Breaking News

ಹುಬ್ಬಳ್ಳಿ ಸುದ್ದಿ

ಬಿಜೆಪಿಯಲ್ಲಿರೋ ಉತ್ಸಾಹ ಕಾಂಗ್ರೆಸ್ ನಲ್ಲಿ ನಾನು ನೋಡಿಲ್ಲ-ನಾಗರಾಜ್ ಛಬ್ಬಿ

ಹುಬ್ಬಳ್ಳಿ: ಕಲಘಟಗಿ ಟಿಕೆಟ್ ಕೊನೆಗೂ ನಾಗರಾಜ್ ಛಬ್ಬಿ ಪಾಲಾಗಿದೆ. ಇದರಿಂದ ಹಾಲಿ ಶಾಸಕ ಸಿಎಂ ನಿಂಬಣ್ಣವರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಾಸಕ ಸಿಎಮ್ ನಿಂಬಣ್ಣವರ ಮನೆಗೆ ಭೇಟಿ ನೀಡಿದ ನಾಗರಾಜ್ ಛಬ್ಬಿ, ಸಿ ಎಂ ನಿಂಬಣ್ಣವರ್ ಕಾಲು ಮುಟ್ಟಿ ನಮಸ್ಕಾರ ಮಾಡಿ, ನಿಂಬಣ್ಣವರ್ ಮನವೊಲಿಕೆ ಮಾಡಿ ಚರ್ಚೆ ನಡೆಸಿದರು. ಟಿಕೆಟ್ ವಂಚಿತ ಶಾಸಕ ಸಿಎಮ್ ನಿಂಬಣ್ಣನವರ್ ಮಾತನಾಡಿದ್ದು, ನಾಗರಾಜ ಛಬ್ಬಿ ನನ್ನ ಮನೆಗೆ ಬಂದಿದ್ದರು, ಅತಿಥಿಗಳು ಮನೆಗೆ ಬಂದಾಗ ಸತ್ಕಾರ ಮಾಡುವ …

Read More »

ನಮ್ಮದು ರಾಷ್ಟ್ರೀಯ ಪಕ್ಷ ರಾತ್ರಿ ಬಿಜೆಪಿ ಪಟ್ಟಿ ಬಿಡುಗಡೆ ಆಗಬಹುದು- ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಇವತ್ತು ರಾತ್ರಿ ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಇವತ್ತು ಸಾಯಂಕಾಲ‌ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ. ಇವತ್ತು ರಾತ್ರಿ ಮೊದಲ‌ ಪಟ್ಟಿ ಬಿಡುಗಡೆ ಆಗಬಹುದು. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಮ್ಮ ಲಿಸ್ಟ್ ಬಿಡುಗಡೆ ಆಗಿದೆ. ಹಿಂದಿನ ಚುನಾವಣೆಯಲ್ಲೂ ಇದೇ ತರಹ ಆಗಿದೆ. ಹೀಗಾಗಿ ವಿಳಂಬ ಅನ್ನೋ ಪ್ರಶ್ನೆ ಬರಲ್ಲ. ಕಾಂಗ್ರೆಸ್ ಒಂದು ತಿಂಗಳ …

Read More »

ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಮಾತನಾಡಿರುವ ಶಾಸಕ ಅಮೃತ ದೇಸಾಯಿ

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಬಹಿರಂಗ ಸವಾಲಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಡುತ್ತಿದ್ದಾರೆ. ಬಾರೋ ಅಂತ ಕರೆದವರು ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಶಾಸಕ ಅಮೃತ ದೇಸಾಯಿ, ಈಗಲೂ ಅವರಿಗೆ ಬಾರೋ ಅಂತಲೇ ಕರೆಯುತ್ತೇನೆ. ಅವರು …

Read More »

ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ ಆತಂಕ ಕಳವಳ ವಿರೋಧಿಗಳಿಗೆ ಕಾಡುತ್ತಿದೆ- ಸಿಎಂ

ಹುಬ್ಬಳ್ಳಿ: ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ, ಆತಂಕ, ಕಳವಳ ವಿರೋಧಿಗಳಿಗೆ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಅವರನ್ನು ಸ್ಟಾರ್ ಪ್ರಾಚಾರಕರಾಗಿ ತೆಗೆದುಕೊಂಡ ಹಿನ್ನೆಲೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ, ಸ್ಟಾರ್ ನಟರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಕೆ ಮಾಡುವುದು ಹೊಸದಲ್ಲ, ದೇಶದಾದ್ಯಂತ ನಡೆದಿದೆ. ಇದೀಗ ರಾಜ್ಯದಲ್ಲಿ ಆಗತ್ತಿದೆ. …

Read More »

ಪತ್ತೆ ಮಾಡಿದ ಮೊಬೈಲ್ ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಿದ ಪೊಲೀಸ್ ಕಮೀಷನರೇಟ್

