Breaking News

ಮೈಸೂರು

ಪ್ರತಾಪ್‌ಸಿಂಹ, ರಾಮದಾಸ್ ನಡುವೆ ಶೀತಲ ಸಮರ : ಬಿಜೆಪಿಯಲ್ಲಿ ಅಸಮಧಾನ

ಮೈಸೂರು : ರಾಮದಾಸ್ ಮೋದಿಗಿಂತ ಸೀನಿಯರ್.ಅವರಿಗಿಂತ ಬುದ್ದಿವಂತರು ಜ್ಞಾನಿಗಳು.ಕೇವಲ ಬ್ಯಾನರ್ ಅಲ್ಲಿ ಮೋದಿ ಪೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ.ಮೋದಿ ಯೋಜನೆಗಳನ್ನು ವಿರೋಧಿಸಿದರೆ ಜನ ಪಾಠ ಕಲಿಸುತ್ತಾರೆ ಎಂದುಪ್ರತಾಪ್ ಸಿಂಹ ಹೇಳಿದರು. ಸಂಸದ ಪ್ರತಾಪ್‌ಸಿಂಹ ಮತ್ತು ಶಾಸಕ‌ ಎಸ್.ಎ.ರಾಮದಾಸ್ ನಡುವೆ ಶೀತಲ ಸಮರ ಮುಂದುವರೆದಿದೆ. ಮನೆಮನೆಗೆ ಗ್ಯಾಸ್ ಸಂಪರ್ಕ ಯೋಜನೆಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಪತ್ರ ಬರೆದಿರುವುದಕ್ಕೆ ಪ್ರತಾಪ ಸಿಂಹ ಕೆಂಡಾಮಂಡಲರಾಗಿದ್ದಾರೆ. ಯೋಜನೆಯನ್ನು ಕಾಂಗ್ರೆಸ್ ಜೆಡಿಎಸ್ ಶಾಸಕರು ವಿರೋಧಿಸಿಲ್ಲ. ನಮ್ಮದೇ …

Read More »

ಧ್ವಜಾರೋಹಣ ನೆರವೇರಿಸಿದ ಶಿವರಾಜಕುಮಾರ್‌

ಮೈಸೂರು: ಇಲ್ಲಿನ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ‘ಶಕ್ತಿಧಾಮ’ದಲ್ಲಿ ನಟ ಶಿವರಾಜಕುಮಾರ್‌ ಅವರು ಬುಧವಾರ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿ, ಧ್ವಜಾರೋಹಣ ನೆರವೇರಿಸಿದರು. ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ನಟ ಗುರುದತ್ ಅವರೊಂದಿಗೆ ಇಲ್ಲಿಗೆ ಬಂದ ಅವರು ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

Read More »

ವೃದ್ಧಾಪ್ಯದಲ್ಲಿ ಆಸರೆಯಾದ 65 ವರ್ಷದ ಮಹಿಳೆ : ಮೈಸೂರುಲ್ಲಿ ಅಪರೂಪದ ನಿಖಾ

ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ65 ವರ್ಷದ ಮಹಿಳೆ ಮದುವೆ ಮಾಡಿಸಿದ್ದಾರೆ.ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿರುವ  ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ …

Read More »

ಕರ್ಫ್ಯೂ ಜಾರಿ ಕುರಿತು ಸರ್ಕಾರ ಕ್ಕೆ ಪ್ರಶ್ನಿಸಿದ ಪ್ರತಾಪಸಿಂಹ

ಮೈಸೂರು: ‘ಕೊರೊನಾ ಹೆಸರಲ್ಲಿ ಲಾಕ್‌ಡೌನ್‌, ನೈಟ್‌ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಾದರೆ ಕೋವಿಡ್‌ ಲಸಿಕೆ ಏಕೆ ನೀಡಬೇಕಿತ್ತು’.ಈಗ ಬೂಸ್ಟರ್‌ ಡೋಸ್‌ ಬಂದಿದ್ದು, ಕೊರೊನಾ ಸೋಂಕು ಪ್ರಸರಣದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗಿದೆ  ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮೊದಲ ಡೋಸ್‌ನಲ್ಲಿ ಶೇ 99 ಹಾಗೂ ಎರಡನೇ ಡೋಸ್‌ನಲ್ಲಿ ಶೇ 80 ಸಾಧನೆ ಮಾಡಲಾಗಿದೆ.  ಆಸ್ಪತ್ರೆಗಳಲ್ಲಿ ಮತ್ತಷ್ಟು ಬೆಡ್‌ ವ್ಯವಸ್ಥೆ ಮಾಡಿ, ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. …

