Breaking News

ಮಂಗಳೂರು

ದಕ್ಷಿಣ ಕನ್ನಡದಲ್ಲಿ ದೀಪಗಳಿಂದ ಅಲಕಂರಿಸಿದ ನವರಾತ್ರಿ ಸಂಭ್ರಮ

ಮಂಗಳೂರು/ ಉಡುಪಿ/ಕಾಸರಗೋಡು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸೆ. 26ರಂದು ನವರಾತ್ರಿ, ದಸರಾ ಸಂಭ್ರಮ ಆರಂಭಗೊಳ್ಳಲಿದ್ದು ವಿವಿಧ ದೇವಾಲಯಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹತ್ತನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ.ವಿವಿಧ ದೇಗುಲಗಳು ವಿದ್ಯುತ್‌ ದೀಪ, ಹೂವುಗಳಿಂದ ಶೃಂಗಾರಗೊಂಡಿವೆ. ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ …

Read More »

ಕುವೈತ್‌ನಲ್ಲಿ ಮಂಗಳೂರು ಮೂಲದ ಯುವಕ ಸಾವು

ಮಂಗಳೂರು: ಕುವೈತ್‌ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಬಜಾಲ್‌ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ (33) ಮೃತಪಟ್ಟಿದ್ದಾರೆ. ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್‌ ಆಗಿದ್ದ ಅವರು ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬೈಕ್‌ನಲ್ಲಿ ಮರಳುವ ವೇಳೆ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ, ತಾಯಿಯನ್ನು ಅಗಲಿದ್ದಾರೆ. 44 ಲಕ್ಷ ರೂ. ಮೌಲ್ಯದ ಚಿನ್ನ ಸಹಿತ ಓರ್ವ ವಶಕ್ಕೆಕಾಸರಗೋಡು: ದುಬಾೖಯಿಂದ ಗೋ ಫಾಸ್ಟ್‌ ವಿಮಾನದಲ್ಲಿ ಕಣ್ಣೂರಿಗೆ ಆಗಮಿಸಿದ ಮೊಗ್ರಾಲ್‌ಪುತ್ತೂರಿನ ಮೊದೀನ್‌ …

Read More »

ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅನಾರೋಗ್ಯದಿಂದ ನಿಧನ

ಮಂಗಳೂರು : ಗರೋಡಿ ಬಳಿಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅನಾರೋಗ್ಯದಿಂದ ಸೋಮವಾರ ಸಂಜೆ ನಿಧನಹೊಂದಿದ್ದಾರೆ. ಶ್ರಿ ದುರ್ಗಾ ಸದನ್ ಸೌಜನ್ಯ ಲೇನ್ ಬಿಕರ್ನಕಟ್ಟೆ ನಿವಾಸಿಯಾದ ಜಯಂತ್ ಕುಮಾರ್ ಅವರು ಕಂಕನಾಡಿಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನಾಲ್ಕು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತ್ ಕುಮಾರ್ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಸೋಮವಾರ …

Read More »

ಸೆ. 26 ರಿಂದ ಅ. 10 ರವರೆಗೆ ದಸರಾ ರಜೆ : ಬಿ.ಸಿ. ನಾಗೇಶ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ. 26 ರಿಂದ ಅ. 10 ರವರೆಗೆ ದಸರಾ ರಜೆ ನೀಡಲು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಹಬ್ಬಕ್ಕೆ ಪೂರಕವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ದಸರಾ ರಜೆ ನೀಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಬಿ.ಸಿ. ನಾಗೇಶ್ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ …

Read More »

ಮೋದಿ ಆಗಮನಕ್ಕೆ ಮಂಗಳೂರಿಗೆ ಹರಿದ ಬಂದ ಜನ ಸಾಗರ

ಮಂಗಳೂರು: ಕರಾವಳಿಯ ಆರ್ಥಿಕ ಹೆಬ್ಟಾಗಿಲು ಕಡಲನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಜನ ಸಾಗರವೇ ಸಾಕ್ಷಿಯಾಯಿತು. ಲಕ್ಷಾಂತರ ಅಭಿಮಾನಿಗಳಿಂದ “ಮೋದಿ-ಮೋದಿ’ ಎಂಬ ಘೋಷಣೆಗಳು ಸಭಾಂಗಣದ ಒಳಗೂ -ಹೊರಗೂ ಪ್ರತಿಧ್ವನಿಸಿ “ಮೋದಿ ಹವಾ’ ಸೃಷ್ಟಿಸಿತು. ದಕ್ಷಿಣ ಕನ್ನಡ ಜಿಲ್ಲೆಗೆ ಇದು ಐದನೇ ಬಾರಿಯ ಭೇಟಿಯಾದರೂ ಸರಕಾರಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಧಾನಿಯಾಗಿ ನರೇಂದ್ರ ಮೋದಿ ಭಾಗವಹಿಸುತ್ತಿರುವುದು ಇದೇ ಮೊದಲು. ಹಾಗಾಗಿ ಪ್ರಧಾನಿ ಎಂಬ ಅಂಶವೂ ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಸೆಳೆದು …

