Breaking News

ವಾರಾಂತ್ಯ ಕರ್ಫ್ಯೂಗೆ ಸ್ಪಂದಿಸಿದ ಮೈಸೂರು ಜನ



ಮೈಸೂರು: ವಾರಾಂತ್ಯ ಕರ್ಫ್ಯೂನಿಂದಾಗಿ ರಸ್ತೆಗಳು, ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿರುವುದರಿಂದ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.ಎಲ್ಲೆಡೆ ಬಿಕೋ ಎನ್ನವ ವಾತಾವರಣ ಸೃಷ್ಟಿಯಾಗಿತ್ತು

ಪ್ರಮುಖ ವಾಣಿಜ್ಯ ಕೇಂದ್ರ ಕೆ.ಆರ್‌.ಸರ್ಕಲ್‌,ಡಿ.ದೇವರಾಜ ಅರಸು ರಸ್ತೆ, ಸಯ್ನಾಜಿರಾವ್‌ ರಸ್ತೆ, ಇರ್ವಿನ್‌ ರಸ್ತೆ, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಕಾಳಿದಾಸ ರಸ್ತೆ, ಅಗ್ರಹಾರ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿ ಬಿಕೋ ಎನ್ನುವ ವಾತಾವರಣ ಇತ್ತು.

ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಜನರು ಕರ್ಫ್ಯೂವಿರುವ ಕಾರಣ ಹೊರಗಡೆ ಸಂಚರಿಸಲಿಲ್ಲ. ಬಡಾವಣೆಗಳಲ್ಲಿ ಸ್ವಲ್ಪಮಟ್ಟಿಗೆ ಜನಸಂಚಾರವಿದ್ದರೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜೀವನ ಸ್ತಬ್ಧವಾಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *