರಣದ ಈ ನಾಲ್ವರು ಪೊಲೀಸ್ ಅಧಿಕಾರಿ ಸಿಬ್ಬಂದಿ ಅಮಾನತು ಮಾಡಲಾಗಿದೆ.ಹುಬ್ಬಳ್ಳಿ-ಧಾರವಾಡ ಸಿಎಆರ್ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್ ಪಿಐ) ಸಂತೋಷ ಬೋಜಪ್ಪಗೋಳ, ಸಿಎಆರ್ ಹೆಡ್ ಕಾನ್ ಸ್ಟೆಬಲ್‌ಗಳಾದ ಮುತ್ತಪ್ಪ ಕಾಟನಾಯಕ, ನವೀನ ತೋಪಲಕಟ್ಟಿ, ಪೂರ್ವ ಸಂಚಾರ …

Read More »