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರ ಮೊಬೈಲ್ ಪತ್ತೆ ಮಾಡಿ ಹಸ್ತಾಂತರ ಮಾಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಸುಮಾರು 400 ಮೊಬೈಲ್ ಹಸ್ತಾಂತರ ಮಾಡಲಾಯಿತು. ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮವನ್ನು ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕ್ಯಾಂಪಸ್ ಆವರಣದಲ್ಲಿ ಆಯೋಜಿಸಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೆಶಕ ಪ್ರವೀಣ ಸೂದ್ ನೇತೃತ್ವದಲ್ಲಿ …

Read More »

ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತ: ಸಿಎಂ

ಹುಬ್ಬಳ್ಳಿ: ಸ್ಥಾನಮಾನ ಶಾಶ್ವತವಲ್ಲ. ನಿಮ್ಮ ಹೃದಯದಲ್ಲಿ ಒಂದು ಸ್ಥಾನವನ್ನು ಮಾಡಿದ್ದೇನೆ ಅದೇ ನನಗೆ ಶಾಶ್ವತ. ಕೋಟಿಗಟ್ಟಲೆ ನಮ್ಮ ಬಂಧುಗಳಿದ್ದಾರೆ. ನಿಮಗೆ ಒಂದು ಅಳಿಲು ಸೇವೆಯನ್ನು ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರ ಭಾವುಕವಾಗಿ ನುಡಿದಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಐದು ವರ್ಷ ಬಾವಿಯಲ್ಲಿ ಇಳಿದು ಚುನಾವಣೆ ಬಂದಾಗ ಮಾತ್ರ ಮೇಲೆ ಬರುವುದು ಚುನಾವಣೆ ಮುಗಿಸಿ ಬಾವಿ ಸೇರುವುದನ್ನು ಕಾಂಗ್ರೆಸ್ ಮಾಡಿದೆ. ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಮಾಡುತ್ತಿದೆ ಎಚ್ಚರಿಕೆ …

Read More »

ಕಾಂಗ್ರೆಸ್ ಪಕ್ಷದವರು ಶೋಷಿತರನ್ನು ಸುಟ್ಟು ರೊಟ್ಟಿ ಮಾಡಿಕೊಂಡು ತಿನ್ನುವವರು- ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ಶೋಷಿತ ವರ್ಗಗಳಿಗೆ ಅನ್ಯಾಯ ಮಾಡಿರುವ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೂ ಕೂಡ ಸಾಕಷ್ಟು ಅಡೆತಡೆಗಳನ್ನು ಉಂಟು ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಡುವ ಮನೆ ಅಲ್ಲಿ ಯಾರು ಕೂಡ ಹೋಗಬಾರದು ಎಂದು ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ್ದಾರೆ. ಹಸಿರುಕ್ರಾಂತಿ ಹರಿಕಾರ ಜಗಜೀವನರಾಮ್ ಅವರಿಗೆ ಅನ್ಯಾಯ ಮಾಡಿದವರು ಕಾಂಗ್ರೆಸ್ ಪಕ್ಷ. …

Read More »

ಸೈಬರ್ ಪ್ರಕರಣಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು- ಪ್ರವೀಣ ಸೂದ್

ಹುಬ್ಬಳ್ಳಿ: ಸೈಬರ್ ಕ್ರೈಮ್ ವಂಚನೆಗೆ ಒಳಗಾದವರು ಒಂದು ಗಂಟೆಯ ಒಳಗಾಗಿಯೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೇ ಸೈಬರ್ ವಂಚನೆಗಳು ಪೇಸ್ ಲೇಸ್ ಪ್ರಕರಣಗಳಾಗಿದ್ದು, ಜನರು ವ್ಯವಹಾರ ಮಾಡುವಾಗ ಸಾಕಷ್ಟು ಜಾಗರೂಕತೆಯಿಂದ ಮಾಡಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸೈಬರ್ ಪ್ರಕರಣಗಳಲ್ಲಿ ಸಾರ್ವಜನಿಕರ ಎಚ್ಚರಿಕೆಯಿಂದ ಇರಬೇಕು. ಪ್ರಕರಣ ನಡೆದ ತಕ್ಷಣವೇ 1930ಗೆ ಕರೆ ಮಾಡಿ ದೂರನ್ನು ನೀಡಬೇಕು …

Read More »

ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದ ಕೇಂದ್ರ ಹಾಗೂ ರಾಜ್ಯ ಸಚಿವರು

ಹುಬ್ಬಳ್ಳಿ; ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ದೀಪ ಬೆಳಗಿಸಿದ ಬಳಿಕ ಹಲಗೆ ಬಾರಿಸುವ …

Read More »

ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ, ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲು ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ನಡೆದಿದೆ. ಶಿವಪ್ಪ ಯಾವಗಲ್ ಎನ್ನುವ ರೈತನಿಗೆ ಸೇರಿದ ಬಣವೆಗಳಾಗಿದ್ದು, ಜಾನುವಾರುಗಳಿಗೆ ಸಂಗ್ರಹಣೆ ಮಾಡಿಲಾಗಿತ್ತು ಎನ್ನಲಾಗಿದೆ. ಅಗ್ನಿ ಶಾಮದ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ರೋಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕಂಡು ಬಂದಿದೆ.

Read More »