Breaking News

ಹುಬ್ಬಳ್ಳಿ ಸುದ್ದಿ

ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆ

ಧಾರವಾಡ: ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಿಕಿತ್ಸೆಗಾಗಿ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ …

Read More »

ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ ಪ್ರಶ್ನೆ ಎಂದು ಶೆಟ್ಟರ್ ಕಿಡಿ

ಹುಬ್ಬಳ್ಳಿ: ಹೈಕಮಾಂಡ್ ಗೆ ಕಳಿಸಿದ ಪಟ್ಟಿಯಲ್ಲಿ ನನ್ನದು ಒಂದೇ ಹೆಸರಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿ ಟಿಕೇಟ್ ಕೊಡಲ್ಲ‌ ಅಂತಾರೆ. ಅದನ್ನು ಸ್ವೀಕರಿಸಬೇಕು. ಒಂದು ಫಾರ್ಮೆಟ್ ಕಳಿಸ್ತೇವೆ. ಅದಕ್ಕೆ ಸಹಿ ಹಾಕಿ ಕಳಿಸಿ ಅಂದರು. ಸಣ್ಣು ಹುಡುಗರಂತೆ ಚೈಲ್ಡಿಷ್ ಆಗಿ ಹೇಳಿ ನನಗೆ ಅಪಮಾನ ಮಾಡಿದ್ರು. ಒಬಿಡಿಯಂಟ್ ಇದಾರೆ, ಸುಮ್ಮನೇ ಒಪ್ಪಿಕೊಳ್ತಾರೆ ಅಂತ ಲೆಕ್ಕ ಹಾಕಿದರು. ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ …

Read More »

ಬಿ.ಎಲ್.ಸಂತೋಷ್ ವಿರುದ್ಧ ಹರಿಹಾಯ್ದ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಅಂತಾರೆ. ಆದ್ರೆ ಇಲ್ಲ ಒಬ್ಬನೇ ವ್ಯಕ್ತಿ ಮುಖ್ಯವಾಗಿದ್ದಾನೆ. ಬಿಜೆಪಿ ಕಛೇರಿಯನ್ನು ಕಪಿಮುಷ್ಟಿಯಲ್ಲಿಟ್ಟು ಕೊಂಡಿದ್ದಾನೆ. ಸುರಾನಾ ಈಗ ಎಂ.ಎಲ್.ಸಿ. ಯಡಿಯೂರಪ್ಪ ಸಿಎಂ ಆದ ಮೇಲೆ ಆತನನ್ನ ಕಛೇರಿಯೊಳಗೆ ಬಿಟ್ಟುಕೊಂಡಿದ್ದಾನೆ. ಪ್ರತಿ ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ಮಾಡಿದ್ದಾನೆ. ರಾಮದಾಸ್ ಸಂತೋಷ್ ಆಪ್ತನಲ್ಲ. ಹಾಗಾಗಿ ಆತನಿಗೆ ಟಿಕೇಟ್ ಸಿಗಲಿಲ್ಲ. ಶ್ರೀವತ್ಸ ಅನ್ನೋರಿಗೆ ಟಿಕೇಟ್ ಕೊಟ್ಟರು. ಅವರು ಗೆದ್ದು ಬರ್ತಾರಾ..? ಬೇರೆ ಕ್ಷೇತ್ರಗಳಲ್ಲಿಯೂ ಇದೇ ರೀತಿ ಮಾಡಿದ್ದಾರೆ …

Read More »

ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿತು. ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ನಳಿನ್ ಕಟೀಲ …

Read More »

ಮೋದಿಯವರ ಕಾರ್ಯವೈಖರಿಯನ್ನು ಕೊಂಡಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಹುಬ್ಬಳ್ಳಿ: ಬಿಜೆಪಿಯನ್ನು ಭದ್ರಗೋಳಿಸಲು ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಂಡಾಡಿದ್ದಾರೆ. ಮೋದಿಯವರ ನೇತ್ರತ್ವದಲ್ಲಿ ದೇಶ ಒಂದು ದೀರ್ಘ ನೆಗೆತ ಕಂಡಿದೆ. ಕಾಂಗ್ರೆಸ್‌ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತಾ ಒಡೆಯುತ್ತಾ ತಾವೇ ಒಡೆದು ಹೋಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಒಡೆದು ಹೋಗಿದ್ದಾರೆ. ಕಾಂಗ್ರೆಸ್‌ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದರು. ಪ್ರಧಾನಿಗಳು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾರತದ ರಾಜಕೀಯದ …

Read More »

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದ ಭಗವಂತ್ ಮಾನ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕಣಕ್ಕೆ ಇಳಿದಿದ್ದರು. ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದರು. ಬಳಿಕ ಸಾಯಂಕಾಲ ಟೆಂಪಲ್ ರನ್ ನಡೆಸಿದರು. ದೇಶಪಾಂಡೆ ನಗರದಲ್ಲಿರುವ ಗುರಯದ್ವಾರಕ್ಕೆ ಭೇಟಿ ನೀಡಿ‌ ಪ್ರಾರ್ಥನೆ ಸಲ್ಲಿಸಿದರು‌. ಬಳಿಕ ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಳೇ ಹುಬ್ಬಳ್ಳಿಯ ಪತೇಶಾವಲಿ …

Read More »

ಜೋಶಿ ನೇತೃತ್ವದಲ್ಲಿ ಗೌಪ್ಯ ಸಭೆ!