Read More »

ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಧರಿಸುವಂತಿಲ್ಲ : ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಮಂಗಳೂರು:ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಿದ್ದತೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಧರಿಸುವಂತಿಲ್ಲ.  ಕಪ್ಪು ಬಟ್ಟೆ ಕೊಂಡೊಯ್ಯುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆಯನ್ನು ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಪ್ರಧಾನಿಯವರು ಆಗಮಿಸುತ್ತಾರೆ. ಮತ್ತೆ ಸಂಜೆ 4.30ಕ್ಕೆ ಮಂಗಳೂರು ಏರ್ ಪೋರ್ಟ್ ನಿಂದ ತೆರಳುತ್ತಾರೆ. ಭದ್ರತೆಗಾಗಿ ಹೊರಗಿನ ಜಿಲ್ಲೆಗಳಿಂದ ಪೊಲೀಸರು ಆಗಮಿಸಿದ್ದಾರೆ. …

Read More »

ಸೆ. 2ರಂದು ಮಂಗಳೂರಿಗೆ ಪ್ರಧಾನಿ ಆಗಮನ

ಮಂಗಳೂರು: ಸೆಪ್ಟೆಂಬರ್ 2 ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಮಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರು, ಮೈಸೂರಿಗೆ ಬಂದಿದ್ದರು. ಪಣಂಬೂರುನಲ್ಲಿರುವ “ನವ ಮಂಗಳೂರು ಬಂದರು ಪ್ರಾಧಿಕಾರದ” ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಎನ್ ಎಂ ಪಿ ಟಿ ಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲಾ …

Read More »

ಮೇಳಕ್ಕೆ ಬಂದಿದ್ದ ಇಬ್ಬರು ಸಮುದ್ರದ ಪಾಲು

ಮಂಗಳೂರ: ಪಣಂಬೂರು ಬೀಚ್ ನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ದಿವಾಕರ ಆರಾಧ್ಯ (40), ನಿಂಗಪ್ಪ(65) ಮೃತರು. ಇವರಿಬ್ಬರೂ ಮಂಗಳೂರಿನ ಹಲಸಿನ ಮೇಳಕ್ಕೆ ಬಂದಿದ್ದವರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮತ್ತೇ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು : ತರಗತಿಗೆ ನಿರಾಕರಿಸಿದ ಪ್ರಾಂಶುಪಾಲೆ

ಮಂಗಳೂರು: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ.ಈಗಾಗಲೇ ಹೈಕೋರ್ಟ್ ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ತೀರ್ಮಾನ ನೀಡಿದೆ. ಆದರೂ ಮಂಗಳೂರಿನ ವಿವಿ ಘಟಕ ಕಾಲೇಜಿಗೆ ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದಾರೆ. …

Read More »

ಸ್ಯಾಕ್ಸೋಫೋನ್ ವಾದಕಿ ಆತ್ಮಹತ್ಯೆ

ಮಂಗಳೂರು: ಸ್ಯಾಕ್ಸೋಫೋನ್ ವಾದಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಕ್ತಿನಗರದ ಫ್ಲ್ಯಾಟ್ ವೊಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದ, ಮೂಲತಃ ಮುಲ್ಕಿಯವರಾದ ಸ್ಯಾಕ್ಸೊಫೋನ್ ವಾದಕಿ ಸುಜಾತಾ ದೇವಾಡಿಗ (29) ಆತ್ಮಹತ್ಯೆ ಮಾಡಿಕೊಂಡವರು.ತಲೆ ನೋವು ಅಗುತ್ತಿದೆ ಎಂದು ಹೇಳಿ ಕೋಣೆಗೆ ಹೋದವರು ಹೊರಗೆ ಬಾರದಿದ್ದಾಗ ಮನೆಯವರು ಕೋಣೆಯಲ್ಲಿ ನೋಡಿದಾಗ ಘಟನೆ ಗೊತ್ತಾಗಿದೆ.ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ …

Read More »