ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆಗಳು ಹಾಗೂ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಉದ್ದೇಶಿತ ‘ಜನೋತ್ಸವ’ಕ್ಕೆ ಆಗಸ್ಟ್ 15ರ ಬಳಿಕ ಚಾಲನೆ ನೀಡುವ ಸಾಧ್ಯತೆಗಳಿವೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆ.6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಇದೇ ವೇಳೆ ಕಾರ್ಯಕ್ರಮದ ರೂಪುರೇಷೆ ವರಿಷ್ಠರ ಗಮನಕ್ಕೆ ತರುವ ಸಾಧ್ಯತೆಗಳಿವೆ.
ಪ್ರವೀಣ್ ಹತ್ಯೆ ನಂತರ ಕೆರಳಿರುವ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಹೋರಾಟಗಳಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಉಂಟಾಗಿರುವ ‘ಹಾನಿ ನಿಯಂತ್ರಣ’ ತುರ್ತು ಅಗತ್ಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