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಗೋಕಲ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ, ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಗೌಪ್ಯ ಸಭೆ ನಡೆಯುತ್ತಿದೆ. ಈ ಗೌಪ್ಯ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ್, ಪಾಲಿಕೆ ಉಪ ಮೇಯರ್ ಉಮಾ ಮುಖುಂದ, ಶಿವು ಮೆಣಸಿನಕಾಯಿ, ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ವೀರಣ್ಣ ಸವಡಿ, ಸಂತೋಷ ಚಹ್ವಾಣ, ಸೇರಿದಂತೆ ಬಿಜೆಪಿ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಬಿಜೆಪಿಯವರೇ ನಿರ್ಧರಿಸಿದಂತಿದೆ- ಜಗದೀಶ್ ಶೆಟ್ಟರ

ಹುಬ್ಬಳ್ಳಿ: ಮೇ 13 ಕ್ಕೆ ಫಲಿತಾಂಶ ಬರುತ್ತೆ. ಆವಾಗ ನಾನು ಏನು ಅಂತ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಜಗದೀಶ್ ಶೆಟ್ಟರ್ ತಿರುಗೇಟು. ಬಿಜೆಪಿ ಕ್ಷೇತ್ರ ಅನ್ನೋ ರೀತಿಯಲ್ಲಿ ನಾನು ಸಂಘಟಿಸಿದೆ. ಹಲವಾರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಕೊಂಡು ಬಂದಿದ್ದೇನೆ. ಇಡೀ ರಾಜ್ಯ ಸುತ್ತು ಹಾಕಿದ್ದೇನೆ. ಅದೇ ಕಾರಣಕ್ಕೆ ನನ್ನನ್ನ ಲಿಂಗಾಯಿತ ಲೀಡರ್ ಅಂತಾರೆ. ಇವರು ಎಷ್ಟರ ಮಟ್ಟಿಗೆ ಗೆಲ್ಲಿಸಿದ್ದಾರೆ. ತಮಗೆ ತಾವೇ ಲಿಂಗಾಯಿತ ಲೀಡರ್ ಅಂದ್ರ ಪ್ರಯೋಜನವಿಲ್ಲ. ಬಿಜೆಪಿಯ …

Read More »

ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ನಿಂದ ಏನೂ ಆಗಲ್ಲ- ಅರವಿಂದ ಬೆಲ್ಲದ್

ಹುಬ್ಬಳ್ಳಿ : ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಲಿಂಗಾಯತರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ. ಲಿಂಗಾಯತ, ವೀರಶೈವರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದು ಬಿಜೆಪಿ. ಕಾಂಗ್ರೆಸ್ ಲಿಂಗಾಯತರ ಮುಖ್ಯಮಂತ್ರಿ ಎಂದು ಹೇಳಲಿ ನೊಡೋಣ. ನಮ್ಮ ಧರ್ಮ ಒಡೆದಿದ್ದು ಕಾಂಗ್ರೆಸ್. ಬಿಜೆಪಿ ಶೆಟ್ಟರ್ ಅವರನ್ನು ಲಿಂಗಾಯತ ನಾಯಕ ಎಂದು ಬೆಳಸಲಿಲ್ಲ. ಶೆಟ್ಟರ್ ಬೆಳದಿದ್ದು, ಪಕ್ಷದ ತತ್ವ ಸಿದ್ದಾಂತದಿಂದ. ಕೆಲ ಕಾರ್ಯಕರ್ತರು ಜೀವ ಕೊಟ್ಟಿದ್ದಾರೆ. ಲಿಂಗಾಯತ …

Read More »

ನಮ್ಮ ಯಜಮಾನರ ನಿರ್ಣಾಯಕ್ಕೆ ನಾನು ಬದ್ದ ಎಂದು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಶಿಲ್ಪಾ ಶೆಟ್ಟರ್

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಿದ ಜಗದೀಶ್ ಶೆಟ್ಟರ್ ಗೆ ಬಿಜೆಪಿಯಲ್ಲಿ ಬಾರಿ ಅಪಮಾನ ಮಾಡಲಾಗಿದೇ ಆದ್ದರಿಂದ ನನಗೆ ಬಹಳ ನೋವುಂಟು ಮಾಡಿದೇ ಎಂದು ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ ಘಟನೆ ನಡೆದಿದೆ. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೇ ಈಗ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದ್ದು, ಪತ್ನಿ ಶಿಲ್ಪಾ ಶೆಟ್ಟರ್ ತಮ್ಮ ಪತಿ ಬಗ್ಗೆ ಮನದಾಳದ ಮಾತನ್ನಾಡಿದ್ದಾರೆ. ಸುಮಾರು ವರ್ಷಗಳಿಂದ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೇಳುವ …

Read More »