Read More »

ವಾರಾಂತ್ಯ ಕರ್ಫ್ಯೂಗೆ ಸ್ಪಂದಿಸಿದ ಮೈಸೂರು ಜನ

ಮೈಸೂರು: ವಾರಾಂತ್ಯ ಕರ್ಫ್ಯೂನಿಂದಾಗಿ ರಸ್ತೆಗಳು, ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿರುವುದರಿಂದ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.ಎಲ್ಲೆಡೆ ಬಿಕೋ ಎನ್ನವ ವಾತಾವರಣ ಸೃಷ್ಟಿಯಾಗಿತ್ತು ಪ್ರಮುಖ ವಾಣಿಜ್ಯ ಕೇಂದ್ರ ಕೆ.ಆರ್‌.ಸರ್ಕಲ್‌,ಡಿ.ದೇವರಾಜ ಅರಸು ರಸ್ತೆ, ಸಯ್ನಾಜಿರಾವ್‌ ರಸ್ತೆ, ಇರ್ವಿನ್‌ ರಸ್ತೆ, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಕಾಳಿದಾಸ ರಸ್ತೆ, ಅಗ್ರಹಾರ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿ ಬಿಕೋ ಎನ್ನುವ ವಾತಾವರಣ ಇತ್ತು. ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಜನರು …

Read More »

ಮೈಸೂರು : 50 ಅಂಗಡಿಗಳ ತೆರುವು

50 ಅಂಗಡಿಗಳ ತೆರುವುಮೈಸೂರು: 50 ಅಂಗಡಿಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿನ ದೇವನೂರು 3ನೇ ಹಂತದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪೂರ್ವ ಕಚೇರಿಯ ಅಕ್ರಮವಾಗಿ ನಿರ್ಮಾಣವಾಗಿದ್ದ ಅಂಗಡಿಗಳನ್ನುಶುಕ್ರವಾರ ತೆರವುಗೊಳಿಸಿದರು. ಇಲ್ಲಿ ಅನಧಿಕೃತವಾಗಿ ವಾಹನ ಚಾಲನಾ ತರಬೇತಿ ಶಾಲೆಗಳು, ಚಹಾದಂಗಡಿಗಳು, ಹೋಟೆಲ್ ನಿರ್ಮಾಣವಾಗಿದ್ದವು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಮಾಲೀಕರು ತೆರವುಗೊಳಿಸಿರಲಿಲ್ಲ.

Read More »

ರೂಪಾಂತರಿ ಓಮಿಕ್ರಾನ್ : ಮೈಸೂರು ಹೈ ಅಲರ್ಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋವಿಡ್ ಏರಿಕೆ ಆಗಿದ್ದು ಆತಂಕ ಸೃಷ್ಟಿಸಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೋವಿಡ್ ರೂಪಾಂತರಿ ಓಮಿಕ್ರಾನ್ ಮಣಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದೆ.ಕರ್ನಾಟಕದ ರಾಜಾಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ.. ಉದ್ಯೋಗ ಹಾಗೂ ಶಿಕ್ಷಣಕ್ಕೆ ಮೈಸೂರಿನ ಬಹುತೇಕರು ಬೆಂಗಳೂರನ್ನು ಆಶ್ರಯಿಸಿದ್ದಾರೆ. ಹೀಗಾಗಿ ರೋಗ ಲಕ್ಷಣ ರಹಿತರು ಏನಾದರೂ ನಗರದಲ್ಲಿ ಓಡಾಡಿದರೆ ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ.

Read More »

ವಾಮಾಚಾರನಿಂದಾಗಿ ಬಿತ್ತು ಬಾಲಕನ ಹೆಣ

ಮೈಸೂರು: ಚಿಕ್ಕ ವಯಸ್ಸಿನಲ್ಲಿ ಮೌಢ್ಯಕ್ಕೆ ಮಾರು ಹೋದವ್ರು ಚೆಡ್ಡಿ ದೊಸ್ತ್ ಅನ್ನೇ ಬಲಿ ಪಡೆದಿರುವ ಘಟನೆ  ಮೈಸೂರುನಲ್ಲಿ ನಡೆದಿದೆ. ಅವ್ರೆಲ್ಲ ಒಂದೇ ಊರಿನ ಚೆಡ್ಡಿದೋಸ್ತ್ ಗಳು . ಇನ್ನೂ ಮೀಸೆ ಚಿಗುರದಿದ್ರೂ ಅವ್ರು ಮಾಡೋ ಕೆಲ್ಸ ಮಾತ್ರ ಭಯ ಹುಟ್ಟಿಸುವಂತದ್ದು. ಸ್ನೇಹಿತರು ಕರಿತಿದ್ದಾರೆ ಅಂತಾ ಹಿಂದೆ ಮುಂದೆ ಯೋಚನೆ ಮಾಡದೆ ಸ್ನೇಹಿತರೊಟ್ಟಿಗೆ ಹೋದ ಆ ಬಾಲಕ ಸಾವಿನ ಮನೆ ಸೇರಿದ್ದಾನೆ. ವಾಮಾಚಾರ ಮಾಡಿರೋ ಅಸಾಮಿಗಳ್ಯಾರು ಜ್ಯೋತಿಷಿಗಳಲ್ಲ ಬದಲಿಗೆ ಇನ್ನೂ ಚಿಗುರು …

Read More »

ಐದು ಜಿಲ್ಲೆಗಳ ಡಿಸಿಗಳಿಗೆ ಬೆವರಿಳಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸರ್ಕಾರದ ಕಾರ್ಯಕ್ರಮ ಅನುಷ್ಠಾನದಲ್ಲಿ ವೈಫಲ್ಯ, ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಹಿನ್ನಡೆ ವಿಚಾರವನ್ನು ಪ್ರಸ್ತಾಪಿಸಿ ಐವರು ಜಿಲ್ಲಾಧಿಕಾರಿಗಳಿಗೆ ಕ್ಲಾಸ್‌ ಮಾಡಿದ್ದಾರೆ. ಚಿಕ್ಕಮಗಳೂರು, ಬೆಳಗಾವಿ, ಮೈಸೂರು, ವಿಜಯನಗರ, ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಬೊಮ್ಮಾಯಿ ವಾರ್ನಿಂಗ್‌ ನೀಡಿದ್ದಾರೆ. ಚಿಕ್ಕಬಳ್ಳಾಪುರ,ಮಂಡ್ಯ ಸೇರಿ ಏಳು ಜಿಲ್ಲೆಗಳಲ್ಲಿ ಅರ್ಧಕರ್ಧ ಕೆಲಸ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು …

Read More »

ರಂಗಾಯಣದ ಮುಂದೆ ನಿಲ್ಲದ ಪ್ರತಿಭಟನೆ

ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರ ಮುಂದುವರಿದಿದೆ. ರಂಗಾಯಣ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಗಾರರು ಕುಕ್ಕರಹಳ್ಳಿ ಕೆರೆ ಮುಂದೆ ಸಭೆ ನಡೆಸಿ, ರಂಗಾಯಣದತ್ತ ಮೆರವಣಿಗೆ ಹೊರಡಲು ಮುಂದಾದರು. ಬ್ಯಾರಿಕೇಡ್ ಹಾಕಿದ ಪೊಲೀಸರು ಅವರನ್ನು ತಡೆದರು. ಈ ವೇಳೆ ಪೊಲೀಸರಿಗೂ, ಪ್ರತಿಭಟನಕಾರರಿಗೂ ಜಟಾಪಟಿ ನಡೆಯಿತು. ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ನಿಂದಿಸಿದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಲಾಮಂದಿರಕ್ಕೆ ಮೌನವಾಗಿ ಮೆರವಣಿಗೆ ಹೊರಡಲು ಅನುಮತಿ ನೀಡಬೇಕೆಂದು …

Read More »